ETV Bharat / bharat

ಬ್ಯೂಟಿಷಿಯನ್ ಬ್ಯೂಟಿ ಜೊತೆ ವಿವಾಹೇತರ ಸಂಬಂಧ.. 3 ತಿಂಗಳ ಹಿಂದೆ ಮದುವೆಯಾಗಿದ್ದ ಎಸ್​ಐ ಆತ್ಮಹತ್ಯೆ!

author img

By

Published : Jan 20, 2021, 10:40 AM IST

ಬ್ಯೂಟಿಷಿಯನ್ ಬ್ಯೂಟಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎಸ್​ಐ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

Police Sub inceptor committed suicide, Police Sub inceptor committed suicide in Krishna district, Gudivada SI suicide, Gudivada SI suicide news, Gudivada SI Pilli Vijaya Kumar suicide, Gudivada SI Pilli Vijaya Kumar suicide news, ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ, ಕೃಷ್ಣ ಜಿಲ್ಲೆಯಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆತ್ಮಹತ್ಯೆ, ಗುಡಿವಾಡ ಎಸ್​ಐ ಆತ್ಮಹತ್ಯೆ, ಗುಡಿವಾಡ ಎಸ್​ಐ ಆತ್ಮಹತ್ಯೆ ಸುದ್ದಿ,
ಆತ್ಮಹತ್ಯೆಗೆ ಶರಣಾದ ನವವಿವಾಹಿತ ಎಸ್​ಐ

ಕೃಷ್ಣ: ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಎಸ್​ಐವೊಬ್ಬರು ವಿವಾಹೇತರ ಸಂಬಂಧಕ್ಕೆ ಬಲಿಯಾಗಿದ್ದಾರೆ.

ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾದ ಎಸ್​ಐ. ಇವರ ಸಾವಿಗೆ ವಿವಾಹೇತರ ಸಂಬಂಧವೇ ಕಾರಣ ಎಂದು ಸಹೋದ್ಯೋಗಿಗಳು ಶಂಕಿಸಿದ್ದಾರೆ.

ಆತ್ಮಹತ್ಯೆಗೆ ಶರಣಾದ ನವವಿವಾಹಿತ ಎಸ್​ಐ

ಎಲುರಿನ ವಿಜಯ್ ಕುಮಾರ್ 2021 ಬ್ಯಾಚ್​ನ ಎಸ್​ಐ ಆಗಿ ಕೃಷ್ಣ ಜಿಲ್ಲೆಯ ಹನುಮಾನ್ ಜಂಕ್ಷನ್‌ನಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡರು. ಆ ಸಮಯದಲ್ಲಿ ವಿಜಯ್ ಕುಮಾರ್​​​ಗೆ ನೂಜೀದು ಮೂಲದ ಬ್ಯೂಟಿಷಿಯನ್ ಜೊತೆ ಪರಿಚಯವಾಗಿತ್ತು. ಈ ಪರಿಚಯ ಅವರಿಬ್ಬರ ಮಧ್ಯೆ ವಿವಾಹೇತರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು.

ಬ್ಯೂಟಿಷಿಯನ್​ ಪತಿಗೆ ಇವರಿಬ್ಬರ ಮ್ಯಾಟರ್​​ ಗೊತ್ತಾಗಿತ್ತು. ಆಗ ಆಕೆಯ ಪತಿ ಪೊಲೀಸ್​ ಇಲಾಖೆಗೆ ದೂರು ನೀಡಿದ್ದರು. ವಿವಾಹೇತರ ಸಂಬಂಧ ಹೊಂದಿದ್ದ ಆರೋಪದ ಮೇಲೆ ವಿಜಯ ಕುಮಾರ್ ಪೊಲೀಸ್​ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

ಅಮಾನತು ತೆಗೆದುಹಾಕಿದ ನಂತರ ವಿಜಯ್ ಕುಮಾರ್ ಗುಡಿವಾಡ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕುಮಾರ್ ಕಳೆದ ಮೂರು ತಿಂಗಳ ಹಿಂದೆ ಎಲೂರು ಮೂಲದ ಯುವತಿಯನ್ನು ಮದುವೆಯಾಗಿದ್ದರು. ತನ್ನ ಪತ್ನಿಯನ್ನು ಸಂಸಾರಕ್ಕೆ ಕರೆತರುವ ಪ್ರಯತ್ನ ಮಾಡಲಿಲ್ಲ. ವಿಜಯ್​ ಕುಮಾರ್​ ಬ್ಯೂಟಿಷಿಯನ್ ಜೊತೆನೇ ಅಪಾರ್ಟ್ಮೆಂಟ್​ವೊಂದರಲ್ಲಿ ಸಹಜೀವನ ನಡೆಸುತ್ತಿದ್ದರು.

ಮದುವೆ ವಿಷಯ ಬ್ಯೂಟಿಷಿಯನ್​ಗೆ ಗೊತ್ತಾಗಿದೆ. ನಿತ್ಯ ಆಕೆ ಎಸ್​ಐ ಮೇಲೆ ಒತ್ತಡ ಹಾಕುತ್ತಿದ್ದಳು. ಹೀಗಾಗಿ ವಿಜಯ್ ಕುಮಾರ್ ಮನಸ್ತಾಪಗೊಂಡು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ವಿಜಯ್ ಕುಮಾರ್ ಮೃತದೇಹವನ್ನು ಪೊಲೀಸರು ಗುಡಿವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೃಷ್ಣ ಜಿಲ್ಲೆ ಗುಡಿವಾಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಎಸ್‌ಪಿ ರವೀಂದ್ರಬಾಬು ಎಸ್‌ಐ ವಿಜಯ್ ಕುಮಾರ್​ನ ಶವವನ್ನು ಪರೀಕ್ಷಿಸಿದರು. ಎಸ್​ಐ ವಿಜಯ್ ಕುಮಾರ್ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ವಿಜಯ್ ಕುಮಾರ್ ಸಾವಿನ ಬಗ್ಗೆ ಎಲ್ಲ ನಿಟ್ಟಿನಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿಜಯಕುಮಾರ್ ಸಾವಿನ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇಲಾಖೆಯಲ್ಲಿ ಅವರ ಒಳ್ಳೆಯ ಹೆಸರಿದೆ. ವಿಜಯ್ ಕುಮಾರ್ ಚಿಕ್ಕ ವಯಸ್ಸಿನಲ್ಲಿ ಸಾಯುವುದು ದುಃಖದ ವಿಷಯುವಾಗಿದೆ. ತನಿಖೆಯ ನಂತರ ಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಎಸ್ಪಿ ರವೀಂದ್ರ ಬಾಬು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.