ಅಹಮದಾಬಾದ್: ಪ್ರಧಾನ ಮಂತ್ರಿ ನರೇಂದ್ರ ಇವತ್ತು ಪವಾಗಢ್ನಲ್ಲಿರುವ ಮಹಾಕಾಳಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಜೀರ್ಣೋದ್ಧಾರಗೊಳಿಸಲಾದ ಮಹಾಕಾಳಿ ಮಂದಿರದ ನೂತನ ಕಟ್ಟಡವನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು. ಮಹಾಕಾಳಿ ದೇವಸ್ಥಾನದ ಮೇಲೆ ನಿರ್ಮಿಸಲಾಗಿರುವ ಬಂಗಾರ ಲೇಪನದ ಧ್ವಜ ಸ್ತಂಭದಲ್ಲಿ ಬಾವುಟ ಹಾರಾಟಕ್ಕೆ ಪ್ರಧಾನಿ ಚಾಲನೆ ನೀಡಿದರು.
ಪವಾಗಢ್ ನಲ್ಲಿರುವ ಈ ದೇವಸ್ಥಾನವು ಅತ್ಯಂತ ಪುರಾತನ ದೇವಸ್ಥಾನಗಳಲ್ಲೊಂದಾಗಿದೆ. ದೇವಸ್ಥಾನದ ಪ್ರಥಮ ಹಂತದ ಕಟ್ಟಡವನ್ನು ಏಪ್ರಿಲ್ನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಮಹಾಕಾಳಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಪ್ರತಿದಿನ ಆಗಮಿಸುತ್ತಾರೆ. 2017 ರಲ್ಲಿ ದೇವಸ್ಥಾನದ ಮರು ನಿರ್ಮಾಣಕ್ಕೆ ಪ್ರಧಾನಿ ಮೋದಿ ಅಡಿಗಲ್ಲು ಪೂಜೆ ನೆರವೇರಿಸಿದ್ದರು.