ಬಲರಾಂಪುರ(ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಲು ಉತ್ತರ ಪ್ರದೇಶದ ಬಲರಾಂಪುರ್‌ಗೆ ಇಂದು ಮಧ್ಯಾಹ್ನ ಭೇಟಿ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯಿಂದ ಮಾಹಿತಿ ಸಿಕ್ಕಿದೆ.
ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಹೇಳಿಕೆಯ ಪ್ರಕಾರ, ಯೋಜನೆಯ ಕೆಲಸವು 1978ರಲ್ಲಿ ಪ್ರಾರಂಭವಾಗಿದ್ದು, ಆದರೆ ಹಣಕಾಸಿನ ಕೊರತೆ, ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವ ಮತ್ತು ಸಾಕಷ್ಟು ಕಾರಣಗಳಿಂದಾಗಿ ಸುಮಾರು ನಾಲ್ಕು ದಶಕಗಳ ನಂತರವೂ ಪೂರ್ಣಗೊಂಡಿರಲಿಲ್ಲ.
ರೈತರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿಯವರ ದೂರದೃಷ್ಟಿ ಮತ್ತು ದೀರ್ಘಾವಧಿಯ ಯೋಜನೆಗಳಿಗೆ ಆದ್ಯತೆ ನೀಡುವ ಕಾರಣದಿಂದ 2016ರಲ್ಲಿ ಈ ಯೋಜನೆಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನು ತಂದು ಕೇವಲ 4 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ.
ಅಂದಹಾಗೆ ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಸುಮಾರು 9,800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, ಕಳೆದ ನಾಲ್ಕು ವರ್ಷಗಲ್ಲಿ 4,600 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಘಾಗ್ರಾ, ಸರಯೂ, ರಾಪ್ತಿ, ಬಂಗಂಗಾ, ರೋಹಿಣಿ ನದಿಗಳನ್ನು ಜೋಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿತ್ತು.
ಈ ಯೋಜನೆಯು 14 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ. ಸುಮಾರು 6,200ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 29 ಲಕ್ಷ ರೈತರಿಗೆ ಈ ಯೋಜನೆಯಿಂದ ಪ್ರಯೋಜನವಿದೆ. ಉತ್ತರ ಪ್ರದೇಶದ ಪೂರ್ವ ಭಾಗದ ಒಂಬತ್ತು ಜಿಲ್ಲೆಗಳಾದ ಬಹ್ರೈಚ್, ಶ್ರಾವಸ್ತಿ, ಬಲರಾಮ್‌ಪುರ, ಗೊಂಡಾ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಗೋರಖ್‌ಪುರ ಮತ್ತು ಮಹಾರಾಜ್‌ಗಂಜ್‌ಗಳಿಗೆ ಈ ಯೋಜನೆಯಿಂದ ಲಾಭವಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಇದನ್ನೂ ಓದಿ: ಭಾರತ ಮೂಲದ ಗೌತಮ್ ರಾಘವನ್ ಶ್ವೇತಭವನದ ಉನ್ನತ ಹುದ್ದೆಗೆ ಆಯ್ಕೆ