ETV Bharat / bharat

ಮೊದಲ ವಾರ್ಷಿಕೋತ್ಸವದತ್ತ NEP : ನಾಳೆ ಕೆಲ ಹೊಸ ಯೋಜನೆಗಳಿಗೆ ಪ್ರಧಾನಿ ಚಾಲನೆ

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಒಂದು ವರ್ಷದ ಸುಧಾರಣೆಗಳು ಪೂರ್ಣಗೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮಾತನಾಡಲಿದ್ದಾರೆ. ಈ ವೇಳೆ ಕೆಲವು ನೂತನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

: ನಾಳೆ ಕೆಲವು ಹೊಸ ಯೋಜನೆಗಳಿಗೆ ಪಿಎಂ ಚಾಲನೆ
: ನಾಳೆ ಕೆಲವು ಹೊಸ ಯೋಜನೆಗಳಿಗೆ ಪಿಎಂ ಚಾಲನೆ
author img

By

Published : Jul 28, 2021, 3:51 PM IST

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಒಂದು ವರ್ಷದ ಸುಧಾರಣೆಗಳು ಪೂರ್ಣಗೊಂಡಿರುವುದನ್ನು ಗುರುತಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕ್ಷೇತ್ರದ ಸಿಬ್ಬಂದಿ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಲಿದ್ದಾರೆ.

ಪ್ರಧಾನಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಮೋದಿ ಅನೇಕ ಉಪಕ್ರಮಗಳಿಗೆ ನಾಳೆ ಮೋದಿ ಚಾಲನೆ ನೀಡಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಆಗಮನ ಮತ್ತು ನಿರ್ಗಮನದ ಆಯ್ಕೆಗಳನ್ನು ನೀಡಲಾಗುತ್ತದೆ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಕಾರ್ಯಕ್ರಮಗಳು ಮತ್ತು ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣದ ಮಾರ್ಗಸೂಚಿಗಳನ್ನು ಈ ಯೋಜನೆ ಮೂಲಕ ಒದಗಿಸಲಾಗುತ್ತದೆ.

ಈ ಉಪಕ್ರಮಗಳಲ್ಲಿ ವಿದ್ಯಾ ಪ್ರವೇಶ್ ಅಂದರೆ ಗ್ರೇಡ್ 1 ವಿದ್ಯಾರ್ಥಿಗಳಿಗೆ ಮೂರು ತಿಂಗಳ ಆಟದ ಆಧಾರಿತ ಶಾಲಾ ತಯಾರಿ ಮಾದರಿ. ದ್ವಿತೀಯ ಹಂತದಲ್ಲಿ ಭಾರತೀಯ ಸಂಕೇತ ಭಾಷೆ ಮತ್ತು ಎನ್‌ಸಿಇಆರ್‌ಟಿ ವಿನ್ಯಾಸಗೊಳಿಸಿದ ಶಿಕ್ಷಕರ ತರಬೇತಿಯ ಸಮಗ್ರ ಕಾರ್ಯಕ್ರಮವಾದ ನಿಶ್ತಾ 2.0 ಕೂಡ ಸೇರಿದೆ.

ಈ ಕಾರ್ಯಕ್ರಮವು ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪ ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ ಮೂಲಕ ಪ್ರಾರಂಭವಾಗಲಿದೆ. ಈ ಉಪಕ್ರಮಗಳು ಎನ್‌ಇಪಿ 2020 ರ ಗುರಿಗಳ ಸಾಕಾರಕ್ಕೆ ಮಹತ್ವದ ಹೆಜ್ಜೆಯಾಗಿದೆ ಮತ್ತು ಶಿಕ್ಷಣ ಕ್ಷೇತ್ರವನ್ನು ಹೆಚ್ಚು ರೋಮಾಂಚಕವಾಗಿ ಮಾಡುತ್ತದೆ ಎಂದು ಪ್ರಧಾನಿ ಕಚೇರಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.