ನವದೆಹಲಿ: ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ಕೊರೊನಾ ವಿರುದ್ಧದ ದೇಶೀಯ ಹೋರಾಟದ ಜೊತೆಗೆ ವಿಶ್ವದ ಅಗತ್ಯತೆಗಳನ್ನು ನೋಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಫಿನ್ಲಾಂಡ್ ಪ್ರಧಾನಿ ಸನ್ನಾ ಮರಿನ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಹೇಳಿದರು.
ಭಾರತದಲ್ಲಿ ತಯಾರಾದ 58 ದಶಲಕ್ಷಕ್ಕೂ ಹೆಚ್ಚಿನ ಕೊರೊನಾ ಲಸಿಕೆ ಇತ್ತೀಚಿನ ದಿನಗಳಲ್ಲಿ ಸುಮಾರು 70 ದೇಶಗಳನ್ನು ತಲುಪಿದೆ. ಭಾರತ ಮತ್ತು ಫಿನ್ಲ್ಯಾಂಡ್ ಎರಡೂ ರಾಷ್ಟ್ರಗಳು ಪಾರದರ್ಶಕ, ಮಾನವೀಯ ಮತ್ತು ಪ್ರಜಾಪ್ರಭುತ್ವದ ಜಾಗತಿಕ ಕ್ರಮವನ್ನು ನಂಬಿವೆ. ತಂತ್ರಜ್ಞಾನ, ನಾವೀನ್ಯತೆ, ಶುದ್ಧ ವಿದ್ಯುತ್ ಶಕ್ತಿ, ಪರಿಸರ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಉಭಯ ದೇಶಗಳು ಬಲವಾದ ಸಹಕಾರವನ್ನು ಹೊಂದಿವೆ ಎಂದು ಕೊಂಡಾಡಿದರು.
ತಮ್ಮ ಆರಂಭಿಕ ನುಡಿಗಳಲ್ಲಿ, ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ (ಸಿಡಿಆರ್ಐ) ಗೆ ಸೇರಲು ಫಿನ್ಲ್ಯಾಂಡನ್ನು ಮೋದಿ ಒತ್ತಾಯಿಸಿದರು.