ETV Bharat / bharat

ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋ ಸೇವೆ.. ಇಂದು ಪ್ರಧಾನಿ ಮೋದಿ ಚಾಲನೆ - ಭಾರತದ ಮೊದಲ ವಾಟರ್ ಮೆಟ್ರೋ

ಪ್ರಧಾನಿ ನರೇಂದ್ರ ಮೋದಿ ಬಂದರು ನಗರ ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆಗೆ ಇಂದು ಚಾಲನೆ ನೀಡಲಿದ್ದಾರೆ.

PM Modi to flag off India's first Water Metro
ವಾಟರ್ ಮೆಟ್ರೋ ಸೇವೆ.. ಇಂದು ಪ್ರಧಾನಿ ಮೋದಿ ಚಾಲನೆ
author img

By

Published : Apr 25, 2023, 10:36 AM IST

ಕೊಚ್ಚಿ (ಕೇರಳ): ನಗರದೊಂದಿಗೆ ತಡೆರಹಿತ ಸಂಪರ್ಕಕ್ಕಾಗಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಹೈಬ್ರಿಡ್ ಬೋಟ್‌ಗಳ ಮೂಲಕ ಕೊಚ್ಚಿಯ ಸುತ್ತಮುತ್ತಲಿನ 10 ದ್ವೀಪಗಳನ್ನು ಸಂಪರ್ಕಿಸುವ 'ಭಾರತದ ಮೊದಲ ವಾಟರ್ ಮೆಟ್ರೋ' ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ವಾಟರ್ ಮೆಟ್ರೋ ಒಂದು ವಿಶಿಷ್ಟವಾದ ನಗರ ಸಮೂಹ ಸಾರಿಗೆ ವ್ಯವಸ್ಥೆಯಾಗಿದ್ದು, ಸಾಂಪ್ರದಾಯಿಕ ಮೆಟ್ರೋ ವ್ಯವಸ್ಥೆಯಂತೆಯೇ ಅದೇ ಅನುಭವ ಮತ್ತು ಪ್ರಯಾಣದ ಸುಲಭತೆ ಹೊಂದಿದೆ. ಕೊಚ್ಚಿಯಂತಹ ನಗರಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

  • A significant enhancement to Kochi's infrastructure! The Kochi Water Metro would be dedicated to the nation. It will ensure seamless connectivity for Kochi. pic.twitter.com/SAvvEz8SFt

    — Narendra Modi (@narendramodi) April 23, 2023 " class="align-text-top noRightClick twitterSection" data=" ">

"ಕೊಚ್ಚಿಯ ವಾಟರ್ ಮೆಟ್ರೋ ಯೋಜನೆಯು ಒಂದು ವಿಶಿಷ್ಟ ಯೋಜನೆ. ಇದನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು ಕೇರಳದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ಏಕೆಂದರೆ ಕೊಚ್ಚಿಯು ಅನೇಕ ದ್ವೀಪಗಳಿಂದ ಸುತ್ತುವರೆದಿದೆ. ಅವುಗಳಲ್ಲಿ 10 ದ್ವೀಪಗಳು ಬಹಳ ದಟ್ಟವಾದ ಜನಸಂಖ್ಯೆಯನ್ನು ಹೊಂದಿವೆ. ಮುಖ್ಯ ಭೂಮಿಯನ್ನು ಅವಲಂಬಿಸಿರುವವರು ಸುಸ್ಥಿರ, ನಿಯಮಿತ ಮತ್ತು ಐಷಾರಾಮಿ ಸಾರಿಗೆ ವ್ಯವಸ್ಥೆಯನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಪಡೆಯುತ್ತಾರೆ. ಇದು ಅತ್ಯಂತ ವೇಗದ ಸಾರಿಗೆ ಸಂಪರ್ಕವನ್ನು ಕಲ್ಪಿಸಲಿದೆ ಎಂದು ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ ತಿಳಿಸಿದೆ.

ಆರಾಮದಾಯಕ ಪ್ರಯಾಣ: ವಿಶಾಲವಾದ ಕಿಟಕಿ ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ವಾಟರ್ ಮೆಟ್ರೋ ಹಿನ್ನೀರಿನ ಸುಂದರ ದೃಶ್ಯಗಳ ಜೊತೆಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತವೆ. ಹೆಚ್ಚಿನ ಭದ್ರತೆಯನ್ನೂ ನೀಡಲಾಗಿದೆ. ಈ ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ ₹1,137 ಕೋಟಿ ರೂ. ಈ ವಾಟರ್ ಮೆಟ್ರೋ ಯೋಜನೆಯು 78 ಕಿಲೋಮೀಟರ್ ವ್ಯಾಪಿಸಿದ್ದು, ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.

ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ: ಕೇರಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು 3,200 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಕೊಚ್ಚಿ ವಾಟರ್ ಮೆಟ್ರೋ ಜತೆಗೆ ದಿಂಡಿಗಲ್-ಪಳನಿ-ಪಾಲಕ್ಕಾಡ್ ಭಾಗದ ರೈಲು ವಿದ್ಯುದ್ದೀಕರಣವನ್ನು ಸಹ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ, ಪಿಎಂ ಮೋದಿ ಅವರು ತಿರುವನಂತಪುರಂ, ಕೋಯಿಕ್ಕೋಡ್ ಮತ್ತು ವರ್ಕಲಾ ಶಿವಗಿರಿ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಸೇರಿದಂತೆ ವಿವಿಧ ರೈಲು ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ.

ಏ.24 ರಂದು ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಬಂದಿಳಿದ ಪ್ರಧಾನಿ ಸೋಮವಾರ ಕೊಚ್ಚಿಯಲ್ಲಿ ಬೃಹತ್​ ರೋಡ್ ಶೋ ನಡೆಸಿದರು. ಕೇರಳದ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಪ್ರಧಾನಿ ಮೋದಿ ಕೊಚ್ಚಿಯ ಬೀದಿಗಳಲ್ಲಿ ಸಂಚರಿಸಿದರು. ಜನರು ರಸ್ತೆಯ ಇಕ್ಕೆಲಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರಧಾನಿಯವರಿಗೆ ಜಯಕಾರ ಹಾಕಿದರು.

ಡಿಜಿಟಲ್ ಸೈನ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ: ಇಂದು (ಮಂಗಳವಾರ) ಪ್ರಧಾನಿ ಮೋದಿ ಅವರು ತಿರುವನಂತಪುರಂನಲ್ಲಿ ಭಾರತದ ಮೊದಲ ಡಿಜಿಟಲ್ ಸೈನ್ಸ್ ಪಾರ್ಕ್‌ಗೆ ಶಂಕುಸ್ಥಾಪನೆ ಮಾಡಲಿದ್ದು, ಇದು ಕೇರಳವನ್ನು ಜ್ಞಾನ ಆರ್ಥಿಕವಾಗಿ ಪರಿವರ್ತಿಸುವಲ್ಲಿ ಮೈಲಿಗಲ್ಲಾಗಿದೆ. ಪ್ರಧಾನ ಮಂತ್ರಿಗಳ ಕಛೇರಿ (PMO) ಪ್ರಕಾರ, ಡಿಜಿಟಲ್ ಸೈನ್ಸ್ ಪಾರ್ಕ್ ಅನ್ನು ಶಿಕ್ಷಣದ ಸಹಯೋಗದೊಂದಿಗೆ ಉದ್ಯಮ ಮತ್ತು ವ್ಯಾಪಾರ ಘಟಕಗಳಿಂದ ಡಿಜಿಟಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಪ್ರಮುಖ ಸಂಶೋಧನಾ ಸೌಲಭ್ಯವಾಗಿ ಕಲ್ಪಿಸಲಾಗಿದೆ.

3ನೇ ತಲೆಮಾರಿನ ಸೈನ್ಸ್ ಪಾರ್ಕ್ ಆಗಿ, ಡಿಜಿಟಲ್ ಸೈನ್ಸ್ ಪಾರ್ಕ್ ಉದ್ಯಮ 4.0 ತಂತ್ರಜ್ಞಾನಗಳಂತಹ ಕೃತಕ ಬುದ್ಧಿಮತ್ತೆ (AI), ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಸ್ಮಾರ್ಟ್ ಮೆಟೀರಿಯಲ್ಸ್ ಇತ್ಯಾದಿಗಳ ಉತ್ಪನ್ನಗಳ ಅಭಿವೃದ್ಧಿಯನ್ನು ಬೆಂಬಲಿಸಲು ಸಾಮಾನ್ಯ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಪ್ರಧಾನ ಮಂತ್ರಿಗಳ ಕಛೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅತ್ಯಾಧುನಿಕ ಮೂಲ ಮೂಲಸೌಕರ್ಯವು ಕೈಗಾರಿಕೆಗಳಿಂದ ಉನ್ನತ-ಮಟ್ಟದ ಅನ್ವಯಿಕ ಸಂಶೋಧನೆ ಮತ್ತು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಉತ್ಪನ್ನಗಳ ಸಹ-ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಯೋಜನೆಯ ಹಂತ-1 ರ ಆರಂಭಿಕ ಹೂಡಿಕೆಯು ಸುಮಾರು 200 ಕೋಟಿ ರೂ.ಗಳಾಗಿದ್ದು, ಒಟ್ಟು ಯೋಜನೆಯ ವೆಚ್ಚವನ್ನು ಸುಮಾರು ರೂ.1,515 ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಆತ್ಮಹತ್ಯಾ ದಾಳಿ ಬೆದರಿಕೆ ನಡುವೆ ಸೋಮವಾರ ಕೇರಳಕ್ಕೆ ಪ್ರಧಾನಿ ಮೋದಿ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.