ನವದೆಹಲಿ: ಮಧ್ಯಪ್ರದೇಶದಲ್ಲಿ ಸ್ವಮಿತ್ವ ಯೋಜನೆಯಡಿ 1,71,000 ಫಲಾನುಭವಿಗಳಿಗೆ ಇ-ಪ್ರಾಪರ್ಟಿ ಕಾರ್ಡ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದರು. ಬಳಿಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಸ್ವಮಿತ್ವ ಎಂಬುದು ಪಂಚಾಯತಿ ರಾಜ್ ಸಚಿವಾಲಯದ ಕೇಂದ್ರ ವಲಯ ಯೋಜನೆಯಾಗಿದ್ದು, ಇದು ಗ್ರಾಮೀಣ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ಆಸ್ತಿ ಹಕ್ಕುಗಳನ್ನು ಒದಗಿಸುವ ಗುರಿ ಹೊಂದಿದೆ. ಯೋಜನೆಯು ನಗರ ಪ್ರದೇಶಗಳಂತೆ ಹಳ್ಳಿ ಜನರು ಸಾಲ ಮತ್ತು ಇತರ ಹಣಕಾಸಿನ ಪ್ರಯೋಜನೆಗಳನ್ನು ಪಡೆಯಲು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಇದರಿಂದ ಅನುಕೂಲವಾಗಿದೆ.
ಸರ್ವೇಯಿಂಗ್ ಡ್ರೋನ್ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರ ಭೂಮಿಯನ್ನು ಗುರುತಿಸುವ ಗುರಿ ಹೊಂದಿದೆ. ಈ ಯೋಜನೆಯಿಂದ ದೇಶದಲ್ಲಿ ಡ್ರೋನ್ ತಯಾರಿಕೆಯ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ. ಸಮಾರಂಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಪಸ್ಥಿತರಿದ್ದರು.