ETV Bharat / bharat

ಬಾಯ್ದೆರೆದ ಜೋಶಿಮಠ: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಆತಂಕ ತೀವ್ರವಾಗಿದ್ದು, ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಶಂಕರಾಚಾರ್ಯರ ತಪೋವನವಾದ ಪ್ರದೇಶ ಅಭಿವೃದ್ಧಿ ಕಾಮಗಾರಿಗಳ ಒಡೆತಕ್ಕೆ ಸಿಲುಕಿ ಬಾಯ್ದೆರೆಯುತ್ತಿದೆ.

joshimath subsidence
ಪಿಎಂ ಮೋದಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ
author img

By

Published : Jan 8, 2023, 2:14 PM IST

ನವದೆಹಲಿ: ಶಂಕರಾಚಾರ್ಯರು ಸ್ಥಾಪಿಸಿದ್ದ 4 ಶಕ್ತಿಪೀಠಗಳಲ್ಲಿ ಒಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿದೆ. ಇದೇ ಪ್ರದೇಶದಲ್ಲಿ ತೀವ್ರ ಭೂಕುಸಿತ ಮುಂದುವರಿದಿದ್ದು, ಅಲ್ಲಿನ ಜನರು ಪ್ರಾಣ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಜನರ ರಕ್ಷಣೆ ಮತ್ತು ಅಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ಕರೆಯಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ, ಇಂದು ಮಧ್ಯಾಹ್ನ ಪಿಎಂಒದಲ್ಲಿ ಜೋಶಿಮಠದ ಕುರಿತಾಗಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಇದರಲ್ಲಿ ಸಂಪುಟ ಕಾರ್ಯದರ್ಶಿ, ಸರ್ಕಾರದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು ಭಾಗವಹಿಸಲಿದ್ದಾರೆ. ಜೋಶಿಮಠದ ಜಿಲ್ಲಾ ಪದಾಧಿಕಾರಿಗಳು, ಉತ್ತರಾಖಂಡದ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ. ಕಳೆದ ಕೆಲವು ದಿನಗಳಿಂದ ಕ್ಷೇತ್ರದಲ್ಲಿ ಉಂಟಾಗುತ್ತಿರುವ ನಿಗೂಢ ಬೆಳವಣಿಗೆಗಳ ಮೇಲೆ ಚರ್ಚೆ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಜೋಶಿಮಠದ ಸಂತ್ರಸ್ತರಿಗೆ ಶೀಘ್ರ ನೆರವು ಮತ್ತು ರಕ್ಷಣೆ ನೀಡಲು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸುವಂತೆ ಸೂಚಿಸಿದ್ದಾರೆ. ಸಂಕಷ್ಟಕ್ಕೀಡಾಗಿರುವ ಜನರನ್ನು ಆದಷ್ಟು ಬೇಗನೇ ಅಲ್ಲಿಂದ ತೆರವು ಮಾಡಲು ಮತ್ತು ಪರ್ಯಾಯ ವಸತಿ ಕಲ್ಪಿಸಲು ಸಿಎಂ ಆದೇಶಿಸಿದ್ದಾರೆ.

ಜೋಶಿಮಠದ ಇತಿಹಾಸ: ಜೋಶಿಮಠ ಪಟ್ಟಣವನ್ನು ಜ್ಯೋತಿರ್ಮಠ ಎಂದೂ ಕರೆಯುತ್ತಾರೆ. ಸನಾತನ ಧರ್ಮದ ಪ್ರಚಾರಕ್ಕಾಗಿ 8ನೇ ಶತಮಾನದಲ್ಲಿ ಆದಿ ಜಗದ್ಗುರು ಶಂಕರಾಚಾರ್ಯರು 4 ದಿಕ್ಕುಗಳಲ್ಲಿ 4 ಪೀಠಗಳನ್ನು ಸ್ಥಾಪಿಸಿದರು. ಅದರಲ್ಲಿ ಒಂದಾದ ಅಥರ್ವಣ ವೇದಕ್ಕೆ ಸಂಬಂಧಿಸಿದ ಜ್ಯೋತಿಷ್​ ಪೀಠವನ್ನು ಜೋಶಿಮಠದಲ್ಲಿ ಸ್ಥಾಪಿಸಿದ್ದರು. ಇದಲ್ಲದೇ, ಕರ್ನಾಟಕದ ಶೃಂಗೇರಿಯಲ್ಲಿರುವ ಶಾರದಾ ಪೀಠ, ಒಡಿಶಾದ ಗೋವರ್ಧನ ಮಠ, ಗುಜರಾತ್​ನ ದ್ವಾರಕಾ ಪೀಠ ಉಳಿದ ಕ್ಷೇತ್ರಗಳಾಗಿವೆ.

ನಿತ್ಯವೂ ಬಾಯ್ದೆರೆದುಕೊಳ್ಳುತ್ತಿರುವ ಜೋತಿಮಠದಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ರಸ್ತೆಗಳು, ದೇವಾಲಯಗಳು ಹಾಗೂ ಕಟ್ಟಡಗಳು ಬಿರುಕು ಬಿಟ್ಟು ಅದರಲ್ಲಿ ನೀರು ಜಿನುಗುತ್ತಿದೆ. ಇದು ಅಲ್ಲಿನ ಜನರನ್ನು ಆತಂಕಕ್ಕೀಡು ಮಾಡಿದೆ. ಶಂಕರರ ಪೀಠವಲ್ಲದೇ, ಭಗವಾನ್ ಬದರಿನಾಥನ ಚಳಿಗಾಲದ ಆಸನವೂ ಇಲ್ಲಿದೆ. ಬದರಿನಾಥನ ವಿಗ್ರಹವನ್ನು ಅಲ್ಲಿನ ದೇವಸ್ಥಾನದಿಂದ ಜೋಶಿಮಠದ ವಾಸುದೇವ ದೇವಸ್ಥಾನಕ್ಕೆ ಪ್ರತಿ ಚಳಿಗಾಲದಲ್ಲಿ ತಂದು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಜೋಶಿಮಠವು ಹಿಂದೂಗಳ ಪ್ರಮುಖ ಯಾತ್ರಾ ಕೇಂದ್ರವಾಗಿದೆ.

600 ಕುಟುಂಬಗಳ ಸ್ಥಳಾಂತರದ ಸವಾಲು: ನಿತ್ಯವೂ ಭೂಮಿ ಬಿರುಕು ಬಿಡುತ್ತಿರುವ ಕಾರಣ ಈ ಪ್ರದೇಶದಲ್ಲಿ ವಾಸವಿರುವ ಜನರನ್ನು ರಕ್ಷಿಸಿ ಅವರಿಗೆ ಪರ್ಯಾಯ ವಸತಿ ರೂಪಿಸುವ ಸವಾಲು ಸರ್ಕಾರದ ಮುಂದಿದೆ. ಈಗಾಗಲೇ ತೀವ್ರ ಹಾನಿಗೀಡಾಗಿರುವ ಪ್ರದೇಶದ 66 ಕುಟುಂಬಗಳನ್ನು ಜೋಶಿಮಠದಿಂದ ತೆರವು ಮಾಡಲಾಗಿದೆ. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸುರಕ್ಷಿತ ಪರಿಹಾರ ಶಿಬಿರಗಳಲ್ಲಿ ಇರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ವಿವಿಧ ಕಾಮಗಾರಿಗಳು ಸ್ಥಗಿತ: ಜೋಶಿಮಠದದಲ್ಲಿ ಭೂಕುಸಿತ ಉಂಟಾಗುತ್ತಿರುವ ಕಾರಣ ಎನ್‌ಟಿಪಿಸಿ ಪವರ್‌ ಪ್ರಾಜೆಕ್ಟ್‌ನ ಸುರಂಗ ಕಾಮಗಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಹೇಳಂಗ್ ಬೈಪಾಸ್ ನಿರ್ಮಾಣ ಕಾಮಗಾರಿ, ಎನ್‌ಟಿಪಿಸಿಯ ತಪೋವನ ವಿಷ್ಣುಘಡ ಜಲವಿದ್ಯುತ್ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ಮತ್ತು ಪುರಸಭೆ ವ್ಯಾಪ್ತಿಯ ನಿರ್ಮಾಣ ಕಾಮಗಾರಿಗಳನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಸ್ಥಗಿತಗೊಳಿಸಲು ಆದೇಶಿಸಿದೆ.

ಕುಸಿದು ಬಿದ್ದ ದೇವಸ್ಥಾನ: ಪ್ರಕೃತಿ ವಿಕೋಪಕ್ಕೆ ಇಲ್ಲಿನ ದೇವಸ್ಥಾನವೊಂದು ಕುಸಿದು ಬಿದ್ದಿದೆ. ಬಾಯ್ದೆರೆದುಕೊಂಡಿದ ದೇಗುಲ ಶುಕ್ರವಾರ ಏಕಾಏಕಿ ಧರಾಶಾಯಿಯಾಗಿದೆ. ಅದೃಷ್ಟವಶಾತ್​ ಈ ವೇಳೆ ಯಾರೂ ದೇಗುಲದಲ್ಲಿ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ಈ ಪ್ರದೇಶದ ಹಲವು ಮನೆಗಳು ಕುಸಿಯುವ ಹಂತದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿರುಕು ಬಿಡಲು ಯೋಜನೆಗಳೇ ಕಾರಣ?: ಜೋಶಿಮಠವು ಭೂಕಂಪ ಅಪಾಯ ಹೆಚ್ಚಿರುವ 'ವಿ' ವಲಯದಲ್ಲಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಮಾಡದಂತೆ ಹಲವು ಆಯೋಗಗಳು ಶಿಫಾರಸು ವರದಿ ಮಾಡಿದೆ. ಆದರೆ, ಸರ್ಕಾರ ಮಾತ್ರ ಅಣೆಕಟ್ಟು, ಹೆದ್ದಾರಿ, ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯಂತಹ ಬೃಹತ್​ ಯೋಜನೆಗಳನ್ನು ಕೈಗೊಂಡಿದೆ. ಈ ವೇಳೆ ಬಂಡೆ ಸಿಡಿಸುವ, ಭೂಮಿ, ಬೆಟ್ಟಗಳನ್ನು ಅಗೆಯುವುದರಿಂದ ಭೂಕಂಪನ ವಿಪರೀತವಾಗಿದೆ. 2019 ರಿಂದ 12 ರವರೆಗೆ ಈವರೆಗೂ ಜೋಶಿಮಠದಲ್ಲಿ 130 ಕ್ಕೂ ಅಧಿಕ ಕಂಪನಗಳು ಉಂಟಾಗಿವೆ ಎಂಬುದು ಅಪಾಯಕಾರಿ ಸುದ್ದಿಯಾಗಿದೆ.

ಇದನ್ನೂ ಓದಿ: ಜೋಶಿಮಠದಲ್ಲಿ ಭೂಕಂಪನದಿಂದ ಬಿರುಕು ಬಿಟ್ಟ ಮನೆಗಳಿಂದ 50 ಕುಟುಂಬಗಳ ಸ್ಥಳಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.