ETV Bharat / bharat

ಶಾಹಿ ಮಸೀದಿಯಲ್ಲಿ ಹನುಮಾನ್​ ಚಾಲೀಸ್​ ಪಠಣಕ್ಕೆ ಕರೆ.. ಮಥುರಾದಲ್ಲಿ ಖಾಕಿ ಪಡೆ ಕಣ್ಗಾವಲು

ಮಥುರಾ ಶಾಹಿ ಮಸೀದಿಯಲ್ಲಿ ಇಂದು ಹನುಮಾನ್​ ಚಾಲೀಸ್​ ಪಠಿಸಲು ಅಖಿಲ ಭಾರತ ಹಿಂದು ಮಹಾಸಭಾ ಕರೆ ನೀಡಿದ್ದು, ನಗರದಾದ್ಯಂತ ಪೊಲೀಸ್​ ಕಾವಲು ನಿಯೋಜಿಸಲಾಗಿದೆ.

police-force-alert-in-mathura
ಮಥುರಾದಲ್ಲಿ ಖಾಕಿ ಪಡೆ ಕಣ್ಗಾವಲು
author img

By

Published : Dec 6, 2022, 10:40 AM IST

ಮಥುರಾ (ಉತ್ತರಪ್ರದೇಶ): ಮಥುರಾದಲ್ಲಿರುವ ಶಾಹಿ ಮಸೀದಿ ಈದ್ಗಾದಲ್ಲಿ ಮಂಗಳವಾರ ಹನುಮಾನ್ ಚಾಲೀಸಾ ಪಠಿಸಲು ಅಖಿಲ ಭಾರತ ಹಿಂದೂ ಮಹಾಸಭಾ ಕರೆ ನೀಡಿದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್​ ಭದ್ರತೆಯನ್ನು ಹಾಕಲಾಗಿದೆ. ಯಾವುದೇ ಹೊಸ ಸಂಪ್ರದಾಯ ಅಥವಾ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ.

1,500 ಪೊಲೀಸರು, ಸಶಸ್ತ್ರ ಕಾನ್‌ಸ್ಟೇಬಲ್​, ಅರೆಸೇನಾ ಪಡೆಯನ್ನು ಮಥುರಾದಲ್ಲಿ ನಿಯೋಜಿಸಲಾಗಿದೆ. ಶ್ರೀಕೃಷ್ಣ ದೇಗುಲ ಮತ್ತು ಶಾಹಿ ಮಸೀದಿ ಈದ್ಗಾ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಶಾಲಾ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಮಸೀದಿ ಶ್ರೀಕೃಷ್ಣ ದೇವಾಲಯಕ್ಕೆ ಸೇರಿದ್ದಾಗಿದೆ. ಅದನ್ನು ದೇವಾಲಯ ಆಡಳಿತದ ಸುಪರ್ದಿಗೆ ನೀಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಬಲವಾಗಿ ಆಗ್ರಹಿಸಿದೆ. ಮಸೀದಿಯಲ್ಲಿ ಮಂಗಳವಾರ ಹನುಮಾನ್​ ಚಾಲೀಸಾ ಪಠಣ ಮಾಡಲಾಗುವುದು ಎಂದು ಕರೆ ಕೂಡ ನೀಡಲಾಗಿದೆ.

ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದ್ದು, ಇದನ್ನು ತಡೆಯಲು ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಹೊಸ ಆಚರಣೆಗಳು ನಡೆಯುವುದು ಸಾಮಾಜಿಕ ಶಾಂತಿ ಹಾಳು ಮಾಡುತ್ತವೆ. ಇದಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ ಹಿಂದೂ ಮಹಾಸಭಾ ಭವ್ಯ ಮೆರವಣಿಗೆ ಮೂಲಕ ಮಸೀದಿಗೆ ತೆರಳಲು ಸಿದ್ಧತೆ ನಡೆಸಿದೆ. ತಮ್ಮನ್ನು ತಡೆದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು. ತಡೆದ ಜಾಗದಲ್ಲೇ ಹನುಮಾನಾ ಚಾಲೀಸಾ ಪಠಿಸಲಾಗುವುದು ಎಂದು ಎಚ್ಚರಿಸಿದೆ.

ಈಗಾಗಲೇ ಸಂಘಟನೆಯ ಹಲವು ಕಾರ್ಯಕರ್ತರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಕಳೆದ ವರ್ಷವೂ ನೀಡಿದ್ದ ಇದೇ ರೀತಿಯ ಕರೆಯ ಯೋಜನೆಯನ್ನು ಜಿಲ್ಲಾಡಳಿತ ವಿಫಲಗೊಳಿಸಿತ್ತು.

ಓದಿ: ಬೆಳಗಾವಿಯಲ್ಲಿ ಕರವೇ ಬೃಹತ್ ಪ್ರತಿಭಟನೆ: ಕುಂದಾನಗರಿಯಲ್ಲಿ ಪೊಲೀಸ್ ಸರ್ಪಗಾವಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.