ETV Bharat / bharat

ಪತ್ನಿಯರ ಅದಲು - ಬದಲು ನೆಪದಲ್ಲಿ ವೇಶ್ಯಾವಾಟಿಕೆ: 8 ಮಂದಿ ಬಂಧನ - Married Swap Party

ತಮಿಳುನಾಡಿನಲ್ಲಿ ಪತ್ನಿಯರ ಬದಲಿಸಿಕೊಳ್ಳುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ.

ವೇಶ್ಯಾವಾಟಿಕೆ
ವೇಶ್ಯಾವಾಟಿಕೆ
author img

By ETV Bharat Karnataka Team

Published : Nov 7, 2023, 10:45 PM IST

ಚೆನ್ನೈ (ತಮಿಳುನಾಡು) : ಪತ್ನಿಯರ ಬದಲಿಸಿಕೊಳ್ಳುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಆಘಾತಕಾರಿ ಘಟನೆಯೊಂದು ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ನವೆಂಬರ್ 4 ಮತ್ತು 5 ರಂದು ವಾರಾಂತ್ಯದಲ್ಲಿ ಚೆನ್ನೈನ ಈಸ್ಟ್ ಬೀಚ್ ರಸ್ತೆಯ ಪನೈಯೂರ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವಿವಾಹಿತ ಜೋಡಿಗಳಂತೆ ನಟಿಸಿದ ಹಲವರು ಅಕ್ರಮ ದಂಧೆಯಲ್ಲಿ ತೊಡಗಿದ್ದು ಗೊತ್ತಾಗಿದೆ.

ಎಂಟು ನಕಲಿ ದಂಪತಿ ಮತ್ತು ಹತ್ತು ವಯೋವೃದ್ಧ ವ್ಯಕ್ತಿಗಳು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಪತಿ - ಪತ್ನಿಯರು ಎಂದು ಹೇಳಿಕೊಂಡಿದ್ದು, ಕಾರ್ಯಕ್ರಮದಲ್ಲಿ ಮಹಿಳೆಯರು ಪ್ರಚೋದನಕಾರಿ ಬಟ್ಟೆಗಳನ್ನು ಧರಿಸಿದ್ದರು. ಇದನ್ನರಿತ ಪೊಲೀಸರು ದಾಳಿ ಮಾಡಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ತಾಂಬರಂ ನಗರ ಪೊಲೀಸ್ ಕಮಿಷನರ್ ಅಮಲರಾಜ್ ಅವರಿಗೆ ಯಾರೋ ಮಾಹಿತಿ ರವಾನಿಸಿದ್ದಾರೆ. ನಿಖರ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಪನೈಯೂರ್ ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಆಗಮಿಸಿದ್ದನ್ನು ಕಂಡು ಚಿಕ್ಕ ಚಿಕ್ಕ ಉಡುಗೆಯಲ್ಲಿದ್ದ ಮಹಿಳೆಯರು ಓಡಿಹೋಗಲು ಯತ್ನಿಸಿದರು. ಇನ್ನು ಕೆಲವರು ಕೋಣೆಯಲ್ಲಿ ಅಡಗಿಕೊಂಡರು. ಘಟನಾ ಸ್ಥಳದಲ್ಲಿ ಪೊಲೀಸರು 8 ಮಹಿಳೆಯರು ಮತ್ತು 15 ಪುರುಷರನ್ನು ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.

ಫೇಸ್​ಬುಕ್​ ಪೇಜ್​ ಮೂಲಕ ದಂಧೆ: ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ಮೂಲದ ಸೆಂಥಿಲ್‌ಕುಮಾರ್ ಮತ್ತು ಆತನ ಪತ್ನಿ ಈ ಕಾರ್ಯಾಚರಣೆ ಹಿಂದಿನ ರೂವಾರಿಗಳಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. 2018 ರಲ್ಲಿ 'ಸೆಬಿವೆಲ್' ಹೆಸರಿನ ಫೇಸ್‌ಬುಕ್ ಪೇಜ್​ ಆರಂಭಿಸಿದ್ದರು. 'ಪತ್ನಿಯರ ಬದಲಿಸಿಕೊಳ್ಳುವ' ಜಾಹೀರಾತನ್ನು ಈ ಪುಟದಲ್ಲಿ ಹಾಕಲಾಗುತ್ತಿತ್ತು. ನೃತ್ಯ, ಮದ್ಯಪಾನ ಪಾರ್ಟಿಗಳು ಮತ್ತು ಪೂಲ್‌ಸೈಡ್ ಕಾರ್ಯಮಗಳನ್ನು ಆಯೋಜನೆ ಮಾಡುವುದರ ಜೊತೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಸೆಂಥಿಲ್‌ಕುಮಾರ್ ಮತ್ತು ಆತನ ಪತ್ನಿ ಪಾರ್ಟಿಗೆಂದು ಪ್ರತಿ ವ್ಯಕ್ತಿಯಿಂದ 13,000 ರಿಂದ 20,000 ರೂ.ವರೆಗೆ ವಸೂಲಿ ಮಾಡುತ್ತಿದ್ದರು. ಕಾರ್ಯಕ್ರಮದ ನೆಪದಲ್ಲಿ ಗ್ರೂಪ್​ ಸೆಕ್ಸ್​ ಕೂಡ ನಡೆಸುತ್ತಿದ್ದರು. ಇದರಲ್ಲಿ ಭಾಗವಹಿಸಿದ್ದವರು ಹಣಕಾಸಿನ ತೊಂದರೆ ಮತ್ತು ಕೌಟುಂಬಿಕ ಪರಿಸ್ಥಿತಿಗಳಿಂದಾಗಿ ಭಾಗವಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಮಧುರೈ, ಈರೋಡ್, ಕೊಯಮತ್ತೂರು, ವಿರುಧುನಗರ, ತಿರುನೆಲ್ವೇಲಿ ಸೇರಿದಂತೆ ವಿವಿಧ ಜಿಲ್ಲೆಗಳ ದಂಪತಿ ಈ ದಂಧೆಯಲ್ಲಿ ತೊಡಗಿದ್ದರು.

ಪೊಲೀಸರು ಕೆಲವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. 8 ಮಹಿಳೆಯರನ್ನು ವೇಶ್ಯಾವಾಟಿಕೆ ವಿರೋಧಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಘಟನಾ ಸ್ಥಳದಲ್ಲಿ 100ಕ್ಕೂ ಹೆಚ್ಚು ಕಾಂಡೋಮ್‌ಗಳು, ಕಾಮೋತ್ತೇಜಕ ಮಾತ್ರೆಗಳು, ಮದ್ಯದ ಬಾಟಲಿಗಳು, ಸಣ್ಣ ಪ್ರಮಾಣದ ಗಾಂಜಾ, ಹುಕ್ಕಾ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಪ್ರಕಾರ, ಕೊಯಮತ್ತೂರು ಮೂಲದ ಸೆಂಥಿಲ್‌ಕುಮಾರ್ ದಂಪತಿ 5 ವರ್ಷಗಳಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಜನ್ಮದಿನದ ಕಾರ್ಯಕ್ರಮದ ನೆಪದಲ್ಲಿ ಇದನ್ನೆಲ್ಲಾ ನಡೆಸುತ್ತಿದ್ದರು. ಬಂಧಿತ 8 ಮಂದಿಯನ್ನು ಆಲಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದ ಫೇಸ್‌ಬುಕ್ ಪೇಜ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ: ಹೆಂಡತಿಯರನ್ನು ಬದಲಾಯಿಸಿಕೊಳ್ಳುವ ಲೈಂಗಿಕ ಆಟ.. ಒಪ್ಪದ ಪತ್ನಿಗೆ ಪತಿಯಿಂದ ಚಿತ್ರಹಿಂಸೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.