ETV Bharat / bharat

ರಾಷ್ಟ್ರೀಯ ವಿಜ್ಞಾನ ದಿನ: ವಿಜ್ಞಾನಿಗಳು, ವಿಜ್ಞಾನ ಉತ್ಸಾಹಿಗಳಿಗೆ ಶುಭಕೋರಿದ ಮೋದಿ

author img

By

Published : Feb 28, 2022, 3:45 PM IST

ಭಾರತೀಯ ಭೌತಶಾಸ್ತ್ರಜ್ಞ ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾದ 'ರಾಮನ್ ಪರಿಣಾಮ'ದ ಆವಿಷ್ಕಾರದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

ವಿಜ್ಞಾನಿಗಳು, ವಿಜ್ಞಾನ ಉತ್ಸಾಹಿಗಳಿಗೆ ಶುಭಕೋರಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಜ್ಞಾನ ದಿನದಂದು ವಿಜ್ಞಾನಿಗಳು ಮತ್ತು ವಿಜ್ಞಾನ ಉತ್ಸಾಹಿಗಳಿಗೆ ಶುಭಾಶಯ ಕೋರಿದ್ದು, ಮಾನವ ಪ್ರಗತಿಗೆ ವಿಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಲು ಕರೆ ನೀಡಿದರು. ಭಾರತೀಯ ಭೌತಶಾಸ್ತ್ರಜ್ಞ ಸಿ.ವಿ.ರಾಮನ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾದ 'ರಾಮನ್ ಪರಿಣಾಮ'ದ ಆವಿಷ್ಕಾರದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಎರಡು ಪ್ರತ್ಯೇಕ ಅಪಘಾತ : ಮೂವರು ವಿದ್ಯಾರ್ಥಿಗಳು ಸೇರಿ ಐವರ ದುರ್ಮರಣ

ಎಲ್ಲ ವಿಜ್ಞಾನಿಗಳು ಮತ್ತು ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ವೈಜ್ಞಾನಿಕ ಜವಾಬ್ದಾರಿಯನ್ನು ಪೂರೈಸಲು ಮತ್ತು ಮಾನವ ಪ್ರಗತಿಗೆ ವಿಜ್ಞಾನದ ಶಕ್ತಿ ಬಳಸಿಕೊಳ್ಳುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸೋಣ ಎಂದು ಹೇಳಿದ್ದಾರೆ.

  • National Science Day greetings to all scientists and science enthusiasts. Let us reaffirm our commitment towards fulfilling our collective scientific responsibility and leveraging the power of science for human progress.

    Here is what I had said during #MannKiBaat yesterday. pic.twitter.com/gEM2yFUSJI

    — Narendra Modi (@narendramodi) February 28, 2022 " class="align-text-top noRightClick twitterSection" data=" ">

ಭಾನುವಾರದ 'ಮನ್ ಕಿ ಬಾತ್' ಕಾರ್ಯಕ್ರಮದ 'ಕ್ಲಿಪ್' ಅನ್ನು ಸಹ ಪ್ರಧಾನಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಕುಟುಂಬಗಳು ತಮ್ಮ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಶ್ರಮಿಸಬೇಕು ಎಂದು ಅದರಲ್ಲಿ ಅವರು ಮನವಿ ಮಾಡಿದ್ದಾರೆ.

ಭಾರತದ ಅತ್ಯಂತ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರು ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಸರ್ ಚಂದ್ರಶೇಖರ ವೆಂಕಟ ರಾಮನ್ ಅವರನ್ನು ಸಿ ವಿ ರಾಮನ್ ಎಂದು ಕರೆಯಲಾಗುತ್ತದೆ ಸಿವಿ ರಾಮನ್ ಅವರು ನವೆಂಬರ್ 7, 1888 ರಂದು ಜನಿಸಿದರು ಮತ್ತು 1970 ರಲ್ಲಿ ನಿಧನರಾದರು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಉಪನ್ಯಾಸಕರಾಗಿದ್ದರು.

ರಾಷ್ಟ್ರೀಯ ವಿಜ್ಞಾನ ದಿನವನ್ನು ಏಕೆ, ಯಾವಾಗ ಆಚರಿಸಲಾಗುತ್ತದೆ: ರಾಷ್ಟ್ರೀಯ ವಿಜ್ಞಾನ ದಿನದ ಉದ್ದೇಶ ವಿಜ್ಞಾನದ ಮಹತ್ವವನ್ನು ತಿಳಿಸುವುದು ಮತ್ತು ಅದರ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. 1986 ರಲ್ಲಿ, ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಿಕಲ್ ಕಮ್ಯುನಿಕೇಷನ್ (NCSTC) ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಘೋಷಿಸಲು ಭಾರತ ಸರ್ಕಾರವನ್ನು ಒತ್ತಾಯಿಸಿತು. ಅದರ ನಂತರ ಸರ್ಕಾರವು ಅವರ ಮನವಿಯನ್ನು ಸ್ವೀಕರಿಸಿತು ಮತ್ತು ಆ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಘೋಷಿಸಿತು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.