ETV Bharat / bharat

ಸಂಜಯ್ ರಾವತ್ ಪತ್ನಿ ವರ್ಷಾ ರಾವತ್​ಗೆ ಮತ್ತೊಮ್ಮೆ ಇ.ಡಿ. ಸಮನ್ಸ್​​ - ಸಂಜಯ್ ರಾವತ್ ಪತ್ನಿಗೆ ನೋಟಿಸ್

ಜನವರಿ 4ರಂದು ಶಿವಸೇನಾ ನಾಯಕ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್ ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ ಈಗ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.

ED summons Sanjay Raut's wife again
ಸಂಜಯ್ ರಾವತ್ ಪತ್ನಿ ವರ್ಷಾ ರಾವತ್​ಗೆ ಮತ್ತೊಮ್ಮೆ ಇ.ಡಿ ಸಮನ್ಸ್​​
author img

By

Published : Jan 6, 2021, 5:09 PM IST

ಮುಂಬೈ: ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್​ಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.

ಈ ಮೂಲಕ ಜನವರಿ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಇದಕ್ಕೂ ಮೊದಲು ಜನವರಿ ನಾಲ್ಕರಂದು ವರ್ಷಾ ರಾವತ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು. ಮತ್ತಷ್ಟು ವಿಚಾರಣೆ ಅವಶ್ಯಕತೆ ಇರುವ ಕಾರಣದಿಂದ ಮತ್ತೊಮ್ಮೆ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಖ್ಯಾತ ಕ್ರೀಡಾಪಟು ಅಪಹರಣ ಕೇಸ್:​ ಮಾಜಿ ಸಚಿವೆಯ ವಿಚಾರಣೆ, ಪತಿ ಪರಾರಿ

ಪಿಎಂಸಿ ಬ್ಯಾಂಕ್ ನಲ್ಲಿ ಸುಮಾರು 4,300 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆಸಿರುವ ಆರೋಪವಿದ್ದು, ಇದರಲ್ಲಿ ಆರೋಪಿಯೊಬ್ಬರ ಪತ್ನಿಯಾದ ಪ್ರವೀನ್ ರಾವತ್ ಎಂಬುವರಿಂದ ಸುಮಾರು 55 ಲಕ್ಷ ರೂಪಾಯಿಯ ಹಣ ವರ್ಗಾವಣೆ ಮಾಡಿಕೊಂಡ ಆರೋಪ ವರ್ಷಾ ರಾವತ್ ಮೇಲಿದೆ.

ಹೌಸಿಂಗ್ ಡೆವಲಪ್​ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್​​​ನ ಅಂಗಸಂಸ್ಥೆಯಾದ​ ಗುರುವಾಶಿಸ್ ಎಂಬ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ನಿರ್ದೇಶಕಿಯಾದ ಪ್ರವೀನ್ ರಾವತ್ ಪಿಎಂಸಿ ವಂಚನೆ ಕೇಸ್​ನ ಆರೋಪಿಯಾಗಿದ್ದು, ರಾಜ್ಯ ಪೊಲೀಸ್ ಆರ್ಥಿಕ ಇಲಾಖೆಯಿಂದ ಕೆಲವು ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದರು.

ಈಗ ವರ್ಷಾ ರಾವತ್ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿಯಾಗಿದ್ದು, ಜನವರಿ 11ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.