ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಲ್ಲದೇ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೂಡ ಇಂದು ನಡೆಯಲಿರುವ ಪಕ್ಷದ ಸಂಸದೀಯ ಸಭೆಯಲ್ಲಿ ಮಾತನಾಡುವ ಸಾಧ್ಯತೆಯಿದೆ.
ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನಗಳು ಆರಂಭವಾದ ಅಂದಿನಿಂದ ಪೆಗಾಸಸ್, ರೈತರ ಪ್ರತಿಭಟನೆ, ಬೆಲೆ ಏರಿಕೆ ಸಂಬಂಧ ವಿಪಕ್ಷಗಳು ಗಲಭೆ ಸೃಷ್ಟಿಸಿ ಸದನಗಳನ್ನು ಮುಂದೂಡಲಾಗಿದೆ.
ಇದನ್ನೂ ಓದಿ: BSY ಆಡಳಿತದಲ್ಲಿ ಕೊರೊನಾ ಏಳು-ಬೀಳು..ಸವಾಲುಗಳಲ್ಲೇ ಕಳೆದು ಹೋಯ್ತು 2 ವರ್ಷ
ಬಿಜೆಪಿ ಸಂಸದೀಯ ಪಕ್ಷದ ಸಭೆ ಇಂದು (ಜುಲೈ 27 ರ) ಬೆಳಗ್ಗೆ 9.30ಕ್ಕೆ ಸಂಸತ್ತು ಗ್ರಂಥಾಲಯ ಕಟ್ಟಡದ (ಪಿಎಲ್‌ಬಿ) ಜಿಎಂಸಿ ಬಾಲಯೋಗಿ ಸಭಾಂಗಣದಲ್ಲಿ ಆರಂಭವಾಗಿದೆ. ಮಾನ್ಸೂನ್ ಅಧಿವೇಶನದ ಎರಡನೇ ದಿನದಂದು(ಜುಲೈ 20) ಅಧಿವೇಶನ ಪ್ರಾರಂಭಿಸುವ ಮೊದಲು ಬಿಜೆಪಿ ಸಂಸದೀಯ ಪಕ್ಷ ಸಭೆ ನಡೆಸಿತ್ತು.