ETV Bharat / bharat

ಯುಪಿ ಅಸೆಂಬ್ಲಿ ಗೇಟ್​ ಬಳಿ ಗುಂಡಿಕ್ಕಿಕೊಂಡು ಸಬ್​ ಇನ್ಸ್​ಪೆಕ್ಟರ್​ ಸಾವು! - ಉತ್ತರ ಪ್ರದೇಶ ಇತ್ತೀಚಿನ ನ್ಯೂಸ್​

ಉತ್ತರ ಪ್ರದೇಶ ವಿಧಾನಸಭೆ ಹೊರಗಡೆ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ವೋರ್ವರು ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Police inspector shoots
Police inspector shoots
author img

By

Published : Mar 4, 2021, 5:38 PM IST

ಲಕ್ನೋ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಹೊರಗಡೆ ಸಬ್​ ಇನ್ಸ್​ಪೆಕ್ಟರ್ ಒಬ್ಬರು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶ ಅಸೆಂಬ್ಲಿ ಗೇಟ್​ ನಂಬರ್​ 7ರಲ್ಲಿ ಈ ಘಟನೆ ನಡೆದಿದ್ದು, ತನ್ನ ಬಳಿಯಿದ್ದ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸೊಸೈಡ್​ ನೋಟ್​ ಸಿಕ್ಕಿದ್ದು, ಅದರ ಪ್ರಕಾರ ಕೆಲ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • A police sub-inspector shoots himself dead in suspicious conditions at Gate no 7 of the Assembly in Lucknow. More details awaited. pic.twitter.com/qHdqo4DGQT

    — ANI UP (@ANINewsUP) March 4, 2021 " class="align-text-top noRightClick twitterSection" data=" ">

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಹಿರಿಯ ಅಧಿಕಾರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಬಳಿ ಕ್ಷಮೆಯಾಚನೆ ಮಾಡಿದ್ದು, ಇಂತಹ ಘಟನೆ ಇನ್ಮುಂದೆ ಇಲಾಖೆಯಲ್ಲಿ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಹಾಸನ: ಜೀವನದಲ್ಲಿ ಜಿಗುಪ್ಸೆ.. ಹಾಸ್ಟೆಲ್​​ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ

ಗುಂಡು ಹಾರಿಸಿಕೊಂಡಿರುವ ಪೊಲೀಸ್ ಸಬ್​ ಇನ್ಸ್​ಪೆಕ್ಟರ್​​ ಅವರನ್ನ ನಿರ್ಮಲ್​ ಚೌಧರಿ ಎಂದು ಗುರುತಿಸಲಾಗಿದ್ದು, ಲಕ್ನೋ ಬಂಡೇರಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.