ನವದೆಹಲಿ: ಅನ್ನದಾತರ ಖಾತೆಗಳಿಗೆ ನಾಳೆ 8ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತ ವರ್ಗಾವಣೆಗೊಳ್ಳಲಿದೆ. ಇದರ ಬೆನ್ನಲ್ಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ದೇಶದ ರೈತರೊಂದಿಗೆ ಸಂವಾದ ನಡೆಸಲಿದ್ದು, ಅದಕ್ಕೂ ಮೊದಲು 19,000 ಕೋಟಿ ರೂ.ಯನ್ನು 9.5 ಕೋಟಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ತಿಂಗಳಿಂದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಯೋಜನೆ ಹಣ ಜಮಾವಣೆ ಆಗಿರಲಿಲ್ಲ. ಆದರೆ ಶುಕ್ರವಾರ ಅನ್ನದಾತರ ಖಾತೆಗಳಿಗೆ ಹಣ ಬರಲಿದೆ.
-
प्रधानमंत्री श्री @narendramodi जी, 14 मई 2021 प्रातः 11:00 बजे #PMKisan योजना के तहत देश के 9.5 करोड़ किसानों के खातों में 8वीं किस्त के तौर पर रु. 19,000 करोड़ की राशि DBT के माध्यम से हस्तांतरित करेंगे...
— Narendra Singh Tomar (@nstomar) May 13, 2021 " class="align-text-top noRightClick twitterSection" data="
इस इवेंट से लाइव जुड़ने के लिए रजिस्टर करें : https://t.co/8IRCLWb674 pic.twitter.com/EtuyV09Fmf
">प्रधानमंत्री श्री @narendramodi जी, 14 मई 2021 प्रातः 11:00 बजे #PMKisan योजना के तहत देश के 9.5 करोड़ किसानों के खातों में 8वीं किस्त के तौर पर रु. 19,000 करोड़ की राशि DBT के माध्यम से हस्तांतरित करेंगे...
— Narendra Singh Tomar (@nstomar) May 13, 2021
इस इवेंट से लाइव जुड़ने के लिए रजिस्टर करें : https://t.co/8IRCLWb674 pic.twitter.com/EtuyV09Fmfप्रधानमंत्री श्री @narendramodi जी, 14 मई 2021 प्रातः 11:00 बजे #PMKisan योजना के तहत देश के 9.5 करोड़ किसानों के खातों में 8वीं किस्त के तौर पर रु. 19,000 करोड़ की राशि DBT के माध्यम से हस्तांतरित करेंगे...
— Narendra Singh Tomar (@nstomar) May 13, 2021
इस इवेंट से लाइव जुड़ने के लिए रजिस्टर करें : https://t.co/8IRCLWb674 pic.twitter.com/EtuyV09Fmf
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಕಾರ ಪ್ರತಿ ವರ್ಷ ರೈತರ ಖಾತೆಗಳಿಗೆ ಮೂರು ಹಂತಗಳಲ್ಲಿ 6 ಸಾವಿರ ರೂ. ಜಮಾವಣೆಯಾಗುತ್ತಿದ್ದು, ಪ್ರತಿ ನಾಲ್ಕು ತಿಂಗಳಿಗೆ ಒಂದು ಸಲ 2 ಸಾವಿರ ರೂ. ವರ್ಗಾವಣೆಯಾಗುತ್ತದೆ.