ETV Bharat / state

ಕೇರಳ ಲಾರಿ ಚಾಲಕ ಅರ್ಜುನ್​ ಮೃತದೇಹ ತಾಯ್ನಾಡಿಗೆ: ಅಂತಿಮ ದರ್ಶನ ಪಡೆದ ಗಡಿಭಾಗದ ಜನತೆ - last respect to Arjun - LAST RESPECT TO ARJUN

ಶಿರೂರು ದುರಂತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್​​ ಅವರ ಅಂತಿಮ ದರ್ಶನಕ್ಕಾಗಿ ಗಡಿಭಾಗ ತಲಪಾಡಿಯಲ್ಲಿ ಜನಸ್ತೋಮ ಸೇರಿತ್ತು.

ಕೇರಳ ಲಾರಿ ಚಾಲಕ ಅರ್ಜುನ್  ಅಂತಿಮ ದರ್ಶನ
ಕೇರಳ ಲಾರಿ ಚಾಲಕ ಅರ್ಜುನ್ ಅಂತಿಮ ದರ್ಶನ (ETV Bharat)
author img

By ETV Bharat Karnataka Team

Published : Sep 28, 2024, 12:58 PM IST

Updated : Sep 28, 2024, 2:23 PM IST

ಉಳ್ಳಾಲ: ಶಿರೂರು ಗುಡ್ಡ ದುರಂತದಲ್ಲಿ ಸಾವನ್ನಪ್ಪಿದ ಕೇರಳ ಕಲ್ಲಿಕೋಟೆ ಮೂಲದ ಅರ್ಜುನ್ (35) ಮೃತದೇಹ 72 ದಿನಗಳ ನಂತರ ಪತ್ತೆಯಾಗಿ ಡಿಎನ್​ಎ ವರದಿ ಸಾಬೀತಾಗಿದೆ. ಈ ಹಿನ್ನೆಲೆ ನಿನ್ನೆ ಕೇರಳದ ಮನೆಗೆ ಕೊಂಡೊಯ್ಯುವ ಸಂದರ್ಭ ಗಡಿಭಾಗ ತಲಪಾಡಿಯಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಅಂತಿಮ ದರ್ಶನ ಪಡೆದರು.

ಶುಕ್ರವಾರ ಸಂಜೆ ವೇಳೆ ಅಂಕೋಲಾದಿಂದ ಫ್ರೀಝರ್​ ಆಂಬ್ಯುಲೆನ್ಸ್ ಮೂಲಕ ಮೃತ ಲಾರಿ ಚಾಲಕ ಅರ್ಜುನ​ರ ಅಂತಿಮ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಕರ್ನಾಟಕ-ಕೇರಳ ಗಡಿಭಾಗ ತಲುಪುವಾಗ ತಡರಾತ್ರಿ 2.00 ಗಂಟೆಯಾಗಿತ್ತು. ಈ ವೇಳೆ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ನಿವಾಸಿಗಳು ಜಮಾಯಿಸಿದ್ದರು.

ಕೇರಳ ಲಾರಿ ಚಾಲಕ ಅರ್ಜುನ್​ ಮೃತದೇಹ ತಾಯ್ನಾಡಿಗೆ (ETV Bharat)

ಆಂಬ್ಯುಲೆನ್ಸ್​ ಟೋಲ್ ಬೂತ್ ದಾಟಿ ನಂತರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಹೂಗುಚ್ಛಗಳನ್ನು ಮೃತದೇಹದ ಮೇಲೆ ಇಡುವ ಮೂಲಕ ಅಂತಿಮ ದರ್ಶನ ಪಡೆದುಕೊಂಡು ಗೌರವ ಸಲ್ಲಿಸಿದರು. ಇದೇ ವೇಳೆ ಆಂಬ್ಯುಲೆನ್ಸ್​​ನಲ್ಲಿದ್ದ ಸಮಾಜಸೇವಕ, ಅರ್ಜುನ್​ಗಾಗಿ ಜೀವದ ಹಂಗು ತೊರೆದು ನೆರೆ ನೀರಿನ ನಡುವೆ ನದಿಯಾಳಕ್ಕೆ ಮುಳುಗಿ ಹುಡುಕಾಡಿದ ಆಪದ್ಬಾಂಧವ ಈಶ್ವರ್ ಮಲ್ಪೆ ಅವರಿಗೂ ಗಡಿಭಾಗದ ಜನತೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಲೀಗ್​ ಸಮಿತಿ ಹಾಗೂ ಜನಪ್ರತಿನಿಧಿಗಳಿಂದ ಅಂತಿಮ ನಮನ: ಪೈವಳಿಕೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕೈಯ್ಯಾರ್ ಮಾತನಾಡಿ, "ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಹುತೇಕ ಜನಪ್ರತಿನಿಧಿಗಳು ಅರ್ಜುನನ ಅಂತಿಮ ಸಂಸ್ಕಾರಕ್ಕಾಗಿ ಸೇರಿದ್ದೇವೆ. ಕರ್ನಾಟಕ ಸರ್ಕಾರ ರೂ.5 ಲಕ್ಷ ಪರಿಹಾರ ಘೋಷಿಸಿದೆ. ಅದರಂತೆ ಕೇರಳ ಸರ್ಕಾರವೂ ಪರಿಹಾರವನ್ನು ನೀಡುವ ವಿಶ್ವಾಸವನ್ನು ಮುಂದಿಟ್ಟಿದೆ. ಮೃತರಿಗಾಗಿ ಅಂತಿಮ ನಮನವನ್ನು ಎಲ್ಲಾ ಬ್ಲಾಕ್ ಸದಸ್ಯರುಗಳು ಸಲ್ಲಿಸುತ್ತಿದ್ದೇವೆ. ಮೃತ ಸಹೋದರನ ಮನೆಮಂದಿಗೆ ದು:ಖ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ" ಎಂದು ಹಾರೈಸಿದರು.

ಪರಿಹಾರ ಚೆಕ್​ ಮತ್ತು ಮೃತದೇಹ ತಲುಪಿಸಲು ಶಾಸಕ ಸತೀಶ್​ ಸೈಲ್​ ಸಾಥ್​​: ಅಂಕೋಲಾ ಶಾಸಕ ಸತೀಶ್ ಸೈಲ್ ಮಾತನಾಡಿ, "ಶಿರೂರು ಗುಡ್ಡ ಕುಸಿತ ಪ್ರಕರಣ ರಾಜ್ಯದಲ್ಲೇ ವಿಚಿತ್ರ ಘಟನೆಯಾಗಿದ್ದು, ಘಟನೆಯಲ್ಲಿ 11 ಜನ ಮೃತಪಟ್ಟಿದ್ದು, ಕಳೆದ 71 ದಿನಗಳಲ್ಲಿ 3 ಹುಡುಕಾಟದಲ್ಲಿದ್ದೆವು. ಈ ಪೈಕಿ ಅರ್ಜುನ್​ ಮೃತದೇಹ ಲಾರಿಯೊಳಗಡೆ ದಿನಕ್ಕೆ ಪತ್ತೆಯಾಗಿದ್ದರೆ, ಸ್ಥಳೀಯ ಲೋಕೇಶ್ ಮತ್ತು ಜಗನ್ನಾಥ್ ಇಬ್ಬರು ಇನ್ನೂ ಪತ್ತೆಯಾಗಿಲ್ಲ. 71 ದಿನಗಳ ಸತತ ವಿವಿಧ ರೀತಿಯಲ್ಲಿ ನಡೆಸಿದ ಪ್ರಯತ್ನದಿಂದ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ".

"ಮಂಜೇಶ್ವರ ಶಾಸಕ ಶಿರೂರಿನಲ್ಲೇ ಇದ್ದು, ಕಾರ್ಯಾಚರಣೆಗೆ ಸಹಕರಿಸಿದ್ದರು. ಡ್ರಜ್ಜಿಂಗ್ ಯಂತ್ರವನ್ನು ತಂದು ಸತತವಾಗಿ ಹುಡುಕಾಡಿದ ಪರಿಣಾಮವಾಗಿ ಫಲಿತಾಂಶ ಸಿಕ್ಕಿದೆ. ಕರ್ನಾಟಕ ಸರ್ಕಾರ ರೂ.5 ಲಕ್ಷ ಪರಿಹಾರದ ಚೆಕ್ ಅನ್ನು ನೀಡಿದ್ದು, ಅದನ್ನು ಮತ್ತು ಅರ್ಜುನನ ಮೃತದೇಹವನ್ನು ಅವರ ಮನೆಗೆ ತಲುಪಿಸಿ ವಾಪಸಾಗುವವರಿದ್ದೇವೆ. ಸ್ಥಳೀಯ ಇಬ್ಬರ ಶೋಧ ಕಾರ್ಯ ವಿವಿಧ ಯಂತ್ರಗಳನ್ನು ತಂದು ನಡೆಸಲಾಗುತ್ತಿದೆ. ಅರ್ಜುನನ ವಿಚಾರದಲ್ಲಿ ಪರಮಾತ್ಮ ಕೊನೆಗೂ ಕಣ್ಣು ಬಿಟ್ಟಿದ್ದಾನೆ. ಮನುಷ್ಯನಿಗಾಗಿ ಹುಡುಕಾಡಿದ್ದೇವೆ, ಮೃತದೇಹಕ್ಕಾಗಿಯಲ್ಲ. ಆದರೆ ಮೃತದೇಹ ಪತ್ತೆಯಾಗುವ ಮೂಲಕ ಮೃತರ ಆತ್ಮಕ್ಕೆ ಮೋಕ್ಷ ಹಾಗೂ ಶಾಂತಿ ಸಿಕ್ಕಂತಾಗಿದೆ ಎಂದ ಅವರು ಕಾರ್ಯಾಚರಣೆ ವೇಳೆ ಸಹಕರಿಸಿದ ಎಲ್ಲಾ ಶಾಸಕರಿಗೆ ಸೇರಿದಂತೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ" ಎಂದರು.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ; 72 ದಿನಗಳ ಬಳಿಕ ಲಾರಿ ಸಹಿತ ಚಾಲಕ ಅರ್ಜುನ್ ಮೃತದೇಹ ಪತ್ತೆ - SHIRURU HILL COLLAPSE TRAGEDY

Last Updated : Sep 28, 2024, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.