ಲಖನೌ: ಬಂಧನಕ್ಕೊಳಗಾದ ತಮ್ಮ ಬೆಂಬಲಿಗರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಲಖನೌದಲ್ಲಿ ಧರಣಿ ಕುಳಿತಿದ್ದಾರೆ.
ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತ ಪ್ರಹ್ಲಾದ್ ಮೋದಿ, ಲಖನೌ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಅವರ ಬೆಂಬಲಿಗರನ್ನು ಬಿಡುಗಡೆ ಮಾಡದಿದ್ದರೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಪ್ರಹ್ಲಾದ್ ಮೋದಿಯವರು ಅಖಿಲ ಭಾರತ ನ್ಯಾಯೋಚಿತ ಬೆಲೆ ಮಾರಾಟಗಾರರ ಒಕ್ಕೂಟದ (ಎಐಎಫ್‌ಪಿಎಸ್‌ಡಿಎಫ್) ಉಪಾಧ್ಯಕ್ಷರಾಗಿದ್ದಾರೆ.