ನವದೆಹಲಿ : ಭಾರತದ ಪ್ರಮುಖ ಬಹುಪಕ್ಷೀಯ ವಿದೇಶಾಂಗ ನೀತಿ ಮತ್ತು ಭೌಗೋಳಿಕ ಅರ್ಥಶಾಸ್ತ್ರ ಸಮ್ಮೇಳನವಾದ ರೈಸಿನಾ ಸಂವಾದದ ಏಳನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ನಡೆದ ರೈಸಿನಾ ಸಂವಾದ ವರ್ಚುವಲ್ ಆಗಿ ನಡೆದಿತ್ತು. ಈ ವರ್ಷ ವ್ಯಕ್ತಿಗತ ರೂಪದಲ್ಲಿ ನಡೆಸಲಾಗುತ್ತಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಪ್ರಕಾರ, ಏಪ್ರಿಲ್ 25 ರಿಂದ 27ರವರೆಗೆ ಮೂರು ದಿನಗಳ ಕಾಲ ನಡೆಯುವ ಸಂವಾದದಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಯಾವ ವಿಷಯಗಳು ಬಗ್ಗೆ ಚರ್ಚೆ?: ಈ ಬಾರಿ ಟೆರ್ರಾನೋವಾ-ಭಾವೋದ್ರಿಕ್ತ, ಅಸಹನೆ, ಆಘಾತಕ್ಕೊಳಗಾದ ವಿಷಯಗಳ ಬಗ್ಗೆ ಸಂವಾದದ ಪ್ರಮುಖ ಅಂಶವಾಗಿದೆ. ಈ ಸಂವಾದದಲ್ಲಿ ಮರುಚಿಂತನೆ ಪ್ರಜಾಪ್ರಭುತ್ವ ಕುರಿತು ವ್ಯಾಪಾರ, ತಂತ್ರಜ್ಞಾನ ಮತ್ತು ಸಿದ್ಧಾಂತಗಳ ಬಗ್ಗೆ ಚರ್ಚೆ. ಬಹುಪಕ್ಷೀಯತೆಯ ಅಂತ್ಯ ಕುರಿತು ಜಾಲಬಂಧದ ಜಾಗತಿಕ ಕ್ರಮ ಕುರಿತು ಚರ್ಚೆ. ವಾಟರ್ ಕಾಕಸ್‌ಗಳು ಕುರಿತು ಇಂಡೋ-ಪೆಸಿಫಿಕ್‌ನಲ್ಲಿ ಪ್ರಕ್ಷುಬ್ಧ ಅಲೆಗಳು ಬಗ್ಗೆ ಚರ್ಚೆ, ಸಮುದಾಯಗಳು ಕುರಿತು ಆರೋಗ್ಯ, ಅಭಿವೃದ್ಧಿ ಬಗ್ಗೆ ಚರ್ಚೆ; ಹಸಿರು ಪರಿವರ್ತನೆಗಳನ್ನು ಸಾಧಿಸುವುದರ ಕುರಿತು ಸಾಮಾನ್ಯ ಕಡ್ಡಾಯ, ವಿಭಿನ್ನ ನೈಜತೆಗಳ ಬಗ್ಗೆ ಚರ್ಚೆ, ಸ್ಯಾಮ್ಸನ್ ವಿರುದ್ಧ ಗೋಲಿಯಾತ್ ಕುರಿತು ನಿರಂತರ ಮತ್ತು ಪಟ್ಟುಬಿಡದ ತಂತ್ರಜ್ಞಾನ ಯುದ್ಧಗಳು ಬಗ್ಗೆ ಚರ್ಚೆ ಸೇರಿದಂತೆ ಆರು ಪ್ರಮುಖ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ.
ಓದಿ: 'ಲತಾ ದೀನನಾಥ್ ಮಂಗೇಶ್ಕರ್' ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ಮೋದಿ
ಎಷ್ಟು ರಾಷ್ಟ್ರಗಳು ಭಾಗಿ?: ಈ ಬಾರಿಯ ಸಮ್ಮೇಳನದಲ್ಲಿ 100 ಗೋಷ್ಠಿಗಳು ಇರಲಿದ್ದು, 90 ರಾಷ್ಟ್ರಗಳು ಮತ್ತು 210ಕ್ಕೂ ಹೆಚ್ಚು ಸ್ಪೀಕರ್ಗಳು ಪಾಲ್ಗೊಳ್ಳುತ್ತಿದ್ದಾರೆ. ಬರ್ಲಿನ್ ಮತ್ತು ವಾಷಿಂಗ್ಟನ್‌ನಲ್ಲಿ ಆಯೋಜಿಸಲಾಗುವ ಸೈಡ್ ಈವೆಂಟ್‌ಗಳು ಇರುತ್ತವೆ. ಈ ಮುಖ್ಯ ಸಮ್ಮೇಳನದ ಹೊರತಾಗಿ ರೈಸಿನಾ ಯಂಗ್ ಫೆಲೋಸ್ ಕಾರ್ಯಕ್ರಮವನ್ನು ಸಹ ನಡೆಸಲಾಗುವುದು ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಮಾಜಿ ಪಿಎಂಗಳು ಭಾಗಿ : ಸಮ್ಮೇಳನದಲ್ಲಿ ಸ್ವೀಡನ್‌ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್, ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಮತ್ತು ಆಸ್ಟ್ರೇಲಿಯಾದ ಮಾಜಿ ಪಿಎಂ ಆಂಥೋನಿ ಅಬಾಟ್ ಭಾಗವಹಿಸಲಿದ್ದಾರೆ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ.
ವಿದೇಶಾಂಗ ಮಂತ್ರಿಗಳು ಭಾಗಿ : ಅರ್ಜೆಂಟೀನಾ, ಅರ್ಮೇನಿಯಾ, ಗಯಾನಾ, ನೈಜೀರಿಯಾ, ನಾರ್ವೆ, ಲಿಥುವೇನಿಯಾ, ಲಕ್ಸೆಂಬರ್ಗ್, ಮಡಗಾಸ್ಕರ್, ನೆದರ್ಲ್ಯಾಂಡ್ಸ್, ಫಿಲಿಪೈನ್ಸ್, ಪೋಲೆಂಡ್, ಪೋರ್ಚುಗಲ್ ಮತ್ತು ಸ್ಲೊವೇನಿಯಾದ ವಿದೇಶಾಂಗ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು MEA ವಕ್ತಾರರು ತಿಳಿಸಿದ್ದಾರೆ.
ಏನಿದು ರೈಸಿನಾ ಸಂವಾದ? : 2016ರಿಂದ ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತ ಜಾಗತಿಕ ಸಮ್ಮೇಳನವಾಗಿ ಹೊರಹೊಮ್ಮಿದ್ದು, ಜಗತ್ತು ಎದುರಿಸುತ್ತಿರುವ ವಿಸ್ತೃತ ವಿದೇಶಾಂಗ ನೀತಿ, ಕಾರ್ಯತಂತ್ರಗಳ ಕುರಿತು ಚರ್ಚಿಸಿ ಹೊಸ ಕಾರ್ಯತಂತ್ರಗಳನ್ನು ರೂಪಿಸಲು ಸಹಕಾರಿಯಾಗಿದೆ. ಹೀಗಾಗಿ, ಈ ಬಾರಿಯ ಸಮ್ಮೇಳನದ ಕುರಿತು ಜಗತ್ತಿನ ಪ್ರಮುಖ ರಾಷ್ಟ್ರಗಳು ಆಸಕ್ತಿಯಿಂದ ಗಮನಿಸುತ್ತಿವೆ.