ರಾಜನಂದಗಾಂವ್ (ಛತ್ತೀಸ್‌ಗಢ): ಗಾಂಜಾ ಕಳ್ಳ ಸಾಗಣೆ ದಂಧೆಯ ಕಿಂಗ್‌ಪಿನ್ ಪುಖ್ರಾಜ್ ವರ್ಮಾನನ್ನು ರಾಜನಂದಗಾಂವ್ ಪೊಲೀಸರು ಬಂಧಿಸಿದ್ದು, 22 ಲಕ್ಷ ಮೌಲ್ಯದ 371 ಕೆಜಿ ಗಾಂಜಾ ಹಾಗೂ 12 ಲಕ್ಷ ನಗದು, 16 ಲಕ್ಷ ಮೌಲ್ಯದ 370 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಗಾಂಜಾ ಮತ್ತು ಅಕ್ರಮ ಮದ್ಯದ ದಂಧೆಯನ್ನು ತಡೆಗಟ್ಟಲು ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದರು. ಗುರುವಾರ ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದು ತುಳಸಿಪುರ ರೈಲು ನಿಲ್ದಾಣದ ಬಳಿ ಇರುವ ಆರೋಪಿ ಪುಖ್ರಾಜ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ, ಸಂಗ್ರಹಿಸಿಟ್ಟಿದ್ದ 371 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಜ್‌ನಂದಗಾಂವ್ ಪೊಲೀಸ್ ಅಧೀಕ್ಷಕ ಸಂತೋಷ್ ಸಿಂಗ್ ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ವಿವಿಧ ಠಾಣೆಗಳಲ್ಲಿ 13ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಆತನಿಂದ 12,48,000 ರೂ.ಮೌಲ್ಯದ 16 ಲಕ್ಷ ಬೆಲೆ ಬಾಳುವ ಚಿನ್ನದ ಸರ ಮತ್ತು ಬ್ರಾಸ್ಲೈಟ್ ಅನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ಮತ್ತು ಇಡಿಗೆ ಹಸ್ತಾಂತರಿಸಲಾಗುವುದು ಎಂದರು.
ಇದನ್ನೂ ಓದಿ: ನಾವು ಬಲಿಷ್ಠರಾಗಿದ್ದು, ಗೆಲುವು ನಮಗೇ ದೊರಕಲಿದೆ : ಉಕ್ರೇನ್ ಅಧ್ಯಕ್ಷರ ಭಾವನಾತ್ಮಕ ಭಾಷಣ