ETV Bharat / bharat

ದೇಶದ ಪ್ರಜಾಪ್ರಭುತ್ವದ ಯಶಸ್ಸು ಕೆಲವರಿಗೆ ನೋವುಂಟು ಮಾಡಿದೆ: ಪ್ರಧಾನಿ ಮೋದಿ ವಾಗ್ದಾಳಿ

author img

By

Published : Mar 19, 2023, 11:42 AM IST

ರಾಹುಲ್​ ಗಾಂಧಿ ಅವರ ಲಂಡನ್​ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಷೇಪಿಸಿದ್ದಾರೆ. ದೇಶದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಯಶಸ್ಸು ಅವರನ್ನು ಕಂಗೆಡಿಸಿದೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

ರಾಹುಲ್​ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್
ರಾಹುಲ್​ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್

ನವದೆಹಲಿ: ಭಾರತದ ಪ್ರಜಾಪ್ರಭುತ್ವ ಸಂಕಷ್ಟಲ್ಲಿದೆ. ಅಮೆರಿಕ, ಯುರೋಪ್​ ರಾಷ್ಟ್ರಗಳು ನೆರವಿಗೆ ಬರಬೇಕು ಎಂದು ಇತ್ತೀಚೆಗೆ ಲಂಡನ್​ನಲ್ಲಿ ಉಪನ್ಯಾಸ ನೀಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಟೀಕಾಪ್ರಹಾರ ನಡೆಸಿದ್ದಾರೆ. "ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಯಶಸ್ಸು ಕೆಲವರನ್ನು ನೋಯಿಸಿದೆ. ಹೀಗಾಗಿ ಅಂಥವರು ಅದರ ಮೇಲೆಯೇ ದಾಳಿ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಇಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಭಾರತ ಈಗ ಹೊಸ ದಿಕ್ಕಿನೆಡೆಗೆ, ಹೊಸ ಮನ್ವಂತರ ಕಾಣುತ್ತಿದೆ. ಇದು ಕೆಲವರನ್ನು ಇನ್ನಿಲ್ಲದಂತೆ ಘಾಸಿ ಮಾಡುತ್ತಿದೆ. ದೇಶ ಅತ್ಯಂತ ಆತ್ಮವಿಶ್ವಾಸದಲ್ಲಿ ಇರುವ ವೇಳೆ ವಿಶ್ವದ ಬೌದ್ಧಿಕ ಸಮುದಾಯ ಭಾರತದ ಬಗ್ಗೆ ಅಶಾಭಾವನೆ ಹೊಂದಿರುವಾಗ ನಿರಾಶಾವಾದದ ಬಗ್ಗೆ ಮಾತನಾಡಲಾಗುತ್ತಿದೆ. ದೇಶವನ್ನು ಅತ್ಯಂತ ಕೀಳಾಗಿ ಬಿಂಬಿಸುವ ಮತ್ತು ದೇಶದ ಮನೋಬಲನ್ನು ಕುಗ್ಗಿಸುವಂತಹ ಕೆಲಸಗಳು ಯಥೇಚ್ಛವಾಗಿ ನಡೆಯುತ್ತಿವೆ ಎಂದು ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೆಯೇ ಲಂಡನ್​ ಭಾಷಣದ ವಿರುದ್ಧ ಕಿಡಿಕಾರಿದರು.

ಶುಭ ಕಾರ್ಯದ ವೇಳೆ ಕಪ್ಪು ತಿಲಕ: ಏನಾದರೂ ಶುಭ ಕಾರ್ಯಗಳು ನಡೆಯುವಾಗ ಹಣೆಗೆ ಕಪ್ಪು ತಿಲಕ ಇಟ್ಟು ಅಪಶಕುನ ಮಾಡುವವರಿದ್ದಾರೆ. ಇದೀಗ ದೇಶದಲ್ಲಿ ಹಲವು ಶುಭ ಘಟನೆಗಳು ನಡೆಯುತ್ತಿವೆ. ಈ ಕಾರಣಕ್ಕಾಗಿ ಕೆಲವರು ಕಪ್ಪು ತಿಲಕ ಇಡುವ ಹೊಣೆ ಹೊತ್ತುಕೊಂಡಿದ್ದಾರೆ. ಅಂಥವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಭಾರತ ಇಡೀ ವಿಶ್ವಕ್ಕೆ ಸಾಧಿಸಿ ತೋರಿಸಿದೆ. ಈ ಯಶಸ್ಸು, ಕೆಲವರಿಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಇದನ್ನು ಸಹಿಸಲಾಗದೇ ಅದರ ಮೇಲೆಯೇ ಗೂಬೆ ಕೂರಿಸಲು ಮುಂದಾಗಿದ್ದಾರೆ. ಆದರೆ, ಇಂತಹ ದಾಳಿಯ ಹೊರತಾಗಿಯೂ ತನ್ನ ಗುರಿ ಮುಟ್ಟಲು ದೇಶ ಸಮರ್ಥವಾಗಿದೆ ಎಂದು ಹೇಳಿದರು.

ಇಡೀ ವಿಶ್ವ, ಇದು ಭಾರತದ ಯುಗ ಎಂದು ಬಣ್ಣಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಭರವಸೆಯ ಬದಲಾವಣೆ ಮತ್ತು ದೇಶದೊಳಗಿನ ಸಾಧನೆ. ಎಲ್ಲಾ ಸರ್ಕಾರಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ ತಕ್ಕ ಫಲಿತಾಂಶ ಪಡೆದಿವೆ. ನಮ್ಮ ಸರ್ಕಾರವೂ ಹೊಸ ಫಲಿತಾಂಶ ಪಡೆಯಲು ವಿಭಿನ್ನ ವೇಗದಲ್ಲಿ ಕೆಲಸ ಮಾಡುತ್ತಿದೆ. ಹೊಸತನವನ್ನು ಸಾಧಿಸುತ್ತಿದೆ ಎಂದು ಸರ್ಕಾರದ ಸಾಧನೆಯನ್ನು ಪ್ರಧಾನಿ ಮೋದಿ ಇದೇ ವೇಳೆ ಬಣ್ಣಿಸಿದರು.

'ಜೊತೆಗೂಡುತ್ತಿರುವ ಭ್ರಷ್ಟರು': ಈ ಹಿಂದಿನ ಸರ್ಕಾರಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವಾದ ಬಗ್ಗೆ ಸುದ್ದಿಯಾಗುತ್ತಿದ್ದವು. ಈಗ ಭ್ರಷ್ಟಾಚಾರದ ಮೇಲೆ ನಮ್ಮ ಸರ್ಕಾರ ಸಾಧಿಸಿದ ಕಠಿಣ ಕ್ರಮದಿಂದಾಗಿ ಭಯಭೀತರಾದ ಭ್ರಷ್ಟರು ಒಂದಾಗುತ್ತಿರುವುದು ಸುದ್ದಿಯಾಗಿವೆ. ದೇಶದ ವಿವಿಧ ಸಂಸ್ಥೆಗಳು ತಮ್ಮ ಅಗಾಧತೆಯಲ್ಲಿ ಕೆಲಸ ಮಾಡುತ್ತಿವೆ. ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆ, ಜಾಗತಿಕ ಬಿಕ್ಕಟ್ಟಿನ ನಡುವೆ ಉತ್ತಮ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇದೇ ವೇಳೆ ಶ್ಲಾಘಿಸಿದರು.

'ಅಪಾಯದಲ್ಲಿ ಕಾಂಗ್ರೆಸ್​, ದೇಶವಲ್ಲ': ನಿಜವಾಗಿಯೂ ಅಪಾಯದಲ್ಲಿರುವುದು ಹಳೆಯ ಕಾಂಗ್ರೆಸ್​ ಪಕ್ಷವೇ ಹೊರತು ದೇಶವಲ್ಲ. ಹೀಗಾಗಿ ಅವರು ದೇಶದ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಹೇಳಿಕೆ, ನಿರ್ಧಾರಗಳು ಅತ್ಯಂತ ಖಂಡನೀಯ. ಜನರನ್ನು ವಿಭಜಿಸುವುದು ಕಾಂಗ್ರೆಸ್​ಗೆ ಗೊತ್ತು. ಪ್ರಸ್ತುತ ದೇಶದಲ್ಲಿ ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು, ಪ್ರಜಾಪ್ರಭುತ್ವವಲ್ಲ. ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿದ್ದಾರೆ ಎಂಬ ಕಾರಣಕ್ಕಾಗಿ ರಾಹುಲ್ ಗಾಂಧಿ ವಿದೇಶದಲ್ಲಿ ಕುಳಿತು ದೇಶವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಟ್ರಂಪ್‌ರನ್ನು ಬಂಧಿಸಿದ್ರೆ ಚುನಾವಣೆಯಲ್ಲಿ ಅವರಿಗೆ ಪ್ರಚಂಡ ಗೆಲುವು: ಎಲಾನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.