ಭೋಪಾಲ್: ಮರು ನಾಮಕರಣಗೊಂಡ ದೇಶದ ಮೊದಲ ISO ಪ್ರಮಾಣೀಕೃತ ( ISO certified Railway Station) ರೈಲು ನಿಲ್ದಾಣವಾದ ರಾಣಿ ಕಮಲಾಪತಿ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ( PM Narendra Modi ) ಇಂದು ಉದ್ಘಾಟಿಸಿದರು.
ಈ ನಿಲ್ದಾಣವನ್ನು ಹಿಂದೆ ಹಬೀಬ್‌ಗಂಜ್ ಸ್ಟೇಷನ್( Heidelberg railway ) ಎಂದು ಕರೆಯಲಾಗುತ್ತಿತ್ತು. ಇದನ್ನು ಜರ್ಮನಿಯ ಪ್ರಸಿದ್ಧ ಹೈಡೆಲ್‌ಬರ್ಗ್ ರೈಲು ನಿಲ್ದಾಣದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನವೆಂಬರ್ 13 ರಂದು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯಂತೆ ಹೆಸರನ್ನು ಬದಲಾಯಿಸಲಾಗಿದೆ.
-
देश का पहला वर्ल्ड क्लास रेलवे स्टेशन
— Jansampark MP (@JansamparkMP) November 14, 2021 " class="align-text-top noRightClick twitterSection" data="
---
प्रधानमंत्री श्री @narendramodi 15 नवंबर को भगवान बिरसा मुंडा की जयन्ती पर करेंगे भोपाल में स्थित 'रानी कमलापति' रेलवे स्टेशन का लोकार्पण। #जनजाति_गौरव_दिवस pic.twitter.com/Jl2IRopNsc
">देश का पहला वर्ल्ड क्लास रेलवे स्टेशन
— Jansampark MP (@JansamparkMP) November 14, 2021
---
प्रधानमंत्री श्री @narendramodi 15 नवंबर को भगवान बिरसा मुंडा की जयन्ती पर करेंगे भोपाल में स्थित 'रानी कमलापति' रेलवे स्टेशन का लोकार्पण। #जनजाति_गौरव_दिवस pic.twitter.com/Jl2IRopNscदेश का पहला वर्ल्ड क्लास रेलवे स्टेशन
— Jansampark MP (@JansamparkMP) November 14, 2021
---
प्रधानमंत्री श्री @narendramodi 15 नवंबर को भगवान बिरसा मुंडा की जयन्ती पर करेंगे भोपाल में स्थित 'रानी कमलापति' रेलवे स्टेशन का लोकार्पण। #जनजाति_गौरव_दिवस pic.twitter.com/Jl2IRopNsc
ನಿಲ್ದಾಣದಲ್ಲಿ ಸುಮಾರು 300 ಕಾರುಗಳು, 800ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, ರಿಕ್ಷಾಗಳು, ಟ್ಯಾಕ್ಸಿಗಳು ಮತ್ತು ಬಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಡ್ರಾಪ್ ಆಫ್ ಝೋನ್‌ಗೆ ಪ್ರತ್ಯೇಕ ಲೈನ್ ಮಾಡಲಾಗಿದೆ. ಪಾದಚಾರಿಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗವಿದೆ.
ರಾಣಿ ಕಮಲಾಪತಿ ನಿಲ್ದಾಣದಲ್ಲಿ(Rani Kamlapati Railway) ಆಧುನಿಕ ರೆಸ್ಟೋರೆಂಟ್ ಕೂಡ ಇದೆ. ಫುಡ್ ಕೋರ್ಟ್ ನಲ್ಲಿ ಪ್ರಯಾಣಿಕರಿಗೆ ಕೆಫೆಟೇರಿಯಾ ಸೌಲಭ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಸ್ಮೆಟಿಕ್ ಸೆಂಟರ್ ಸ್ಪಾ ಮತ್ತು ಸಲೂನ್ ಸೌಲಭ್ಯವೂ ಲಭ್ಯವಾಗಲಿದೆ. ಮಕ್ಕಳ ಮನರಂಜನೆಗಾಗಿ ಟಾಯ್ ಟ್ರೈನ್ ಕೂಡ ಇರಲಿದೆ.
ಓದಿ: ಹಂಸಲೇಖ ಅವರು ಪರಿಜ್ಞಾನದಿಂದ ಪೇಜಾವರರ ಶ್ರೀಗಳ ಬಗ್ಗೆ ಮಾತಾಡಬೇಕಿತ್ತು: ಪ್ರತಾಪಸಿಂಹ ವಾಗ್ದಾಳಿ
ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಕಾಯ್ದಿರಿಸದ ಟಿಕೆಟ್‌ಗಳನ್ನು ತೆಗೆದುಕೊಳ್ಳಲು ಪ್ರತ್ಯೇಕ ಕೌಂಟರ್‌ಗಳಿವೆ. ಮೆಟ್ರೋ ನಿಲ್ದಾಣಕ್ಕೂ ಈ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ. ನಿಲ್ದಾಣದಲ್ಲಿ ವಿಕಲಚೇತನ ಪ್ರಯಾಣಿಕರಿಗೆ ಮೆಟ್ಟಿಲುಗಳ ಬದಲಿಗೆ ರ‍್ಯಾಂಪ್‌ಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಗಾಲಿಕುರ್ಚಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಮಲಾಪತಿ ರೈಲು ನಿಲ್ದಾಣದ ನೂತನ ಕಟ್ಟಡದಲ್ಲಿ 660 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಲಾಂಟ್ ಇದೆ. ಕಟ್ಟಡದಲ್ಲಿ ಉತ್ತಮ ವಾತಾಯನ ವ್ಯವಸ್ಥೆಯನ್ನೂ ಮಾಡಲಾಗಿದೆ. ಎಲ್ಲ ದೀಪಗಳು ಎಲ್ ಇಡಿ, ಪಂಚತಾರಾ ರೇಟಿಂಗ್ ಹೊಂದಿರುವ ಫ್ಯಾನ್ ಗಳನ್ನು ಅಳವಡಿಸಲಾಗಿದೆ.
ಜುಲೈ 14, 2016 ರಂದು, PPP ಅಂದರೆ ಸಾರ್ವಜನಿಕ - ಖಾಸಗಿ ಸಹಭಾಗಿತ್ವದ ಅಡಿ, 1979 ರಲ್ಲಿ ನಿರ್ಮಿಸಲಾದ ನಿಲ್ದಾಣವನ್ನು ಆಧುನೀಕರಿಸುವ ಗುತ್ತಿಗೆ ನೀಡಿತ್ತು. ಸುಮಾರು 5 ವರ್ಷಗಳ ನಂತರ ಜುಲೈ 2021 ರಲ್ಲಿ ಈ ಆಧುನಿಕ ನಿಲ್ದಾಣವು ಸಿದ್ಧವಾಗಿದೆ.
ಇದು ದೇಶದ ಮೊದಲ ISO - 9001 ಪ್ರಮಾಣೀಕೃತ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಭಾರತದ ಮೊದಲ ಪ್ರಮಾಣೀಕೃತ ರೈಲು ಶಾನ್ - ಎ - ಭೋಪಾಲ್ ಎಕ್ಸ್‌ಪ್ರೆಸ್‌ನ ಪ್ರಧಾನ ಕಚೇರಿಯಾಗಿದೆ, ಇಲ್ಲಿ ಅನೇಕ ದೊಡ್ಡ ರೈಲುಗಳು ನಿಲುಗಡೆಗಳನ್ನು ಹೊಂದಿವೆ.