ETV Bharat / bharat

Tokyo Paralympic 2020: ಕ್ರೀಡಾಪಟುಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ

ಆಗಸ್ಟ್ 25ದಿಂದ ಟೋಕಿಯೋ ಪ್ಯಾರಾಲಿಂಪಿಕ್ ಕ್ರೀಡಾಕೂಟ ಆರಂಭವಾಗಲಿದ್ದು, ಇಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.

PM Modi to interact with Indian Tokyo Paralympic contingent today
Tokyo Paralympic 2020: ಕ್ರೀಡಾಪಟುಗಳೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ
author img

By

Published : Aug 17, 2021, 5:23 AM IST

ನವದೆಹಲಿ : ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಟೋಕಿಯೋ ಪ್ಯಾರಾಲಿಂಪಿಕ್​ ಗೇಮ್ಸ್​-2020ರಲ್ಲಿ ಭಾಗವಹಿಸಲಿರುವ ಆಟಗಾರರೊಂದಿಗೆ ಪ್ರಧಾನಿ ಮೋದಿ ಇಂದು ಸಂವಾದ ನಡೆಸಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಆಗಸ್ಟ್ 17ರ ಬೆಳಗ್ಗೆ 11ಕ್ಕೆ ಪ್ಯಾರಾಲಿಂಪಿಕ್ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಲಿದ್ದೇನೆ. ಇವರು ಅತ್ಯುತ್ತಮ ಆಟಗಾರರಾಗಿದ್ದು, ಅತ್ಯುತ್ತಮ ಕೌಶಲ್ಯವನ್ನು ಮತ್ತು ದೃಢತೆಯನ್ನು ಹೊಂದಿದ್ದು, ಕ್ರೀಡಾ ಪ್ರೇಮಿಗಳು ಈ ಕಾರ್ಯಕ್ರಮ ವೀಕ್ಷಿಸಲು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

ಆಗಸ್ಟ್ 24ರಿಂದ ಟೋಕಿಯೋ ಪ್ಯಾರಾಲಿಂಪಿಕ್ ಸ್ಪರ್ಧೆಗಳು ನಡೆಯಲಿದ್ದು, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ಮಾಹಿತಿಯಂತೆ 9 ಸ್ಪರ್ಧೆಗಳಿಂದ 54 ಸ್ಪರ್ಧಿಗಳು ಭಾರತದಿಂದ ಭಾಗವಹಿಸುತ್ತಿದ್ದಾರೆ. ​ ಇದೇ ಮೊದಲ ಬಾರಿಗೆ ಹೆಚ್ಚು ಮಂದಿ ಭಾರತದಿಂದ ಪ್ಯಾರಾಲಿಂಪಿಕ್​​ನಲ್ಲಿ ಭಾಗವಹಿಸುತ್ತಿದ್ದಾರೆ.

ಕ್ರೀಡಾಪಟುಗಳು ಪ್ರಧಾನಿ ಮೋದಿ ಅವರೊಂದಿಗಿನ ಸಂವಾದದ ವೇಳೆ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಆಫ್ಘನ್ ಸದ್ಯದ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಕಾರಣ, ನಾವಲ್ಲ: ಜೋ ಬೈಡನ್ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.