ETV Bharat / bharat

ರಾಜ್​ಕೋಟ್​​ನಲ್ಲಿ ಏಮ್ಸ್ ನಿರ್ಮಾಣಕ್ಕೆ ಇಂದು ಪ್ರಧಾನಿ ಮೋದಿಯಿಂದ ಅಡಿಗಲ್ಲು - ರಾಜ್​ಕೋಟ್​ನಲ್ಲಿ ಏಮ್ಸ್​ ನಿರ್ಮಾಣ

ಇಂದು ಬೆಳಗ್ಗೆ 11 ಗಂಟೆಗೆ ಗುಜರಾತ್​ನ ರಾಜ್‌ಕೋಟ್‌ನಲ್ಲಿ ಏಮ್ಸ್ ಆಸ್ಪತ್ರೆ‌ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

PM Modi to lay foundation stone of AIIMS Rajkot today
ಪ್ರಧಾನಿ ಮೋದಿ
author img

By

Published : Dec 31, 2020, 6:39 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, "ಡಿಸೆಂಬರ್ 31 ರಂದು ಬೆಳಗ್ಗೆ 11 ಗಂಟೆಗೆ ರಾಜ್‌ಕೋಟ್‌ನಲ್ಲಿ ಏಮ್ಸ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆಯು ಗುಜರಾತ್‌ನಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುತ್ತದೆ" ಎಂದಿದ್ದಾರೆ.

  • At 11 AM tomorrow, 31st December, will lay the foundation stone of AIIMS, Rajkot. This project will improve healthcare infrastructure in Gujarat. https://t.co/xiQsibvPAV

    — Narendra Modi (@narendramodi) December 30, 2020 " class="align-text-top noRightClick twitterSection" data=" ">

ಅಧಿಕೃತ ಹೇಳಿಕೆಯ ಪ್ರಕಾರ, ಯೋಜನೆಗೆ 201 ಎಕರೆ ಭೂಮಿಯನ್ನು ಸರ್ಕಾರ ಒದಗಿಸಿದೆ. "ಇದನ್ನು 1,195 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು ಮತ್ತು 2022ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅತ್ಯಾಧುನಿಕ 750 ಹಾಸಿಗೆಗಳ ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಆಯುಷ್ ಬ್ಲಾಕ್ ಕೂಡ ಇರುತ್ತದೆ. 125 ಎಂಬಿಬಿಎಸ್ ಸೀಟುಗಳು ಮತ್ತು 60 ನರ್ಸಿಂಗ್ ಸೀಟುಗಳು ಇರಲಿವೆ "ಎಂದು ತಿಳಿದು ಬಂದಿದೆ.

ಅಡಿಪಾಯ ಹಾಕುವ ಸಮಾರಂಭದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಭಾಗವಹಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.