ಶಿಮ್ಲಾ (ಹಿಮಾಚಲ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಬಗ್ಗೆ ವರದಿ ಮಾಡಲು ಪತ್ರಕರ್ತರು ಚಾರಿತ್ರ್ಯ ಅಥವಾ ನಡತೆ ಪ್ರಮಾಣಪತ್ರ (ಕ್ಯಾರೆಕ್ಟರ್ ಸರ್ಟಿಫಿಕೇಟ್) ಅನ್ನು ಹಾಜರುಪಡಿಸಬೇಕೆಂದು ಹಿಮಾಚಲ ಪ್ರದೇಶ ಪೊಲೀಸರು ಆದೇಶ ಹೊರಡೆಸಿದ್ದಾರೆ. ಇದು ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಮಂಗಳವಾರ ಈ ಆದೇಶದ ಹಿಂಪಡೆಯಲಾಗಿದೆ.
ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಅಕ್ಟೋಬರ್ 5ರಂದು ಭೇಟಿ ನೀಡಲಿದ್ದಾರೆ. ರಾಜ್ಯ ಪ್ರವಾಸದ ವರದಿ ಮಾಡಲು ಪತ್ರಕರ್ತರು ಕ್ಯಾರೆಕ್ಟರ್ ಸರ್ಟಿಫಿಕೇಟ್ ಸಲ್ಲಿಸಬೇಕೆಂದು ಸೆಪ್ಟೆಂಬರ್ 29ರಂದು ಬಿಲಾಸ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ, ಇದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿ, ಇದು ಮಾಧ್ಯಮಗಳನ್ನು ನಿಯಂತ್ರಿಸುವ ಪ್ರಯತ್ನವಾಗಿದೆ ಮತ್ತು ಇದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಟೀಕಿಸಿದ್ದವು.
ಇದೀಗ ಹಿಮಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಂದು ಅವರು, ಈ ವಿಷಯದ ಬಗ್ಗೆ ವಿಷಾದಿಸುತ್ತೇವೆ. ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನ ಮಂತ್ರಿಯವರ ಭೇಟಿಯ ಸುದ್ದಿ ಪ್ರಸಾರಕ್ಕಾಗಿ ಪೋಲೀಸ್ ಇಲಾಖೆಯು ಎಲ್ಲ ಪತ್ರಕರ್ತರನ್ನು ಸ್ವಾಗತಿಸುತ್ತದೆ. ವರದಿ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳುವುದಾಗಿ ಪೋಲೀಸ್ ಇಲಾಖೆಯು ಭರವಸೆ ನೀಡುತ್ತದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
-
The letter written SP Bilaspur stands withdrawn.
— Sanjay Kundu, IPS (@sanjaykunduIPS) October 4, 2022 " class="align-text-top noRightClick twitterSection" data="
Any inconvenience caused is regretted.
Journalists are cordially invited to cover Hon’ble PM’s visit to H.P.
Shall extend cooperation and facilitate their coverage. @thetribunechd @htTweets @CMOFFICEHP @timesofindia pic.twitter.com/NxsuLdsMZL
">The letter written SP Bilaspur stands withdrawn.
— Sanjay Kundu, IPS (@sanjaykunduIPS) October 4, 2022
Any inconvenience caused is regretted.
Journalists are cordially invited to cover Hon’ble PM’s visit to H.P.
Shall extend cooperation and facilitate their coverage. @thetribunechd @htTweets @CMOFFICEHP @timesofindia pic.twitter.com/NxsuLdsMZLThe letter written SP Bilaspur stands withdrawn.
— Sanjay Kundu, IPS (@sanjaykunduIPS) October 4, 2022
Any inconvenience caused is regretted.
Journalists are cordially invited to cover Hon’ble PM’s visit to H.P.
Shall extend cooperation and facilitate their coverage. @thetribunechd @htTweets @CMOFFICEHP @timesofindia pic.twitter.com/NxsuLdsMZL
ಮಾಧ್ಯಮಗಳ ವರದಿ ಪ್ರಕಾರ, ಸೆಪ್ಟೆಂಬರ್ 29ರಂದು ಹೊರಡಿಸಿದ್ದ ಆದೇಶದಲ್ಲಿ ಎಲ್ಲ ವರದಿಗಾರರು, ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು ಮತ್ತು ಸರ್ಕಾರಿ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊದವರು ಕೂಡ ತಮ್ಮ ಕ್ಯಾರೆಕ್ಟರ್ ಸರ್ಟಿಫಿಕೇಟ್ ಪ್ರಮಾಣಪತ್ರ ಸಲ್ಲಿಸಬೇಕು. ಅಕ್ಟೋಬರ್ 1ರೊಳಗೆ ಬಿಲಾಸ್‌ಪುರದ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಮೋದಿ ಅವರ ಭೇಟಿ ವರದಿ ಮಾಡುವ ಮಾಧ್ಯಮ ಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಲ್ಲಿಸಬೇಕೆಂದು ತಿಳಿಸಲಾಗಿತ್ತು.
ಈ ಆದೇಶದ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್, ಇದು ಬಿಜೆಪಿ ಕಳೆದ ಐದು ವರ್ಷಗಳಿಂದ ಹಿಮಾಚಲ ಪ್ರದೇಶದ ಸಂಸ್ಕೃತಿಯ ಮೇಲೆ ಮಾಡಿದ ಆಕ್ರಮಣಕ್ಕೆ ಸಾಕ್ಷಿಯಾಗಿದೆ. ಮಾಧ್ಯಮಗಳಿಗೆ ಮಾಡಿದ ಅವಮಾನವಾಗಿದ್ದು, ಈ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿತ್ತು.
ಆಮ್ ಆದ್ಮಿ ಪಕ್ಷದ ವಕ್ತಾರರಾದ ಪಂಕಜ್ ಪಂಡಿತ್, ತಮ್ಮ 22 ವರ್ಷಗಳ ಪತ್ರಿಕೋದ್ಯಮ ಜೀವನದಲ್ಲಿ ಮೊದಲ ಬಾರಿಗೆ ಇಂತಹ ವಿಲಕ್ಷಣ ಆದೇಶವನ್ನು ಕಂಡಿದ್ದೇನೆ. ರಾಜ್ಯಕ್ಕೆ ಮೋದಿ ಮೊದಲ ಬಾರಿಗೆ ಭೇಟಿ ನೀಡುತ್ತಿಲ್ಲ. ಕ್ಯಾರೆಕ್ಟರ್ ಸರ್ಟಿಫಿಕೇಟ್ ಸಲ್ಲಿಸುವಂತೆ ಹೇಳುವುದು ಬೇಡಿಕೆ ಅವಮಾನಕರ ಮತ್ತು ಮಾಧ್ಯಮಗಳನ್ನು ನಿಗ್ರಹಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಕೆಸಿಆರ್ ಪಿಎಂ ಆಗಲಿ: ಮದ್ಯದ ಬಾಟಲಿ, ಕೋಳಿ ವಿತರಿಸಿದ ಟಿಆರ್ಎಸ್ ಮುಖಂಡ!