ETV Bharat / bharat

ಕೋವಿಡ್​ಗೆ ಮೂವರು ನಕ್ಸಲರು ಬಲಿ : ಎಸ್​ಪಿ ಅಭಿಷೇಕ್ ಪಲ್ಲವ್ - ನಕ್ಸಲರಿಗೆ ಕೋವಿಡ್ ದೃಢ

ಎಂಥ ಕಠಿಣ ಪರಿಸ್ಥಿತಿ ಬಂದರೂ ಔಷಧಿ ಮತ್ತು ಆಹಾರ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಬಸ್ತಾರ್ ಆಡಳಿತ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ನಕ್ಸಲರು ನಕ್ಸಲ್ ಸಿದ್ಧಾಂತ ತೊರೆದು ಮುಖ್ಯವಾಹಿನಿಗೆ ಬರಲು ಇಚ್ಛಿಸಿದರೆ, ಅಂಥವರಿಗೆ ಖಂಡಿತ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ನಕ್ಸಲರು ಬಲಿ
ಮೂವರು ನಕ್ಸಲರು ಬಲಿ
author img

By

Published : Jun 15, 2021, 10:41 PM IST

ದಂತೇವಾಡ: ಕಳೆದ 15 ದಿನಗಳಲ್ಲಿ ಕೊರೊನಾ ಹಾಗೂ ವಿಷಪೂರಿತ ಆಹಾರ ಸೇವಿಸಿ ಮೂವರು ನಕ್ಸಲರು ಮೃತಪಟ್ಟಿದ್ದಾರೆ ಹಾಗೂ ಐವರು ನಕ್ಸಲ್​ ಕಮಾಂಡರ್​ಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಎಸ್​ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.

ನಕ್ಸಲ್ ಸಂಘಟನೆಯ ಕಾರ್ಯಕರ್ತರಾದ ವಿನೋದ್, ರಾಜೇಶ್, ಸೋನು, ಆಕಾಶ್ ಮತ್ತು ಕ್ರಾಂತಿ ಕೊರೊನಾ ದೃಢಪಟ್ಟಿದೆ. ನಕ್ಸಲರು ಸರಿಯಾಗಿ ಮಾರ್ಗಸೂಚಿ ಅನುಸರಿಸದ ಕಾರಣ ಕೊರೊನಾ ಹರಡಿದೆ. ಲಾಕ್​ಡೌನ್​ ಹಿನ್ನೆಲೆ ಸರಿಯಾದ ಆಹಾರ ಪೂರೈಕೆಯಾಗಿಲ್ಲ. ಹಾಗಾಗಿ ನಕ್ಸಲರು ಕಳಪೆ ಮಟ್ಟದ ಆಹಾರ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಮೃತಪಟ್ಟಿದ್ದಾರೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

‘ಶರಣಾಗಿ’

ಎಂಥ ಕಠಿಣ ಪರಿಸ್ಥಿತಿ ಬಂದರೂ ಔಷಧಿ ಮತ್ತು ಆಹಾರ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಬಸ್ತಾರ್ ಆಡಳಿತ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ, ನಕ್ಸಲರು ತಮ್ಮ ಸಿದ್ಧಾಂತ ತೊರೆದು ಮುಖ್ಯವಾಹಿನಿಗೆ ಬರಲು ಇಚ್ಛಿಸಿದರೆ, ಅಂಥವರಿಗೆ ಖಂಡಿತ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ನಕ್ಸಲರು ಮೃತಪಟ್ಟಿರೋದು ಕೊರೊನಾದಿಂದಲ್ಲ. ಪೊಲೀಸರು ನೀಡಿದ ಚಿತ್ರಹಿಂಸೆಯಿಂದ ಎಂದು ಕೆಂಪು ಉಗ್ರವಾದಿಗಳು ಪ್ರತಿಕ್ರಿಯಿಸಿದ್ದಾರೆ.

‘ಈಗಾಗಲೇ ಅನೇಕರು ಶರಣಾಗಿದ್ದಾರೆ’

ಕೋವಿಡ್​​​​ ಸೋಂಕು ಹರಡಿದ ಪರಿಣಾಮ ನಕ್ಸಲರಲ್ಲಿ ವಿಭಜನೆ ಉಂಟಾಗಿದೆ. ಹಾಗಾಗಿ ಅನೇಕರು ಪೊಲೀಸರಿಗೆ ಶರಣಾಗಿ, ಕೊರೊನಾಗೆ ಚಿಕಿತ್ಸೆ ಪಡೆದಿದ್ದಾರೆ.

‘ಕೊರೊನಾಗೆ ಮೂವರು ಬಲಿ

ಪೊಲೀಸರ ಪ್ರಕಾರ, ಮೇ 27 ರಂದು ಕೋವಿಡ್​​ನಿಂದಾಗಿ ತೆಲಂಗಾಣದ ಕೊಟ್ಟಗುಡೆಮ್ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದ ನಕ್ಸಲೈಟ್ ಕಮಾಂಡರ್ ಕೊರ್ಸಾ ಗಂಗಾ, ಜೂನ್ 5 ರಂದು ಹೈದರಾಬಾದ್‌ನ ನಕ್ಸಲೈಟ್‌ಗಳ ಸಂವಹನ ತಂಡದ ಮುಖ್ಯಸ್ಥ ಗಡ್ಡಮ್ ಮಧುಕರ್ ಅಲಿಯಾಸ್ ಸೊಬ್ರಾಯ್, ಜೂನ್ 13 ರಂದು, ನಕ್ಸಲೈಟ್ ನಾಯಕ ಕಟ್ಟಿ ಮೋಹನ್ ರಾವ್ ಅಲಿಯಾಸ್ ದಾಮು ದಾದಾ ನಿಧನರಾಗಿದ್ದಾರೆಂದು ತಿಳಿಸಿದ್ದಾರೆ.

ಬಿಜಾಪುರದ ನಕ್ಸಲೈಟ್ ಕಮಾಂಡರ್ ಕೊರೊನಾದಿಂದಾಗಿ ತೆಲಂಗಾಣದಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.