ಮುಂಬೈ: ಮನ್ಸುಖ್ ಹಿರಾನಿ ನಿಗೂಢ ಸಾವಿನ ನಂತರ ಸಾಕಷ್ಟು ಸುದ್ದಿಯಲ್ಲಿದ್ದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಾಟ್ಸ್ಆ್ಯಪ್ ಸ್ಟೇಟಸ್ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಅವರ ಸ್ಟೇಟಸ್ನಲ್ಲಿರುವ ಮಾಹಿತಿಯಂತೆ ಮಾರ್ಚ್ 3, 2004 ರಂದು ಕೆಲವು ಅಧಿಕಾರಿಗಳು ನಕಲಿ ಪ್ರಕರಣದಲ್ಲಿ ನನ್ನನ್ನು ಬಂಧಿಸಿದ್ದಾರೆ ಎಂದು ಸಿಐಡಿ ಅಧಿಕಾರಿಗಳ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ನನ್ನ ಸಹೋದ್ಯೋಗಿಗಳು ನನ್ನನ್ನು ಮತ್ತೆ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. 17 ವರ್ಷಗಳಿಂದ ನನಗೆ ನಿರೀಕ್ಷೆಗಳು, ಸಹಿಷ್ಣುತೆ, ಜೀವನ ಮತ್ತು ಕೆಲಸವಿತ್ತು. ಆದರೆ ಈಗ ನನಗೆ ಆ 17 ವರ್ಷಗಳ ಜೀವನವೂ ಇಲ್ಲ, ಕೆಲಸ ಮಾಡುವ ತಾಳ್ಮೆಯೂ ಇಲ್ಲ. "ಈ ಜಗತ್ತಿಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಸಚಿನ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ.
ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರಾನ್ ಸಾವಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿತ್ತು. ಈ ಮಧ್ಯೆ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಪೋಸ್ಟ್ ಮಾಡುವಾಗ ಸಚಿನ್ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದು, 'ಈ ಜಗತ್ತನ್ನು ತೊರೆಯುವ ಸಮಯ ಬಂದಿದೆ' ಎಂದು ಬರೆದಿದ್ದಾರೆ. ಈ ಹಿನ್ನೆಲೆ ಭಾಷೆಯನ್ನು ಬಳಸಿದ್ದಾರೆ. ಮನ್ಸುಖ್ ಹಿರಾನ್ ಪ್ರಕರಣವು ವಿಭಿನ್ನ ತಿರುವು ಪಡೆಯುವ ಸಾಧ್ಯತೆಯಿದೆ.
ಉದ್ಯಮಿ ಅಂಬಾನಿ ಮನೆ ಮುಂದೆ ನಿಲ್ಲಿಸಿದ್ದ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಮಾಲೀಕ ಮನ್ಸುಖ್ ಸಾವಿನ ಪ್ರಕರಣದಲ್ಲಿ ವಾಜೆ ಹೆಸರು ಕೇಳಿ ಬಂದಿದ್ದು, ಈ ಪ್ರಕರಣದಲ್ಲಿ ಬಂಧನದ ಭೀತಿ ಪೊಲೀಸ್ ಅಧಿಕಾರಿ ಸಚಿನ್ರವರನ್ನು ಕಾಡುತ್ತಿದೆ ಎನ್ನಲಾಗಿತ್ತು. ಈ ಹಿನ್ನೆಲೆ ಅವರು ಥಾಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪೂರ್ವ ಬಂಧನ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಈ ಪ್ರಕರಣವನ್ನು ಮಾರ್ಚ್ 19 ರಂದು ವಿಚಾರಣೆ ನಡೆಸಲಾಗುವುದು. ಇನ್ನು ಘಟನೆ ಬಳಿಕ ಸಚಿನ್ ಅವರನ್ನು ವರ್ಗಾಯಿಸಲಾಗಿದೆ.