ETV Bharat / bharat

ಮೋದಿ ಸುದೀರ್ಘ ಪ್ರಯಾಣ: 36 ಗಂಟೆಗಳಲ್ಲಿ 5000 ಕಿ ಮೀ ಸಂಚರಿಸಲಿರುವ ಪ್ರಧಾನಿ - ಸಿಲ್ವಾಸ್ಸಾದ NAMO ವೈದ್ಯಕೀಯ ಕಾಲೇಜಿಗೆ ಭೇಟಿ

ಈಗಾಗಲೇ ಪ್ರಪಂಚದ ಹಲವು ದೇಶಗಳನ್ನು ಸುತ್ತಿರುವ ಪ್ರಧಾನಿ ಮೋದಿ ಅವರು ಇದೀಗ ದೇಶದೊಳಗೆ ಒಂದು ಸುದೀರ್ಘ ಸಂಚಾರಕ್ಕೆ ಸಜ್ಜಾಗಿದ್ದಾರೆ. ಏಪ್ರಿಲ್ 24 ರಿಂದ ಈ ಪ್ರಯಾಣ ಆರಂಭವಾಗಲಿದೆ.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Apr 22, 2023, 6:15 PM IST

ನವದೆಹಲಿ: ಪ್ರಧಾನಿ ಮೋದಿ ಅವರು ಏಪ್ರಿಲ್ 24 ರಿಂದ ಎರಡು ದಿನ ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬರೋಬ್ಬರಿ 36 ಗಂಟೆ ಸಮಯದಲ್ಲಿ ಅಂದಾಜು 5000 ಕಿಲೋ ಮೀಟರ್ ದೂರ ಸಂಚಾರ ಮಾಡಲಿದ್ದಾರೆ. ಈ ಸುದೀರ್ಘ ಪ್ರವಾಸದಲ್ಲಿ ಏಳು ವಿವಿಧ ನಗರಗಳಿಗೆ ತೆರಳಿ, ಎಂಟು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಏಪ್ರಿಲ್ 24 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಮೊದಲು ಮಧ್ಯ ಭಾರತದ ಮಧ್ಯಪ್ರದೇಶಕ್ಕೆ ಪ್ರಯಾಣಿಸುತ್ತಾರೆ. ನಂತರ ದಕ್ಷಿಣ ಭಾರತದ ಕೇರಳಕ್ಕೆ ತೆರಳಲಿದ್ದಾರೆ. ಅಲ್ಲಿಂದ ಪಶ್ಚಿಮದ ಕೇಂದ್ರಾಡಳಿತ ಪ್ರದೇಶಕ್ಕೆ ತಲುಪಿ, ನಂತರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಕಚೇರಿಯಿಂದ ಪಿಎಂ ಪ್ರವಾಸದ ಮಾಹಿತಿ.. ಪ್ರಧಾನಿಯವರ ಸುದೀರ್ಘ ಪ್ರವಾಸದ ವಿವರ ನೀಡಿದ ಅಧಿಕಾರಿಗಳು, ಪ್ರಧಾನಿ ಮೋದಿ ಅವರು ಏಪ್ರಿಲ್ 24 ರಂದು ಬೆಳಗ್ಗೆ ದೆಹಲಿಯಿಂದ 500 ಕಿಲೋ ಮೀಟರ್ ದೂರದ ಖಜುರಾಹೊಗೆ ಪ್ರಯಾಣಿಸಲಿದ್ದಾರೆ. ಖಜುರಾಹೊದಿಂದ 280 ಕಿಲೋಮೀಟರ್ ದೂರದ ರೇವಾಗೆ ತೆರಳಿ ಅಲ್ಲಿ ನಡೆಯಲಿರುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾಯಕ್ರಮ ಮುಗಿದ ನಂತರ ಮತ್ತೆ ಖಜುರಾಹೊಗೆ ಆಗಮಿಸಿ 1700 ಕಿಲೋ ಮೀಟರ್‌ ದೂರದ ಕೊಚ್ಚಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ನಡೆಯುವ ಯುವ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ನನ್ನನ್ನು ರಾಜಕೀಯ ದ್ವೇಷದಿಂದ ಸೋಲಿಸಬೇಕೆಂದು ನಿಂತಿದ್ದಾರೆ: ಸಿದ್ದರಾಮಯ್ಯ

ತಿರುವನಂತಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ: ಮರುದಿನ ಬೆಳಗ್ಗೆ ಪ್ರಧಾನಿಯವರು ಕೊಚ್ಚಿಯಿಂದ 190 ಕಿ.ಮೀ ದೂರದ ತಿರುವನಂತಪುರಕ್ಕೆ ಪ್ರಯಾಣಿಸಿ ಅಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ಸೇರಿದಂತೆ ವಿವಿಧ ಯೋಜನೆಗೆ ಶಂಕುಸ್ಥಾಪನೆ, ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ತಿರುವನಂತಪುರದಿಂದ 1570 ಕಿಲೋಮೀಟರ್‌ ದೂರದ ಸೂರತ್ ಮಾರ್ಗದಲ್ಲಿ ಸಿಲ್ವಾಸ್ಸಾಗೆ ಪ್ರಯಾಣ ಬೆಳೆಸಲಿದ್ದಾರೆ. ಗುಜರಾತ್​ ರಾಜ್ಯದ ಸಿಲ್ವಾಸ್ಸಾದ NAMO ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಲ್ಲಿಂದ ಪ್ರಧಾನಿ ಮೋದಿ ಅವರು ದೇವಿಕಾ ಸಮುದ್ರದ ಮುಂಭಾಗದ ಉದ್ಘಾಟನೆಗೆ ಗುಜರಾತ್​ನ​ ಡಾಮನ್‌ಗೆ ಪ್ರಯಾಣ ಬೆಳೆಸುತ್ತಾರೆ. ನಂತರ 110 ಕಿ.ಮೀ ದೂರದ ಸೂರತ್‌ ಕಡೆಗೆ ಪ್ರಯಾಣ ಬೆಳೆಸುವರು. ಸೂರತ್‌ನಿಂದ 940 ಕಿ.ಮೀ ದೂರದ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಪ್ರಧಾನಿ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

ನಿಗದಿತ ವೇಳಾಪಟ್ಟಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸುದೀರ್ಘ ಸಂಚಾರದಲ್ಲಿ 5,300 ಕಿಲೋ ಮೀಟರ್‌ಗಳಷ್ಟು ದೂರದ ವೈಮಾನಿಕ ಪ್ರವಾಸ ಕೈಗೊಳ್ಳುವರು. ಈ ಎಲ್ಲ ಪ್ರಯಾಣ ಕೇವಲ 36 ಗಂಟೆಗಳಲ್ಲಿ ಮುಕ್ತಾಯಗೊಳ್ಳುತ್ತದೆ ಎನ್ನುತ್ತಾರೆ ಪ್ರಧಾನಿ ಕಚೇರಿಯ ಅಧಿಕಾರಿಗಳು.

ಇದನ್ನೂಓದಿ:ರಾಜ್ಯ ನಾಯಕರ ಜೊತೆ ಅಮಿತ್ ಶಾ ಮಿಡ್ ನೈಟ್ ಮೀಟಿಂಗ್: ಬಿಜೆಪಿ ಚಾಣಕ್ಯ ನೀಡಿದ ಸಲಹೆಗಳೇನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.