ETV Bharat / bharat

11 ಗಂಟೆಗೆ ಕೇಳಿ ಪ್ರಧಾನಿ ಮೋದಿ 'ಮನ್ ಕಿ ಬಾತ್' - ಪ್ರಧಾನಿ ನರೇಂದ್ರ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ಬಾನುಲಿ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Mar 26, 2023, 9:39 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಈ ವರ್ಷದ ತಮ್ಮ ಮೂರನೇ 'ಮನ್ ಕಿ ಬಾತ್' ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮದ 99 ನೇ ಆವೃತ್ತಿ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಅ.3, 2014 ರಂದು ವಿಜಯ ದಶಮಿ ಸಂದರ್ಭದಲ್ಲಿ ಪ್ರಾರಂಭವಾದ ಕಾರ್ಯಕ್ರಮ ಇದೀಗ 100 ಎಪಿಸೋಡ್‌ಗಳ ಸನಿಹ ತಲುಪಿದೆ.

ಕಳೆದ 'ಮನ್ ಕಿ ಬಾತ್' ಕಾರ್ಯಕ್ರಮ ಫೆ.26 ರಂದು ಪ್ರಸಾರವಾಗಿತ್ತು. ಪ್ರತಿ ತಿಂಗಳ ಕೊನೆಯ ಭಾನುವಾರ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಧಾನಿ ಮಾತನಾಡುತ್ತಾರೆ. ಈ ಮೂಲಕ ದೇಶದ ಜನತೆಯೊಂದಿಗೆ ಅವರು ಸಂವಾದಿಸುತ್ತಾರೆ.

ಭಾಷಣವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನೆಟ್‌ವರ್ಕ್‌ಗಳಲ್ಲಿ ಕೇಳಬಹುದು. ಆಲ್‌ ಇಂಡಿಯಾ ರೇಡಿಯೋ (AIR) ನ್ಯೂಸ್ ವೆಬ್‌ಸೈಟ್‌ ಮತ್ತು ನ್ಯೂಸ್‌ಏರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಪ್ರಸಾರವಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಐಆರ್‌ ನ್ಯೂಸ್, ಡಿಡಿ ನ್ಯೂಸ್, ಪಿಎಂಒ ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತದೆ. ಮೊದಲು ಹಿಂದಿಯಲ್ಲಿ ಬಳಿಕ ಎಐಆರ್‌ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರವಾಗುತ್ತದೆ.

ಕೊನೆಯ ಕಾರ್ಯಕ್ರಮದಲ್ಲಿ 'ಏಕತಾ ದಿನ'ದ ಪ್ರಯುಕ್ತ ನಡೆದ ವಿಶೇಷ ಮೂರು ಸ್ಪರ್ಧೆಗಳ ವಿಜೇತರನ್ನು ಪ್ರಧಾನಮಂತ್ರಿ ಘೋಷಿಸಿದ್ದರು. ಪ್ಲಾಸ್ಟಿಕ್ ಚೀಲಗಳ ಬದಲಾವಣೆ ಮತ್ತು ಪಶ್ಚಿಮ ಬಂಗಾಳದ ಬಾನ್ಸ್‌ಬೇರಿಯಾದಲ್ಲಿ 'ತ್ರಿಬೇಣಿ ಕುಂಭೋ ಮಹೋತ್ಸವ'ದ ಪುನರುಜ್ಜೀವನ ಸೇರಿದಂತೆ ವಿವಿಧ ವಿಷಯಗಳ ಕುರಿತು ಅವರು ಪ್ರಸ್ತಾಪಿಸಿದ್ದರು. ಬಾನುಲಿ ಕಾರ್ಯಕ್ರಮವು ತನ್ನ 100ನೇ ಆವೃತ್ತಿಯನ್ನು ಏಪ್ರಿಲ್ 30 ರಂದು ಪೂರ್ಣಗೊಳಿಸಲಿದೆ.

ವಿಶಿಷ್ಟ ಅಭಿಯಾನ: ಶತಮಾನೋತ್ಸವದ ಸಂಚಿಕೆಗೆ ಪೂರ್ವಭಾವಿಯಾಗಿ ಆಲ್ ಇಂಡಿಯಾ ರೇಡಿಯೋ (ಎಐಆರ್) ಮಾರ್ಚ್ 15 ರಿಂದ ಭಾರತದ ಪರಿವರ್ತನೆಯ ಮೇಲೆ ಕಾರ್ಯಕ್ರಮದ ಪ್ರಭಾವ ಕೇಂದ್ರೀಕರಿಸಲು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸುತ್ತಿದೆ ಎಂದು ವರದಿಯಾಗಿದೆ. ಈ ಅಭಿಯಾನವು ಇಲ್ಲಿಯವರೆಗೆ ಮನ್ ಕಿ ಬಾತ್ ಸಂಚಿಕೆಗಳಲ್ಲಿ ಪ್ರಧಾನಮಂತ್ರಿಯವರು ಹೈಲೈಟ್ ಮಾಡಿದ 100 ವಿಷಯಗಳನ್ನು ಹೊರತರಲಿದೆ. ಮನ್ ಕಿ ಬಾತ್‌ನ ಪ್ರತಿ ಸಂಚಿಕೆಯಿಂದ ಪ್ರಧಾನ ಮಂತ್ರಿಯ ಸಂಬಂಧಿತ ಧ್ವನಿ ಬೈಟ್‌ಗಳನ್ನು ಎಲ್ಲಾ ಬುಲೆಟಿನ್‌ಗಳಲ್ಲಿ ಮತ್ತು ಎಐಆರ್ ನೆಟ್‌ವರ್ಕ್‌ನಾದ್ಯಂತ ಇತರ ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ಅಭಿಯಾನವು ಮಾ.15 ರಿಂದ ಪ್ರಸಾರವಾಗಲಿದೆ ಮತ್ತು 100ನೇ ಸಂಚಿಕೆಗೆ ಒಂದು ದಿನ ಮುಂಚಿತವಾಗಿ ಏಪ್ರಿಲ್ 29 ರಂದು ಮುಕ್ತಾಯಗೊಳ್ಳುತ್ತದೆ. ದೇಶದ 42 ವಿವಿಧ ಭಾರತಿ ಕೇಂದ್ರಗಳು, 25 ಎಫ್‌ಎಂ ರೇನ್‌ಬೋ ಚಾನೆಲ್‌ಗಳು, 4 ಎಫ್‌ಎಂ ಗೋಲ್ಡ್ ಚಾನೆಲ್‌ಗಳು ಮತ್ತು 159 ಪ್ರಾಥಮಿಕ ಚಾನೆಲ್‌ಗಳು ಸೇರಿದಂತೆ ವಿವಿಧ ಎಐಆರ್ ಕೇಂದ್ರಗಳು ಅಭಿಯಾನ ನಡೆಸುತ್ತವೆ.

ಬೈಟ್‌ಗಳನ್ನು ಎಲ್ಲಾ ಪ್ರಮುಖ ಬುಲೆಟಿನ್‌ಗಳಲ್ಲಿ ಪ್ರಸಾರ ಮಾಡಬೇಕು. ನಾಗರಿಕರು 'ನ್ಯೂಸ್ ಆನ್ ಏರ್' ಆಪ್ ಮತ್ತು ಆಲ್ ಇಂಡಿಯಾ ರೇಡಿಯೋದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾರ್ಯಕ್ರಮವನ್ನು ಆಲಿಸಬಹುದು. ರೇಡಿಯೋ, ಮನ್ ಕಿ ಬಾತ್ ಮಾಧ್ಯಮದ ಮೂಲಕ ನಾಗರಿಕರೊಂದಿಗೆ ಪ್ರಧಾನ ಮಂತ್ರಿಯವರ ಅನನ್ಯ ಮತ್ತು ನೇರ ಸಂವಹನವು ಇಲ್ಲಿಯವರೆಗೆ 98 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಇದು ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಢಾವೋ, ಜಲ ಸಂರಕ್ಷಣೆ, ಸ್ಥಳೀಯರಿಗೆ ಧ್ವನಿ ಮುಂತಾದ ಸಾಮಾಜಿಕ ಬದಲಾವಣೆಗಳ ಮೂಲ ಆಗಿದೆ.

ಈ ಕಾರ್ಯಕ್ರಮವು ಖಾದಿ, ಭಾರತೀಯ ಆಟಿಕೆ ಉದ್ಯಮ, ಆರೋಗ್ಯ, ಆಯುಷ್, ಬಾಹ್ಯಾಕಾಶ ಇತ್ಯಾದಿಗಳಲ್ಲಿ ಸ್ಟಾರ್ಟ್‌ಅಪ್‌ಗಳಂತಹ ಕೈಗಾರಿಕೆಗಳ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದೆ.

ಇದನ್ನೂ ಓದಿ: ಪದ್ಮ ಪ್ರಶಸ್ತಿ ಪುರಸ್ಕೃತರ ಬಗ್ಗೆ ಓದಿ ತಿಳಿದುಕೊಳ್ಳಿ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.