ಝಜ್ಜರ್(ಹರಿಯಾಣ): ಡಿಸಿಎಂ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಜಲಫಿರಂಗಿಗಳನ್ನು ಬಳಸಿ, ಪ್ರತಿಭಟನಾಕಾರರನ್ನು ಚದುರಿಸಿರುವ ಘಟನೆ ಹರಿಯಾಣದ ಝಜ್ಜರ್ ಎಂಬಲ್ಲಿ ನಡೆದಿದೆ.
ಝಜ್ಜರ್ ಎಂಬಲ್ಲಿ ಹರಿಯಾಣ ಡಿಸಿಎಂ ದುಶ್ಯಂತ್ ಚೌಟಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ರೈತರ ತಂಡ ದುಶ್ಯಂತ್ ಚೌಟಾಲಾ ವಿರುದ್ಧ ಘೋಷಣೆಗಳನ್ನು ಕೂಗಿ, ಬ್ಯಾರಿಕೇಡ್ಗಳನ್ನು ತಳ್ಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಸಾಕಷ್ಟು ಹರಸಾಹಸ ನಡೆಸಿ, ಪ್ರತಿಭಟನಾಕರರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದು, ಕೊನೆಗೆ ಜಲಫಿರಂಗಿಯನ್ನು ಉಪಯೋಗಿಸಿ ಸ್ಥಳದಲ್ಲಿದ್ದ ಪ್ರತಿಭಟನಾಕರರನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಪ್ರತಿಭಟನಾಕಾರನೊಬ್ಬ ಪ್ರತಿಕ್ರಿಯೆ ನೀಡಿದ್ದು, ಭಾರಿ ಮಳೆಯಿಂದ ರೈತರು ಬೆಳೆದಿದ್ದ ಬೆಳೆ ನಾಶವಾಗಿದೆ. ಈ ಕುರಿತು ಸಭೆ ನಡೆಸದೇ ಡಿಸಿಎಂ ಇಲ್ಲಿನ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ ಸಂಘರ್ಷಕ್ಕೆ 'ಗಾಂಧಿಗಳೇ' ಜವಾಬ್ದಾರಿ : ಕಾಂಗ್ರೆಸ್ ಹಿರಿಯ ನಾಯಕ ನಟವರ್ ಸಿಂಗ್