ETV Bharat / bharat

ಪಿಥೋರ್​ಗಢದ ಆದಿ ಕೈಲಾಸನಾಥನ ದರ್ಶನ ಪಡೆದ ಪ್ರಧಾನಿ..ವಿಶೇಷ ಪೂಜೆ!.. ಈ ಭೇಟಿ ಹಿಂದಿನ ರಹಸ್ಯವೇನು ಗೊತ್ತೆ? - ಪಾರ್ವತಿ ಕುಂಡ್

PM Modi Uttarakhand Tour: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಗುರುವಾರ) ಉತ್ತರಾಖಂಡದ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ತಮ್ಮ ಭೇಟಿಯಲ್ಲಿ ಪಾರ್ವತಿ ಕುಂಡ್ ಮತ್ತು ಅಲ್ಮೋರಾ ಜಾಗೇಶ್ವರ ಧಾಮದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಪ್ರಧಾನಿ ಮೋದಿ ಗಡಿನಾಡು ಜಿಲ್ಲಾ ಕೇಂದ್ರವಾದ ಪಿಥೋರಗಢದಲ್ಲಿ ಸುಮಾರು 4,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

PM Narendra Modi Tour
ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಪ್ರವಾಸ
author img

By ETV Bharat Karnataka Team

Published : Oct 12, 2023, 10:08 AM IST

Updated : Oct 12, 2023, 12:28 PM IST

ಡೆಹ್ರಾಡೂನ್ (ಉತ್ತರಾಖಂಡ): ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಜೊತೆಗೆ ಹೊಂದಿರುವ ನಂಟು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಇಂದು (ಗುರುವಾರ) ಮತ್ತೆ ಉತ್ತರಾಖಂಡ ಪ್ರವಾಸ ಕೈಗೊಂಡಿದ್ದಾರೆ. ಪಿಥೋರಗಢದ ಆದಿ ಕೈಲಾಶ್‌ಗೆ ಪಿಎಂ ಮೋದಿ ತಲುಪಿದ್ದಾರೆ. ಅಲ್ಲಿ ಮೋದಿ ಅವರು ವಿಶೇಷ ಸ್ಥಳೀಯ ಉಡುಗೆಯನ್ನು ಧರಿಸಿ ಶಿವನಿಗೆ ಪೂಜೆ ಸಲ್ಲಿಸಿದರು. ಅಲ್ಲದೆ, ಈ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಶಿವನ ಆರತಿ ಹಾಗೂ ಶಂಖ ಊದುವುದನ್ನು ವೀಕ್ಷಿಸಿದರು. ಇದೇ ವೇಳೆ ಪ್ರಧಾನಿ ಭೇಟಿ ಹಿನ್ನೆಲೆ, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

  • "उत्तराखंड में पिथौरागढ़ के पवित्र पार्वती कुंड में दर्शन और पूजन से अभिभूत हूं। यहां से आदि कैलाश के दर्शन से भी मन आह्लादित है। प्रकृति की गोद में बसी अध्यात्म और संस्कृति की इस स्थली से अपने देश के सभी परिवारजनों के सुखमय जीवन की कामना की," posts PM @narendramodi. pic.twitter.com/flwMpLAoKp

    — Press Trust of India (@PTI_News) October 12, 2023 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಆದಿ ಕೈಲಾಶ್​, ಜಾಗೇಶ್ವರ ದೇವಾಲಯಕ್ಕೆ ಭೇಟಿ: ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ಗಡಿ ಜಿಲ್ಲೆ ಪಿಥೋರಗಢ್‌ನಲ್ಲಿರುವ ಜಿಯೋಲಿಂಗ್‌ಕಾಂಗ್‌ನಲ್ಲಿ ಬಂದು ಇಳಿಯಲಿದ್ದಾರೆ. ಅಲ್ಲಿ ಪ್ರಧಾನಿಯವರು ಪ್ರಾರ್ಥನೆ ಸಲ್ಲಿಸಿ ನಂತರ ಆದಿ ಕೈಲಾಸ ದರ್ಶನಕ್ಕೆ ತೆರಳುತ್ತಾರೆ. ಕೈಲಾಸಕ್ಕೆ ಭೇಟಿ ನೀಡಿದ ನಂತರ, ಪ್ರಧಾನಿ ಮೋದಿ ಇತರರು ಮಧ್ಯಾಹ್ನ 12 ಗಂಟೆಗೆ ಐತಿಹಾಸಿಕ ನಗರವಾದ ಅಲ್ಮೋರಾದ ಜಾಗೇಶ್ವರ ಧಾಮವನ್ನು ತಲುಪಲಿದ್ದಾರೆ. ಇದೇ ವೇಳೆ ಜಾಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹೇಮಂತ್ ಭಟ್ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿ ಜಾಗೇಶ್ವರ ದೇವಸ್ಥಾನದಲ್ಲಿ 11 ಬ್ರಾಹ್ಮಣರ ಆತಿಥ್ಯ ವಹಿಸಲಿದ್ದಾರೆ. ಎಲ್ಲ 11 ಬ್ರಾಹ್ಮಣರ ಸಮ್ಮುಖದಲ್ಲಿ ಪ್ರಧಾನಿಗೆ ಪೂಜೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: 'ಭಾರತ ಇಸ್ರೇಲ್​ ಜೊತೆಗಿದೆ': ಇಸ್ರೇಲ್ ಪ್ರಧಾನಿಯೊಂದಿಗೆ ಮೋದಿ ಮಾತು

ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಮುಖಂಡರು ಉಪಸ್ಥಿತಿ: ದೇವಸ್ಥಾನಕ್ಕೆ ಸಂಬಂಧಿಸಿದವರು ಹೇಳುವ ಪ್ರಕಾರ, ದೇವಸ್ಥಾನದ ಒಂದು ಬದಿಯಲ್ಲಿ ಹರಿಯುವ ಜಟಾ ನದಿಯ ಬಗ್ಗೆ ತಿಳಿಸಲಾಗುವುದು. ಇದರೊಂದಿಗೆ ದೇವಾಲಯದ ಕಮಲದ ಕೊಳದ ಮಹತ್ವವನ್ನು ವಿವರಿಸಲಾಗುವುದು. ಜಗೇಶ್ವರ ಧಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಪಿಎಂ ಮೋದಿ ಮತ್ತೆ ಪಿಥೋರಗಢಕ್ಕೆ ತೆರಳಲಿದ್ದಾರೆ.

ನಂತರ, ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯ ಜೊತೆಗೆ ಪುಷ್ಕರ್ ಸಿಂಗ್ ಧಾಮಿ ಮತ್ತು ಉತ್ತರಾಖಂಡದ ಎಲ್ಲಾ ಕ್ಯಾಬಿನೆಟ್ ಸಚಿವರು ಮತ್ತು ಸಂಸದರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ನಂತರ ಪ್ರಧಾನಿ ಮೋದಿ ಅವರು, ಪಿಥೋರಗಢದಲ್ಲಿ ಸುಮಾರು 4,200 ಕೋಟಿ ರೂಪಾಯಿಗಳ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಆದರೆ, ಪ್ರಧಾನಿ ಮೋದಿ ಸಂಜೆ ಉತ್ತರಾಖಂಡದಿಂದ ಹಿಂತಿರುಗಲಿದ್ದಾರೆ.

  • #WATCH | Pithoragarh, Uttarakhand: PM Narendra Modi performs pooja at Parvati Kund.

    PM Modi will also visit Gunji village to interact with local people, along with the Army, ITBP and BRO. pic.twitter.com/BPLv8eql5I

    — ANI (@ANI) October 12, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಪಿತೃ ಪಕ್ಷ 2023: ಪೂರ್ವಜರ ಮೋಕ್ಷ ಪ್ರಾಪ್ತಿಗಾಗಿ ಪಿಂಡ ದಾನ ಸಂಪ್ರದಾಯ.. ಜರ್ಮನಿ ಮಹಿಳೆಯರೂ ಭಾಗಿ..

Last Updated : Oct 12, 2023, 12:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.