ETV Bharat / bharat

'ಪತ್ನಿ ಮಾಂಸದ ಅಡುಗೆ ಮಾಡಿಲ್ಲ': 100 ನಂಬರ್​ಗೆ 6 ಬಾರಿ ಕರೆ ಮಾಡಿದ ವ್ಯಕ್ತಿ.. ಮುಂದೇನಾಯ್ತು?

author img

By

Published : Mar 20, 2022, 2:37 PM IST

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ 6 ಬಾರಿ 100 ನಂಬರ್​ಗೆ ಕರೆ ಮಾಡಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.

police-filed-a-case-against-a-person-beacuse-of-dialing-100-for-many-times
'ಪತ್ನಿ ಮಾಂಸದ ಅಡುಗೆ ಮಾಡಿಲ್ಲ': 100 ನಂಬರ್​ಗೆ ಆರು ಬಾರಿ ಕರೆದ ಮಾಡಿದ ವ್ಯಕ್ತಿ.. ಮುಂದೇನಾಯ್ತು..?

ನಲ್ಗೊಂಡ(ತೆಲಂಗಾಣ) ಸಾಮಾನ್ಯವಾಗಿ ಅಪಘಾತ ಮತ್ತು ಅಪರಾಧ ನಡೆದ ಸಂದರ್ಭದಲ್ಲಿ ನಾವು ತುರ್ತಾಗಿ '100' ನಂಬರ್​ಗೆ ಕರೆ ಮಾಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಹೋಳಿ ಹಬ್ಬದಂದು ಮಾಂಸದ ಅಡುಗೆ ಮಾಡಲಿಲ್ಲ ಎಂದು 100 ನಂಬರ್​ಗೆ 6 ಬಾರಿ ಕರೆ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ.

ಈ ವಿಚಿತ್ರ ಘಟನೆ ನಡೆದಿರುವುದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್ ಮಂಡಲದ ಚರ್ಲ ಗೌರಾರಾಮ್​ ಗ್ರಾಮದಲ್ಲಿ. ಹೋಳಿ ಹಬ್ಬದಂದು ನವೀನ್ ಎಂಬಾತ ತನ್ನ ಮನೆಗೆ ಮಾಂಸವನ್ನು ತಂದಿದ್ದು, ಪತ್ನಿ ಆ ಮಾಂಸದಿಂದ ಅಡುಗೆ ಮಾಡಿರಲಿಲ್ಲ. ಇದರಿಂದಾಗಿ ಕುಡಿದ ಮತ್ತಿನಲ್ಲಿ 100 ನಂಬರ್​ಗೆ ಆರು ಬಾರಿ ಕರೆ ಮಾಡಿ, ಪತ್ನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾನೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಪೊಲೀಸರ ಅತ್ಯಮೂಲ್ಯ ಸಮಯ ಹಾಳು ಮಾಡಿದ ಆರೋಪದ ಮೇಲೆ ವ್ಯಕ್ತಿ ವಿರುದ್ಧ ಕೇಸ್​ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ನಾಗೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: 'ಜೇನುನೊಣ ಕಡಿತದಿಂದ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು': ಠಾಣೆಗೆ ಬೆಂಕಿ ಹಚ್ಚಿ ಜನರ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.