ನವದೆಹಲಿ: ಪ್ರಧಾನಿ ಮೋದಿ ಭದ್ರತಾ ಲೋಪದ ಕುರಿತು ತನಿಖೆ ನಡೆಸುತ್ತಿರುವ ಸಮಿತಿ ಮುಖ್ಯಸ್ಥರಿಗೆ ಬೆದರಿಕೆಗಳು ಬಂದಿವೆ. ಸಿಕ್ ಫಾರ್ ಜಸ್ಟೀಸ್ ಸಂಸ್ಥೆಯು ತನಿಖಾ ಸಮಿತಿ ಮುಖ್ಯಸ್ಥೆ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರಿಗೆ ಬೆದರಿಕೆ ಹಾಕಿದ್ದು, ಆಡಿಯೋವನ್ನು ಬಿಡುಗಡೆ ಮಾಡಿದೆ.
Retired Justice Indu Malhotra gets threat calls: ಸುಪ್ರೀಂ ಕೋರ್ಟ್ ಪ್ರಧಾನಿ ಮೋದಿ ಭದ್ರತಾ ಲೋಪದ ಕುರಿತು ತನಿಖೆ ನಡೆಸುವಂತೆ ಐವರ ಸಮಿತಿಯನ್ನು ರಚಿಸಿದ್ದು, ಇದಕ್ಕೆ ನಿ.ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಮುಖ್ಯಸ್ಥರಾಗಿದ್ದಾರೆ. ಭದ್ರತಾ ಲೋಪ ಪ್ರಕರಣದಿಂದ ದೂರ ಸರಿಯುವಂತೆ ತನಿಖಾ ಸಮಿತಿ ಮುಖ್ಯಸ್ಥರಿಗೆ ಬೆದರಿಕೆ ಹಾಕುತ್ತಿರುವುದು ಆಡಿಯೋದಲ್ಲಿದೆ. ಸಿಖ್ ಫಾರ್ ಜಸ್ಟೀಸ್(ಎಸ್‌ಎಫ್‌ಜೆ) ಈ ಹಿಂದೆ ಕೂಡ ಹಲವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದೆ.
ಇದೇ ತಿಂಗಳ 5 ರಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ನ ಫಿರೋಜ್‌ಪುರಕ್ಕೆ ಹೋಗುತ್ತಿದ್ದಾಗ ರೈತರು ಪ್ರತಿಭಟನೆ ಮಾಡಿ ತಡೆ ನೀಡಿದ್ದರು ಎನ್ನಲಾಗಿತ್ತು. ಈ ಪ್ರಕರಣದಲ್ಲಿ ಭದ್ರತಾ ಲೋಪವಾಗಿದೆ ಎಂದು ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.
ಇದನ್ನೂ ಓದಿ: ಭದ್ರತಾ ಲೋಪದ ತನಿಖೆ: ಪಂಜಾಬ್ ಡಿಜಿಪಿ ಸೇರಿ ಉನ್ನತಾಧಿಕಾರಿಗಳಿಗೆ ನೋಟಿಸ್