ETV Bharat / bharat

ಮೋದಿ ವಿಶ್ವದಲ್ಲೇ ಜನಪ್ರಿಯ ನಾಯಕ... ಮಾರ್ನಿಂಗ್​ ಕನ್ಸಲ್ಟ್​​ ಸಮೀಕ್ಷೆಯಲ್ಲಿ ನಂಬರ್​ 1 ಸ್ಥಾನ

author img

By ETV Bharat Karnataka Team

Published : Dec 9, 2023, 6:31 AM IST

Updated : Dec 9, 2023, 7:06 AM IST

ಪ್ರಧಾನಿ ಮೋದಿ ಜಾಗತಿಕ ರೇಟಿಂಗ್‌ನಲ್ಲಿ ಮತ್ತೊಮ್ಮೆ ನಂಬರ್​ ಒನ್​ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಮೋದಿ ಜನಪ್ರಿಯತೆ ರೇಟಿಂಗ್​ ಏರಿಕೆ ಕಾಣುತ್ತಲೇ ಸಾಗಿದೆ. ಆದರೆ ಇತರ ದೊಡ್ಡ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ಗಳು ಸಾಧಾರಣ ಮಟ್ಟದಲ್ಲಿರುವುದು ಗಮನಾರ್ಹ.

PM Modi remains global leader with highest approval ratings: Morning Consult
ಮೋದಿ ವಿಶ್ವದಲ್ಲೇ ಜನಪ್ರಿಯ ನಾಯಕ... ಮಾರ್ನಿಂಗ್​ ಕನ್ಸಲ್ಟ್​​ ಸಮೀಕ್ಷೆಯಲ್ಲಿ ನಂಬರ್​ 1 ಸ್ಥಾನ

ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಎಂಬ ಪಟ್ಟ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು 76 ಶೇಕಡಾ ಮತಗಳನ್ನು ಪಡೆಯುವ ಮೂಲಕ ವಿಶ್ವ ನಾಯಕರಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ಅಮೆರಿಕ ಮೂಲದ ಕನ್ಸಲ್ಟೆನ್ಸಿ ಸಂಸ್ಥೆ 'ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ಪ್ರಕಾರ ಭಾರತದಲ್ಲಿ ಶೇಕಡಾ 76 ರಷ್ಟು ಜನರು ಪ್ರಧಾನಿ ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಶೇಕಡಾ 18 ರಷ್ಟು ಜನರು ಮೋದಿ ಅವರ ಬಗ್ಗೆ ಒಲವು ತೋರಿಸಿಲ್ಲ. ಇನ್ನು ಶೇ ಆರಷ್ಟು ಜನ ಯಾವುದೇ ಅಭಿಪ್ರಾಯವನ್ನು ನೀಡಲು ನಿರಾಕರಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, 9.5 ವರ್ಷಗಳ ಆಡಳಿತದ ಬಳಿಕವೂ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದಾರೆ. ಅವರಿಗೆ ಬಂದ ಮತಗಳೇ ಇದಕ್ಕೆ ಸಾಕ್ಷಿ. ಎರಡನೇ ಅತ್ಯುತ್ತಮ ಅನುಮೋದನೆಯ ರೇಟಿಂಗ್​ ಪಡೆದುಕೊಂಡಿರುವುದು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್. ಇವರನ್ನು ಶೇ 66 ರಷ್ಟು ಮಂದಿ ಅನುಮೋದಿಸಿದ್ದಾರೆ. ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಶೇ 58 ರಷ್ಟು ಮಂದಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವರು ಮೂರನೇ ಸ್ಥಾನದಲ್ಲಿದ್ದಾರೆ.

ಹಿಂದಿನ ಸಮೀಕ್ಷೆಗಳಲ್ಲೂ ಪ್ರಧಾನಿ ಮೋದಿ ಜಾಗತಿಕ ರೇಟಿಂಗ್‌ನಲ್ಲಿ ನಂಬರ್​ ಒನ್​ ಸ್ಥಾನದಲ್ಲಿದ್ದರು. ಮೋದಿ ಜನಪ್ರಿಯತೆ ರೇಟಿಂಗ್​ ಏರಿಕೆ ಕಾಣುತ್ತಿದ್ದರೆ, ಇತರ ದೊಡ್ಡ ಜಾಗತಿಕ ನಾಯಕರ ಅನುಮೋದನೆ ರೇಟಿಂಗ್‌ಗಳು ಸಾಧಾರಣ ಮಟ್ಟದಲ್ಲಿರುವುದು ಗಮನಾರ್ಹ. ಅಮೆರಿಕ ಅಧ್ಯಕ್ಷ ಜೋ ಬೈಡನ್​ ಕೇವಲ ಶೇ 37 ರಷ್ಟು ಅನುಮೋದನೆ ಮತಗಳನ್ನು ಪಡೆಯುವ ಮೂಲಕ ಹಿನ್ನಡೆ ಅನುಭವಿಸಿದ್ದಾರೆ. ಕೆನಡಾದ ಪಿಎಂ ಜಸ್ಟಿನ್ ಟ್ರುಡೊ ಶೇಕಡಾ 31, ಇಂಗ್ಲೆಂಡ್​ ಪ್ರಧಾನಿ ರಿಷಿ ಸುನಕ್ ರೇಟಿಂಗ್ ಶೇಕಡಾ 25ರಷ್ಟಿದೆ. ಇನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೇವಲ ಶೇಕಡಾ 24 ರಷ್ಟು ಅನುಮೋದನಾ ಮತಗಳನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಭಾರಿ ವಿಜಯ ದಾಖಲಿಸಿದೆ. ಈ ರಾಜ್ಯಗಳ ಫಲಿತಾಂಶದ ಬಳಿಕ ಬಂದ ಜಾಗತಿಕ ರೇಟಿಂಗ್ ಇದಾಗಿದೆ. 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ಮತ್ತು ಅವರ ಪಕ್ಷಕ್ಕೆ ಇದು ಭಾರಿ ಉತ್ತೇಜನ ನೀಡಲಿದೆ ಎಂದು ಪರಿಗಣಿಸಲಾಗಿದೆ.

ಏತನ್ಮಧ್ಯೆ, ಪ್ರಧಾನಿ ಮೋದಿ ಇತ್ತೀಚೆಗೆ ಯುಎಇಯಲ್ಲಿ ನಡೆದ ಕಾಪ್​​ 28 ಶೃಂಗಸಭೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. ಈ ಸಮ್ಮೇಳನದ ಕೇಂದ್ರ ಬಿಂದುವಾಗಿದ್ದರು. ಅನೇಕ ಜಾಗತಿಕ ನಾಯಕರೊಂದಿಗೆ ಮಾತುಕತೆ ನಡೆಸಿ, ಸೆಂಟರ್​ ಆಫ್​ ಅಟ್ರ್ಯಾಕ್ಷನ್ ಕೂಡಾ ಆಗಿದ್ದರು. ಜಾಗತಿಕ ಪಿಡುಗಾಗಿ ಕಾಡುತ್ತಿರುವ ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನಗಳ ಭಾಗವಾಗಿ, ಈ ಶೃಂಗ ಭಾರಿ ಮಹತ್ವ ಪಡೆದುಕೊಂಡಿತ್ತು.(ANI)

ಇದನ್ನು ಓದಿ: ರಾಷ್ಟ್ರ ಹಿತಾಸಕ್ತಿ ವಿಷಯದಲ್ಲಿ ಮೋದಿಯವರ ಕಠಿಣ ನಿಲುವು ಶ್ಲಾಘನೀಯ: ಪುಟಿನ್

Last Updated : Dec 9, 2023, 7:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.