ETV Bharat / bharat

ಪ್ರಧಾನಿ ಭದ್ರತಾ ಲೋಪ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾದ ಪಂಜಾಬ್ ಸರ್ಕಾರ

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್​ಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪ ಉಂಟಾದ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಭಗವಂತ್​ ಮಾನ್​ ಸೂಚಿಸಿದ್ದಾರೆ.

ಪ್ರಧಾನಿ ಭದ್ರತಾ ಲೋಪ
ಪ್ರಧಾನಿ ಭದ್ರತಾ ಲೋಪ
author img

By

Published : Mar 21, 2023, 12:28 PM IST

ಚಂಡೀಗಢ (ಪಂಜಾಬ್​): ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್​ಗೆ ಭೇಟಿ ನೀಡಿದಾಗ ಭದ್ರತಾಲೋಪ ಉಂಟಾಗಿ ದೆಹಲಿಗೆ ವಾಪಸಾಗಿದ್ದರು. ಇದು ಆತಂಕ ಸೃಷ್ಟಿಸಿದ್ದಲ್ಲದೇ, ಪ್ರಧಾನಿಗೆ ಭದ್ರತೆ ನೀಡದ ಪಂಜಾಬ್‌ನ ಆಪ್​ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ಇದೀಗ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಸಿಂಗ್​ ಮಾನ್​ ಸೂಚಿಸಿದ್ದಾರೆ.

ಪ್ರಧಾನಿ ಭೇಟಿ ನೀಡುವ ಮಾರ್ಗದ ನಿರ್ವಹಣೆ ಹೊಣೆ ಹೊತ್ತಿದ್ದ ಅಂದಿನ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಎಸ್ ಚಟ್ಟೋಪಾಧ್ಯಾಯ, ಡೆಪ್ಯುಟಿ ಇನ್ಸ್​​ಪೆಕ್ಟರ್​ ಜನರಲ್​(ಡಿಐಜಿ) ಇಂದರ್‌ಬೀರ್ ಸಿಂಗ್ ಮತ್ತು ಫಿರೋಜ್‌ಪುರದ ಅಂದಿನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಹರ್ಮನ್‌ದೀಪ್ ಸಿಂಗ್ ಹನ್ಸ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪಂಜಾಬ್​ ಸಿಎಂ ಆದೇಶಿಸಿದ್ದಾರೆ. ಈ ಅಧಿಕಾರಿಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಗೃಹ ವ್ಯವಹಾರಗಳ ಇಲಾಖೆಯು ಸಿಬ್ಬಂದಿ ಇಲಾಖೆಗೆ ನೀಡಿದ ಮಾಹಿತಿಯ ಪ್ರಕಾರ, ನರೇಶ್ ಅರೋರಾ, ಆಗಿನ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ), ಜಿ.ನಾಗೇಶ್ವರ ರಾವ್, ಆಗಿನ ಸೈಬರ್ ಕ್ರೈಮ್ ಎಡಿಜಿಪಿ, ಮುಖವಿಂದರ್ ಸಿಂಗ್ ಛಿನಾ, ಪಟಿಯಾಲ ರೇಂಜ್​ನ ಐಜಿಪಿ, ಆಗಿನ ಐಜಿ ಕೌಂಟರ್ ಇಂಟೆಲಿಜೆನ್ಸ್ ಮತ್ತು ನೋಡಲ್ ಅಧಿಕಾರಿ ರಾಕೇಶ್ ಅಗರವಾಲ್, ಡಿಐಜಿ ಫರೀದ್‌ಕೋಟ್ ಸುರ್ಜೀತ್ ಸಿಂಗ್ ಮತ್ತು ಎಸ್‌ಎಸ್‌ಪಿ ಮೊಗಾ ಚರಂಜಿತ್ ಸಿಂಗ್ ಅವರ ವಿರುದ್ಧ ಸುಪ್ರೀಂಕೋರ್ಟ್​ ರಚಿಸಿದ್ದ ತನಿಖಾ ಸಮಿತಿ ವರದಿ ನೀಡಿತ್ತು. ಇದರ ಆಧಾರದ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಿತ್ತು. ಇದನ್ನೇ ಆಧರಿಸಿ ಸಿಎಂ ಕೂಡ ಈ ನಿರ್ಧಾರಕ್ಕೆ ಬಂದಿದ್ದಾರೆ.

ಅಂದು ನಡೆದಿದ್ದೇನು?: 2022ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಪಂಜಾಬ್‌ಗೆ ಅಧಿಕೃತ ಭೇಟಿ ನೀಡಿದ್ದರು. ರ್ಯಾಲಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬಂಟಿಂಡಾದಿಂದ ಹುಸೇನಿವಾಲಾಗೆ ಹೆಲಿಕಾಪ್ಟರ್​ನಲ್ಲಿ ತೆರಳಬೇಕಿತ್ತು. ಆದರೆ, ಮಳೆಯಿಂದಾಗಿ ರಸ್ತೆ ಮಾರ್ಗವಾಗಿ ತೆರಳಿದ್ದರು. ಪ್ರಧಾನಿ ಆಗಮಿಸುತ್ತಿದ್ದ ವೇಳೆ ರೈತರು ಮಾರ್ಗಕ್ಕೆ ತಡೆಯೊಡ್ಡಿದ್ದರು. ಈ ಕಾರಣಕ್ಕೆ ಮೋದಿ ಅವರು ಸುಮಾರು 15 ರಿಂದ 20 ನಿಮಿಷಗಳ ಕಾಲ ಫ್ಲೈ ಓವರ್ ಮೇಲೆ ಸಿಲುಕಿಕೊಂಡಿದ್ದರು.

20 ನಿಮಿಷ ಕಳೆದರೂ ರೈತರ ಪ್ರತಿಭಟನೆ ಮುಗಿಯದ ಕಾರಣ ಸ್ಥಳದಲ್ಲಿ ಅನಿಶ್ಚಿಯ ವಾತಾವರಣದಿಂದಾಗಿ ಪ್ರಧಾನಿ ಮೋದಿ ಅವರು ಎಸ್​ಪಿಜಿ ಸಲಹೆಯ ಮೇರೆಗೆ ಉದ್ದೇಶಿತ ಕಾರ್ಯಕ್ರಮವನ್ನು ಮೊಟಕುಗೊಳಿಸಿ ವಾಪಸ್‌ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ್ದರು. ಇದು ಪಂಜಾಬ್​ ಸರ್ಕಾರದ ಭಾರೀ ಭದ್ರತಾ ವೈಫಲ್ಯ ಎಂದು ಕೇಂದ್ರ ಸರ್ಕಾರ ಟೀಕಿಸಿತ್ತು. ಅಲ್ಲದೇ, ಈ ಬಗ್ಗೆ ವರದಿ ನೀಡಲು ಸೂಚಿಸಿತ್ತು.

ಇದಾದ ಬಳಿಕ ಸುಪ್ರೀಂ ಕೋರ್ಟ್​ ಪ್ರಕರಣದ ಉಲ್ಲಂಘನೆಯ ತನಿಖೆಗಾಗಿ ಸಮಿತಿಯನ್ನು ನೇಮಿಸಿತ್ತು. ಕೇಂದ್ರ ಗೃಹ ಕಾರ್ಯದರ್ಶಿ ಕಳೆದ ತಿಂಗಳು ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ದೆಹಲಿ ಬಜೆಟ್ ಮಂಡನೆಗೆ ತಡೆ: ಪ್ರಧಾನಿಗೆ ಪತ್ರ ಬರೆದ ಅರವಿಂದ್ ಕೇಜ್ರಿವಾಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.