ETV Bharat / bharat

ಪರೀಕ್ಷೆಯಲ್ಲಿ ವಿಫಲವಾದರೆ, ಅದು ಜೀವನದ ಸೋಲು ಅಲ್ಲ: ವಿದ್ಯಾರ್ಥಿಗಳಿಗೆ ನಮೋ ಕಿವಿ ಮಾತು! - ವಿದ್ಯಾರ್ಥಿಗಳೊಂದಿಗೆ ನಮೋ ಸಂವಾದ

ವಿದ್ಯಾರ್ಥಿಗಳು, ಪೋಷಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಅನೇಕ ರೀತಿಯ ಕಿವಿಮಾತು ನೀಡಿದ್ದಾರೆ.

PM modi interact with student
PM modi interact with student
author img

By

Published : Apr 7, 2021, 10:10 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೇ ಚರ್ಚಾ' ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ್ದು, ಈ ವೇಳೆ ಅನೇಕ ರೀತಿಯ ಕಿವಿಮಾತು ಹೇಳಿದ್ದಾರೆ.

ನರೇಂದ್ರ ಮೋದಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ

ಮಹಾಮಾರಿ ಕೊರೊನಾ ವೈರಸ್ ಕಾರಣದಿಂದಾಗಿ ವರ್ಚುಯಲ್​​ ಆಗಿ ಪ್ರಧಾನಿ ಮೋದಿ ಮಕ್ಕಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು. ಪರೀಕ್ಷೆ ಬರೆಯುವಾಗ ಕಠಿಣ ಪ್ರಶ್ನೆಗಳಿಗೆ ಆರಂಭದಲ್ಲಿ ಉತ್ತರಿಸಿ, ನಿತ್ಯ ನಾನು ಸಹ ಕಠಿಣ ನಿರ್ಧಾರಗಳೊಂದಿಗೆ ದಿನ ಆರಂಭಿಸುತ್ತೇನೆ ಎಂದರು. ಜೀವನ ಎನ್ನುವುದು ತುಂಬಾ ದೊಡ್ಡದು. ಅದರಲ್ಲಿ ಪರೀಕ್ಷೆ ತುಂಬಾ ಚಿಕ್ಕ ಭಾಗ ಎಂದಿರುವ ನಮೋ, ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅವರಲ್ಲಿ ಯಾವುದೇ ಕಾರಣಕ್ಕೂ ಹೆದರಿಕೆ ತುಂಬಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ನಕ್ಸಲ್​ ದಾಳಿ: ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆಂದ ಬರಹಗಾರ್ತಿ ಬಂಧನ

ಉತ್ತಮ ಪುಸ್ತಕಗಳು, ಸಿನಿಮಾ ಹಾಗೂ ಉತ್ತಮ ಕಥೆಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಿ ಎಂದು ಹೇಳಿರುವ ನಮೋ, ಪರೀಕ್ಷೆಯಲ್ಲಿ ವಿಫಲವಾದರೆ ಅದು ಜೀವನದ ಸೋಲು ಅಲ್ಲ ಎಂದು ಮೋದಿ ಕಿವಿಮಾತು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಒತ್ತಡ ಮುಕ್ತ ಪರೀಕ್ಷೆಗಳಲ್ಲಿ ಭಾಗಿಯಾಗುವಂತೆ ಪಾಲಕರು ಹಾಗೂ ಶಿಕ್ಷಕರು ಉತ್ತೇಜನ ನೀಡಬೇಕು ಎಂದಿರುವ ನಮೋ, ಪರೀಕ್ಷೆ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುವುದು ಬಿಡಬೇಕು. ಇದೇ ಜೀವನದ ಕೊನೆ ಪರೀಕ್ಷೆ ಅಲ್ಲ ಎಂದರು.

ಅಭ್ಯಾಸ ಮಾಡಲು ಎರಡು ಗಂಟೆ ಇದ್ದರೆ ಒಂದೇ ವಿಷಯ ಓದುವ ಬದಲು ಪ್ರತಿಯೊಂದು ವಿಷಯ ಓದಿ. ಆರಂಭದಲ್ಲಿ ಕಷ್ಟಕರವಾದ ಪ್ರಶ್ನೆ ತೆಗೆದುಕೊಳ್ಳಿ. ತದನಂತರ ಸರಳ ಹಾಗೂ ಸುಲಭ ಪ್ರಶ್ನೆಗಳಿಗೆ ಉತ್ತರಿಸಬಹುದು. ನಾನು ಬೆಳಗ್ಗೆಯಿಂದ ಕಠಿಣ ಕೆಲಸಗಳ ಜೊತೆ ದಿನ ಪ್ರಾರಂಭಿಸುತ್ತೇನೆ ಎಂದರು. ಈ ಸಂವಾದದಲ್ಲಿ ಕರ್ನಾಟಕದ ಕುಂದಾಪುರದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸೇರಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.