Anshul Kamboj: ಹರಿಯಾಣದ ಯುವ ವೇಗದ ಬೌಲರ್ ಅಂಶುಲ್ ಕಾಂಬೋಜ್ ಪ್ರಸಕ್ತ ರಣಜಿ ಟ್ರೋಫಿ ಋತುವಿನಲ್ಲಿ ಕೇರಳ ವಿರುದ್ಧ ಇನಿಂಗ್ಸ್‌ವೊಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಶುಕ್ರವಾರ ಲಾಹ್ಲಿಯ ಚೌಧರಿ ಬನ್ಸಿ ಲಾಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೇರಳ ಮತ್ತು ಹರಿಯಾಣ ನಡುವಿನ ಪಂದ್ಯದಲ್ಲಿ ಅಂಶುಲ್ ಈ ಸಾಧನೆ ಮಾಡಿದ್ದಾರೆ.
ಮೊದಲ ದಿನದಾಟದಲ್ಲಿ ಎರಡು ವಿಕೆಟ್ ಪಡೆದಿದ್ದ ಕಾಂಬೋಜ್ ಎರಡನೇ ದಿನದಂದು ಉಳಿದ 8 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ರಣಜಿ ಟ್ರೋಫಿ ಇತಿಹಾಸದಲ್ಲೇ ಇನ್ನಿಂಗ್ಸ್ ಒಂದರಲ್ಲೇ ಎಲ್ಲ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
𝐖.𝐎.𝐖! 🔥
— BCCI Domestic (@BCCIdomestic) November 15, 2024
Haryana Pacer Anshul Kamboj has taken all 1⃣0⃣ Kerala wickets in the 1st innings in #RanjiTrophy 🙌
He's just the 6th Indian bowler to achieve this feat in First-Class cricket & only the 3rd in Ranji Trophy 👏
Scorecard: https://t.co/SeqvmjOSUW@IDFCFIRSTBank pic.twitter.com/mMACNq4MAD
ಇದಕ್ಕೂ ಮೊದಲು ಬಂಗಾಳದ ಪ್ರೇಮಾಂಗ್ಚು ಚಟರ್ಜಿ ಮತ್ತು ರಾಜಸ್ಥಾನದ ಮಾಜಿ ಆಟಗಾರ ಪ್ರದೀಪ್ ಸುಂದರಂ ರಣಜಿಯಲ್ಲಿ ಈ ಸಾಧನೆ ಮಾಡಿದ್ದರು. 1956-57ರ ರಣಜಿ ಋತುವಿನಲ್ಲಿ ಅಸ್ಸಾಂ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಪ್ರೇಮಾಂಗ್ಚು ಇನ್ನಿಂಗ್ಸ್ ಒಂದರಲ್ಲೆ ಎಲ್ಲಾ 10 ವಿಕೆಟ್ ಪಡೆದಿದ್ದರು. ನಂತರ 1985 ಮತ್ತು 86ರ ಋತುವಿನಲ್ಲಿ ವಿದರ್ಭ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಪ್ರದೀಪ್ ಸುಂದರಂ 10 ವಿಕೆಟ್ ಉರುಳಿಸಿದ್ದರು. 39 ವರ್ಷಗಳ ನಂತರ ಅಂಶುಲ್ ಈ ಪಟ್ಟಿಗೆ ಸೇರಿದ್ದಾರೆ.
1⃣ innings 🤝 1⃣0⃣ wickets 👏
— BCCI Domestic (@BCCIdomestic) November 15, 2024
Historic Spell 🙌
3⃣0⃣.1⃣ overs
9⃣ maidens
4⃣9⃣ runs
1⃣0⃣ wickets 🔥
Watch 📽️ Haryana Pacer Anshul Kamboj's record-breaking spell in the 1st innings against Kerala 👌👌#RanjiTrophy | @IDFCFIRSTBank pic.twitter.com/RcNP3NQJ2y
ಇದುವರೆಗೆ 19 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳ್ನು ಆಡಿರುವ ಕಾಂಬೋಜ್ 57 ವಿಕೆಟ್ ಉರುಳಿಸಿದ್ದಾರೆ. ಓಮನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು. ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಕಾಂಬೋಜ್ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2023–24ರಲ್ಲಿ ಹರಿಯಾಣ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದರು. ಕಾಂಬೋಜ್ 47 ಪ್ರಥಮ ದರ್ಜೆ, 23 ಲಿಸ್ಟ್-ಎ ಮತ್ತು 17 ಟಿ20 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: IND vs SA 4th T20: ದಕ್ಷಿಣ ಆಫ್ರಿಕಾ ವಿರುದ್ಧ ಇತಿಹಾಸ ಬರೆಯಲು ಸಜ್ಜಾದ ಟೀಂ ಇಂಡಿಯಾ, 18 ವರ್ಷದಲ್ಲಿ ಇದೇ ಮೊದಲು!