ನವ ದೆಹಲಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿರುವ ಪತ್ನಿಗೆ ವೃತ್ತಿಯಲ್ಲಿ ವಕೀಲನಾಗಿರುವ ಪತಿ ಮನ ಬಂದಂತೆ ಥಳಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಆರೋಪಿ ಪತಿ, ಬರ್ವಾಲಾ ಗ್ರಾಮದ ನಿವಾಸಿ ತರುಣ್ ದಾಬಸ್ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ನವೆಂಬರ್ 11 ರಂದು ಪತಿ ತನ್ನ ಸಹಚರರೊಂದಿಗೆ ಮೂರು ವಾಹನಗಳಲ್ಲಿ ಬಂದು ನನ್ನ ಮತ್ತು ಸಹೋದರಿಗೆ ಥಳಿಸಿ ಬೆದರಿಕೆ ಹಾಕಿದ್ದಾನೆ ಎಂದು ನಜಾಫ್‌ಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಘಟನೆಗೂ ಮುನ್ನ ಆಗಾಗ್ಗೆ ಆರೋಪಿ ಅನುಚಿತವಾಗಿ ವರ್ತಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿ ಮಹಿಳೆ ಜಂಟಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದಾದ ನಂತರ ತರುಣ್ ದಾಬಸ್ ನಿರಂತರವಾಗಿ ಕೊಲೆ ಬೆದರಿಕೆ ಹಾಕಲಾರಂಭಿಸಿದ್ದಾನೆ. ಹೀಗಾಗಿ ತನಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
-
दिल्ली पुलिस की सब इंस्पेक्टर के साथ उसका पति कई महीनो से मार पीट कर रहा है पर कोई एक्शन नहीं हुआ। पुलिस ही ट्विटर पर मदद माँगने को मजबूर है!
— Swati Maliwal (@SwatiJaiHind) December 12, 2022 " class="align-text-top noRightClick twitterSection" data="
मैं दिल्ली पुलिस को नोटिस इशू कर रही हूँ, सख़्त कार्यवाही होनी चाहिए। पुलिस ही सुरक्षित नहीं होंगी तो आम महिला कैसे सुरक्षित होंगी? https://t.co/O0HmffkMlp
">दिल्ली पुलिस की सब इंस्पेक्टर के साथ उसका पति कई महीनो से मार पीट कर रहा है पर कोई एक्शन नहीं हुआ। पुलिस ही ट्विटर पर मदद माँगने को मजबूर है!
— Swati Maliwal (@SwatiJaiHind) December 12, 2022
मैं दिल्ली पुलिस को नोटिस इशू कर रही हूँ, सख़्त कार्यवाही होनी चाहिए। पुलिस ही सुरक्षित नहीं होंगी तो आम महिला कैसे सुरक्षित होंगी? https://t.co/O0HmffkMlpदिल्ली पुलिस की सब इंस्पेक्टर के साथ उसका पति कई महीनो से मार पीट कर रहा है पर कोई एक्शन नहीं हुआ। पुलिस ही ट्विटर पर मदद माँगने को मजबूर है!
— Swati Maliwal (@SwatiJaiHind) December 12, 2022
मैं दिल्ली पुलिस को नोटिस इशू कर रही हूँ, सख़्त कार्यवाही होनी चाहिए। पुलिस ही सुरक्षित नहीं होंगी तो आम महिला कैसे सुरक्षित होंगी? https://t.co/O0HmffkMlp
ಹಲ್ಲೆಯ ವಿಡಿಯೋವನ್ನು ಟ್ವೀಟ್ ಮಾಡಿ, ನಾನು ದೆಹಲಿಯಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿದ್ದು, ಹೆರಿಗೆ ರಜೆಯಲ್ಲಿದ್ದೇನೆ. ಈ ಸಮಯದಲ್ಲಿ ನನ್ನ ಪತಿ ವಕೀಲರಾದ ತರುಣ್ ದಾಬಾಸ್ ಮನೆಗೆ ಬಂದು ನನ್ನನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಘಟನೆಯ ಕುರಿತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ, 'ಸಹಾಯ ಪಡೆಯಲು ಪೊಲೀಸರೇ ಒತ್ತಾಯಿಸಿದ್ದಾರೆ! ನಾನು ದೆಹಲಿ ಪೊಲೀಸರಿಗೆ ನೋಟಿಸ್ ನೀಡುತ್ತಿದ್ದೇನೆ. ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರು ಸುರಕ್ಷಿತವಾಗಿಲ್ಲದಿದ್ದರೆ ಸಾಮಾನ್ಯ ಮಹಿಳೆಯರು ಹೇಗೆ ಸುರಕ್ಷಿತವಾಗಿರುತ್ತಾರೆ? ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಂಡತಿ ನಿಂದನೆ: ಆಡಿಯೋ ವೈರಲ್ ಬೆನ್ನಲ್ಲೇ ಗಂಡ ಆತ್ಮಹತ್ಯೆ