ETV Bharat / bharat

ತ್ರಿವರ್ಣ ಧ್ವಜವನ್ನು ಸಾಮಾಜಿಕ ಮಾಧ್ಯಮಗಳ ಡಿಪಿಯಾಗಿ ಬಳಸಿ: ಪ್ರಧಾನಿ ಮೋದಿ ಕರೆ

ಇಂದು ನಡೆದ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡಾ ಸಾಧಕರನ್ನು ಅಭಿನಂದಿಸಿದರು. ಇದೇ ವೇಳೆ, ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾಗಳ ಪ್ರೊಫೈಲ್​ ಅನ್ನು ತ್ರಿವರ್ಣ ಧ್ವಜದ ಚಿತ್ರದಿಂದ ಕಂಗೊಳಿಸುವಂತೆ ಮಾಡಲು ಕರೆ ನೀಡಿದರು.

pm-narendra-modi-mann-ki-bhat-programme
ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ
author img

By

Published : Jul 31, 2022, 12:18 PM IST

Updated : Jul 31, 2022, 12:34 PM IST

ನವದೆಹಲಿ: ದೇಶದಲ್ಲಿ ಏಕತೆಯನ್ನು ಸಾರುವ ಸಲುವಾಗಿ "ಹರ್ ಘರ್​ ತಿರಂಗಾ"ವನ್ನು ಯೋಜಿಸಲಾಗಿದೆ. ಅದರಂತೆ ಆಗಸ್ಟ್​ 2 ರಿಂದ 15ರ ವರೆಗೂ ತಾವು ಬಳಸುವ ಸಾಮಾಜಿಕ ಮಾಧ್ಯಮಗಳ ಡಿಪಿಯಲ್ಲಿ (ಫೋಟೋ) ತ್ರಿವರ್ಣ ಧ್ವಜ ಚಿತ್ರವನ್ನು ಪ್ರೊಫೈಲ್​ ಆಗಿ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಸಲಹೆ ನೀಡಿದರು.

ಭಾನುವಾರ ತಮ್ಮ ಮಾಸಿಕ ರೇಡಿಯೊ ಪ್ರಸಾರದ 91ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶನದ ಚಿತ್ರವಾಗಿ(ಡಿಪಿ) ತ್ರಿವರ್ಣ ಧ್ವಜವನ್ನು ಅಳವಡಿಸಿ. ದೇಶದ ಏಕತೆಯನ್ನು ಎತ್ತಿಹಿಡಿಯಿರಿ ಎಂದು ಕರೆ ನೀಡಿದರು.

ಕ್ರೀಡಾ ಸಾಧಕರಿಗೆ ಅಭಿನಂದನೆ: ವಿವಿಧ ಸ್ಪರ್ಧೆಗಳಲ್ಲಿ ಭಾರತದ ಹೆಸರು ಪ್ರತಿಧ್ವನಿಸುವಂತೆ ಮಾಡಿದ ಕ್ರೀಡಾ ಸಾಧಕರಿಗೆ ಮೋದಿ ಅಭಿನಂದಿಸಿದರು. ಕೆಲ ದಿನಗಳ ಹಿಂದಷ್ಟೇ ಸಿಂಗಾಪುರ ಓಪನ್​ ಗೆದ್ದ ಪಿ.ವಿ.ಸಿಂಧು ಮತ್ತು ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿಗೆ ಭರ್ಜಿ ಎಸೆದ ನೀರಜ್ ಚೋಪ್ರಾ ಅವರ ಸಾಧನೆಯನ್ನು ಹೊಗಳಿದರು. ಇದಲ್ಲದೇ, ಇಂಗ್ಲೆಂಡ್​ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ತಂಡಕ್ಕೆ ಶುಭ ಕೋರಿದರು.

ಉತ್ಸವಗಳಲ್ಲಿ ಪಾಲ್ಗೊಳ್ಳಿ: ದೇಶದ ವಿವಿಧೆಡೆ ನಡೆಯುವ ಉತ್ಸವ, ಜಾತ್ರೆಗಳಲ್ಲಿ ಜನರು ಭಾಗವಹಿಸಿ. ಅಲ್ಲಿಗೆ ಭೇಟಿ ನೀಡಿ ಅದರ ಬಗ್ಗೆ ಮಾಹಿತಿ ಪಡೆದು ಇತರರಿಗೆ ಅರಿವು ಮೂಡಿಸಲು ಹ್ಯಾಶ್​ಟ್ಯಾಗ್​ಗಳನ್ನು ಬಳಸಿ ಪ್ರಚುರಪಡಿಸಿ. ಪ್ರಸ್ತುತ ನಡೆಯುತ್ತಿರುವ ಹಿಮಾಚಲದ ಮಿಂಜಾರ್ ಮೇಳಕ್ಕೆ ಭೇಟಿ ನೀಡಿ ಎಂದು ಸಲಹೆ ನೀಡಿದರು.

ಸ್ವಾತಂತ್ರ್ಯ ನೆನಪು: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶದ 75 ರೈಲ್ವೇ ನಿಲ್ದಾಣಗಳಿಗೆ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಹೆಸರನ್ನು ಇಡಲಾಗಿದೆ. ಅಂತಹ ನಿಲ್ದಾಣಗಳಿಗೆ ಮಕ್ಕಳಸಮೇತ ಭೇಟಿ ನೀಡಿ. ಆ ಮಹಾನ್​ ನಾಯಕರ ಬಗ್ಗೆ ಯುವಪೀಳಿಗೆಗೆ ಮಾಹಿತಿ ನೀಡಿ ಎಂದರು.

ಉಧಮ್ ಸಿಂಗ್ ಸ್ಮರಣೆ: ಇಂದು ಕ್ರಾಂತಿಕಾರಿ ಉಧಮ್ ಸಿಂಗ್ ಅವರ 82ನೇ ಪುಣ್ಯತಿಥಿ. ಅವರ ತ್ಯಾಗ ಬಲಿದಾನ ಮತ್ತು ಸಾಹಸವನ್ನು ಪ್ರಧಾನಿ ಮೋದಿ ಅವರು ಮನ್​ ಕಿ ಬಾತ್​ನಲ್ಲಿ ಸ್ಮರಿಸಿದರು.

ಮನ್​ ಕಿ ಬಾತ್​ ಕಾರ್ಯಕ್ರಮದ ಮೊದಲ ಆವೃತ್ತಿಯು ಅಕ್ಟೋಬರ್ 3, 2014 ರಂದು ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರದಂದು ಈ ಸಂಚಿಕೆ ನಡೆಸಲಾಗುತ್ತದೆ.

ಇದನ್ನೂ ಓದಿ: ಡಿಎಚ್‌ಎಫ್‌ಎಲ್ ಹಗರಣ: ಆರೋಪಿ ಮನೆಯಲ್ಲಿದ್ದ "ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್" ವಶ

Last Updated : Jul 31, 2022, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.