ETV Bharat / bharat

100 ವರ್ಷ ಕಳೆದ್ರೂ ಕಾಂಗ್ರೆಸ್​ ಅಧಿಕಾರಕ್ಕೆ ಬರಲ್ಲ, ಸಂಸತ್​ನಲ್ಲಿ ಪ್ರಧಾನಿ ಮೋದಿ ಲೇವಡಿ - ಸಂಸತ್​​ನಲ್ಲಿ ಪ್ರಧಾನಿ ಮೋದಿ

ಕೇಂದ್ರ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳ ಸಮರ್ಥನೆ ಮಾಡಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸಂಸತ್​ನಲ್ಲಿ ಕಾಂಗ್ರೆಸ್​ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಈ ವೇಳೆ ಅದು ತುಕ್ಡೆ ತುಕ್ಡೆ ಗ್ಯಾಂಗ್​ನ ನಾಯಕನಾಗಿದೆ ಎಂದರು.

pm modi reply to discussion on motion of thanks

author img

By

Published : Feb 8, 2022, 3:58 AM IST

ನವದೆಹಲಿ: ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದು, ಈ ವೇಳೆ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಮುಂದಿನ 100 ವರ್ಷಗಳ ಕಾಲ ಅಧಿಕಾರಲ್ಲ ಬರಲ್ಲ ಎಂದರು.

ಈಗಾಗಲೇ ಅನೇಕ ಚುನಾವಣೆಗಳಲ್ಲಿ ಅವರು ಸೋಲು ಕಂಡಿದ್ದರೂ ಕೂಡ ದುರಹಂಕಾರದಿಂದ ಹೊರಬಂದಿಲ್ಲ. ವಾಸ್ತವದೊಂದಿಗೆ ಸಂಪರ್ಕ ಕಂಡಿದುಕೊಂಡಿರುವ ಕಾಂಗ್ರೆಸ್​​​, ಮುಂದಿನ ಚುನಾವಣೆ ಮಾತ್ರವಲ್ಲ, 100 ವರ್ಷಗಳ ಕಾಲ ದೇಶದ ಜನರು ಈ ಪಕ್ಷವನ್ನ ಅಧಿಕಾರದಿಂದ ದೂರ ಇಡಲು ನಿರ್ಧರಿಸಿದ್ದಾರೆ ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಕಾಂಗ್ರೆಸ್ ತುಕ್ಡೆ, ತುಕ್ಡೆ ಗ್ಯಾಂಗ್​ನ ನಾಯಕ ಎಂದ ಪ್ರಧಾನಿ ನರೇಂದ್ರ ಮೋದಿ, ಈ ಪಕ್ಷ ಒಡೆದು ಆಳುವ ನೀತಿ ಹೊಂದಿದೆ. ಆ ಪಕ್ಷದಲ್ಲಿ ನಾಯಕರು ಹೇಳಿಕೆ, ನಡುವಳಿಕೆ ನೋಡಿದರೆ ಅದಕ್ಕೆ ಅಧಿಕಾರದ ಹಸಿವಿಲ್ಲ ಎಂಬುದು ಗೊತ್ತಾಗುತ್ತದೆ. ಅದೇ ಕಾರಣಕ್ಕಾಗಿ ಪ್ರತ್ಯೇಕವಾದಿಗಳ ಗುಂಪು ಬಲಪಡಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಇದೇ ವೇಳೆ ಕಾಂಗ್ರೆಸ್​ನ ಅದೀರ್ ರಂಜನ್​ ಚೌಧರಿ ವಿರುದ್ಧ ವ್ಯಂಗ್ಯವಾಡಿ,ರಂಜನ್ ಚೌಧರಿಗೆ ಬಾಲ್ಯವನ್ನು ಆನಂದಿಸಲು ಅವಕಾಶ ನೀಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಾವು ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದೇವೆ ಎಂದ ನಮೋ, ಆತ್ಮನಿರ್ಭರ ಭಾರತಕ್ಕೆ ಕಾಂಗ್ರೆಸ್​ ಅಡ್ಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಪ್ರಜಾಪ್ರಭುತ್ವಕ್ಕೆ ಬದ್ಧರಾಗಿದ್ದೇವೆ ಎಂದಿರುವ ನಮೋ, ಟೀಕೆ ಮಾಡುವುದು ಪ್ರಜಾಪ್ರಭುತ್ವದ ಅಂಗಗಳಲ್ಲಿ ಒಂದಾಗಿದೆ. ಆದರೆ, ಕುರುಡು ಪ್ರತಿಭಟನೆ, ಸಾರ್ವಜನಿಕ ವ್ಯವಸ್ಥೆಗೆ ಅಗೌರವ ಸರಿಯಲ್ಲ. ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವೇ ಮಹಾಮಾರಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹದ್ದು ಮೀರಿ ವರ್ತಿಸಿದೆ.

ಇದನ್ನೂ ಓದಿರಿ: ಪಿಎಂ ಕೇರ್ಸ್​​ ಫಂಡ್​ನಲ್ಲಿ ₹10,990 ಕೋಟಿ ಸಂಗ್ರಹ... ಬಳಕೆಯಾಗಿದ್ದು ಮಾತ್ರ ₹3,976 ಕೋಟಿ!

ಕೊರೊನಾ ಸಂದರ್ಭದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ತಿಳಿಸಲಾಯಿತು. ಕಾಂಗ್ರೆಸ್ ಇದನ್ನ ವಿರೋಧಿಸಿದೆ. ಇದರ ಜೊತೆಗೆ ಫಿಟ್ ಇಂಡಿಯಾ ಆಂದೋಲನಕ್ಕೂ ನಿಮ್ಮ ವಿರೋಧ ವ್ಯಕ್ತವಾಯಿತು. ಕೋವಿಡ್ ಸಂಕಷ್ಟದಲ್ಲೂ ನಾವು ಹಣದುಬ್ಬರ ನಿಯಂತ್ರಣ ಮಾಡಿದ್ದೇವೆ. ದೇಶದ ಉದ್ಯಮಿಗಳು ವೈರಸ್​​ಗಳು ಎಂದು ಕಾಂಗ್ರೆಸ್ ಪಕ್ಷ ಹೇಳುತ್ತದೆ. ಬರುವ ದಿನಗಳಲ್ಲಿ ನೀವೂ ಪಾಠ ಕಲಿಯದಿದ್ದರೆ, ಇತಿಹಾಸದಿಂದಲೇ ಕಳೆದು ಹೋಗುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಈಗಾಗಲೇ ಅನೇಕ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಿದ್ದೇವೆ. ಬಡವರ ಮನೆಗಳಲ್ಲಿ ವಿದ್ಯುತ್​, ಕುಡಿಯುವ ನೀರು ಹಾಗೂ ಶೌಚಾಲಯ ನಿರ್ಮಾಣ ಮಾಡಲಾಗಿದೆ ಇದರ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. 50 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿರುವ ನೀವೂ ಬಡವರಿಗೋಸ್ಕರ ಏನು ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.