ETV Bharat / bharat

ಜವಾಹರಲಾಲ್ ನೆಹರು ಜನ್ಮದಿನ: ಕೊಡುಗೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ - etv bharat kananda

ಇಂದು ದೇಶದ ಪ್ರಪ್ರಥಮ ಪ್ರಧಾನಿ ದಿ.ಜವಾಹರಲಾಲ್ ಅವರ 133ನೇ ಜನ್ಮದಿನ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ, ನೆಹರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.

PM Modi pays tribute to Nehru on his birth anniversary
ಜವಾಹರಲಾಲ್ ನೆಹರು ಜನ್ಮದಿನ; ಶುಭಾಶಯ ಕೋರಿದ ಪ್ರಧಾನಿ ಮೋದಿ
author img

By

Published : Nov 14, 2022, 12:24 PM IST

ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರ 133ನೇ ಜನ್ಮ ಜಯಂತಿಯ ಹಿನ್ನೆಲೆಯಲ್ಲಿ ಅವರ ಕೊಡುಗೆಯನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದಾರೆ. 'ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ಜಯಂತಿಗೆ ಗೌರವಗಳನ್ನು ಸಲ್ಲಿಸುತ್ತಿದ್ದೇವೆ. ಜೊತೆಗೆ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನೂ ಸ್ಮರಿಸುತ್ತೇವೆ' ಎಂದು ತಿಳಿಸಿದ್ದಾರೆ.

  • On his birth anniversary, tributes to our former PM Pandit Jawaharlal Nehru Ji. We also recall his contribution to our nation.

    — Narendra Modi (@narendramodi) November 14, 2022 " class="align-text-top noRightClick twitterSection" data=" ">

ಜವಾಹರ ಲಾಲ್‌ ನೆಹರು ಅವರು ನವೆಂಬರ್ 14, 1889 ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು. ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಲವು ಬಾರಿ ಜೈಲುವಾಸ ಅನುಭವಿಸಿದ್ದರು. ನಂತರ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಸುಮಾರು 17 ವರ್ಷಗಳ ಕಾಲ ದೇಶದ ಅಧಿಕಾರದಲ್ಲಿದ್ದದ್ದು ಇತಿಹಾಸ. ಮೇ 27, 1964 ರಂದು ತನ್ನ ಕಚೇರಿಯಲ್ಲಿಯೇ ನಿಧನರಾದರು. ನವೆಂಬರ್‌ 14ರ ಈ ದಿನವನ್ನು ದೇಶದಲ್ಲಿ ಮಕ್ಕಳ ದಿನಾಚರಣೆಯೆಂದೇ ಆಚರಿಸಲಾಗುತ್ತದೆ.

ಇದನ್ನೂ ಓದಿ:ಪಂಡಿತ್ ನೆಹರೂ ಜನ್ಮದಿನ: ದೇಶದ ಮೊದಲ ಪ್ರಧಾನಿಗೆ ಸೋನಿಯಾ, ಖರ್ಗೆ ನಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.