ಪುಣೆ (ಮಹಾರಾಷ್ಟ್ರ): ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಟ್ರಾಫಿಕ್ ಪೊಲೀಸರು ಸವಾರನೊಂದಿಗೆ ಎತ್ತಿ ಟೆಂಪೋದಲ್ಲಿ ತುಂಬಿರುವ ಘಟನೆ ಮಹಾರಾಷ್ಟ್ರದ ಪುಣೆಯ ನಾನಾ ಪೇಠ್ ಪ್ರದೇಶದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಸಂಚಾರಿ ಪೊಲೀಸರು ಪುಣೆ ನಗರದ ವಿವಿಧ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ವಿವಿಧ ಕಾರಣಗಳಿಗಾಗಿ ಅವರಿಂದ ದಂಡ ವಸೂಲಿ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ನಾನಾ ಪೇಠ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿಕೊಂಡು ಕುಳಿತಿದ್ದನು. ಇದನ್ನು ಕಂಡ ಟ್ರಾಫಿಕ್ ಪೊಲೀಸರು ಬೈಕ್ ಜೊತೆಗೇ ಆತನನ್ನು ಎತ್ತಿ ಟೆಂಪೋಗೆ ತುಂಬಿದ್ದಾರೆ.
ಇದನ್ನೂ ಓದಿ: Watch: ಈಜಲು ಹೋದಾಗ ಏಕಾಏಕಿ ನದಿ ಪ್ರವಾಹ: ನಾಲ್ವರು ಮಕ್ಕಳನ್ನು ರಕ್ಷಿಸಿದ ಪೊಲೀಸರು
ಇದನ್ನು ಕಂಡ ಸ್ಥಳೀಯರು ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ವಾಹನ ಪೊಲೀಸರು ನಿಯಮ ಉಲ್ಲಂಘಿಸಿದ್ದಲ್ಲಿ ಟ್ರಾಫಿಕ್ ಪೊಲೀಸರು ಬೈಕ್ ವಶಕ್ಕೆ ಪಡೆಯಬಹುದು ಇಲ್ಲವೇ ದಂಡ ವಿಧಿಸಬಹುದು. ಅದನ್ನು ಬಿಟ್ಟು ಹೀಗೆ ಮಾಡುವುದು ಯಾವ ರೀತಿಯಲ್ಲಿ ಸರಿ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಘಟನೆಯ ಫೋಟೋ ವೈರಲ್ ಆಗಿದೆ.