ನವದೆಹಲಿ: 12 ನೇ ತರಗತಿ ಪರೀಕ್ಷೆ ಸಂಬಂಧ ಪಿಎಂ ಮೋದಿ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪರೀಕ್ಷೆಯನ್ನು ನಡೆಸಲು ಸಾಧ್ಯವಿರುವ ಎಲ್ಲ ಆಯ್ಕೆಗಳ ಬಗ್ಗೆ ಪಿಎಂ ಮೋದಿಗೆ ಮಂಡಳಿ ತಿಳಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೇ 23 ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು12 ನೇ ಪರೀಕ್ಷೆ ಸಂಬಂಧ ರಾಜ್ಯಗಳಿಂದ ವಿವರವಾದ ಸಲಹೆಗಳನ್ನು ಕೋರಿದ್ದರು.
ಪರೀಕ್ಷೆ ನಡೆಯುತ್ತದೆಯೇ ಅಥವಾ ರದ್ದುಗೊಳ್ಳುತ್ತದೆಯೇ ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ಶೀಘ್ರದಲ್ಲಿ ತೆಗೆದುಕೊಳ್ಳಲಾಗುವುದು .ಈ ಸಂಬಂಧ ಜೂನ್ 1 ರಂದು ನಿರ್ಧಾರ ಪ್ರಕಟವಾಗುತ್ತದೆ ಎಂದು ನಿಶಾಂಕ್ ಹೇಳಿದ್ದರು. ಮೇ 25 ರೊಳಗೆ ವಿವರವಾದ ಸಲಹೆಗಳನ್ನು ಕಳುಹಿಸುವಂತೆ ರಾಜ್ಯ ಸರ್ಕಾರಗಳಿಗೆ ಕೋರಲಾಗಿದೆ ಎಂದು ಅವರು ತಿಳಿಸಿದ್ದರು.