ETV Bharat / bharat

ಸಿಬಿಐ ನ್ಯಾಯ, ಸತ್ಯದ ಬ್ರ್ಯಾಂಡ್​.. ಸಂಸ್ಥೆಯಿಂದ ತನಿಖೆಗಾಗಿ ಜನಾಗ್ರಹ: ಪ್ರಧಾನಿ ಮೋದಿ - ಸಿಬಿಐ ವಜ್ರ ಮಹೋತ್ಸವ ಕಾರ್ಯಕ್ರಮ

ಕೇಂದ್ರೀಯ ತನಿಖಾ ದಳ(ಸಿಬಿಐ)ದ 60 ನೇ ವರ್ಷಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದರು. ಸ್ವಾಯತ್ತ ಸಂಸ್ಥೆಯ ಕಾರ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾತನಾಡಿದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Apr 3, 2023, 4:43 PM IST

Updated : Apr 3, 2023, 5:23 PM IST

ನವದೆಹಲಿ: "ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯ ಮತ್ತು ಸತ್ಯದ ಪ್ರತೀಕವಾಗಿ ಹೊರಹೊಮ್ಮಿದೆ. ಸಾಮಾನ್ಯ ನಾಗರಿಕರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಹೀಗಾಗಿ ಈ ಸ್ವಾಯತ್ತ ಸಂಸ್ಥೆಯಿಂದಲೇ ತನಿಖೆ ನಡೆಸಬೇಕು ಎಂದು ಜನರು ಪ್ರತಿಭಟನೆ ನಡೆಸುತ್ತಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸಂಸ್ಥೆಯ ವಜ್ರ ಮಹೋತ್ಸವ(60ನೇ ವರ್ಷಾಚರಣೆ) ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "1963 ರ ಏಪ್ರಿಲ್ 1 ರಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸಿಬಿಐ ಅನ್ನು ಸ್ಥಾಪಿಸಲಾಯಿತು. ಕೇಂದ್ರೀಯ ಸಂಸ್ಥೆಯ ವ್ಯಾಪ್ತಿ ಹಲವು ಪಟ್ಟು ಹೆಚ್ಚಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸಿಬಿಐನ ಮುಖ್ಯ ಜವಾಬ್ದಾರಿಯಾಗಿದೆ" ಎಂದು ಹೇಳಿದರು.

"ಸಿಬಿಐ ಸಾಮಾನ್ಯ ನಾಗರಿಕರಿಗೆ ನಂಬಿಕೆ ಮತ್ತು ಭರವಸೆ ಮೂಡಿಸಿದೆ. ಇದು ಸತ್ಯ ಮತ್ತು ನ್ಯಾಯದ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವುದರಿಂದ ಅದರಿಂದದಲೇ ತನಿಖೆಗೆ ಜನರು ಆಗ್ರಹಿಸುತ್ತಿದ್ದಾರೆ. ಸಿಬಿಐನಂತಹ ವೃತ್ತಿಪರ ಮತ್ತು ದಕ್ಷ ಸಂಸ್ಥೆಗಳಿಲ್ಲದೆ ದೇಶ ಮುಂದುವರಿಯಲು ಸಾಧ್ಯವಿಲ್ಲ. ಬ್ಯಾಂಕ್ ವಂಚನೆಗಳಿಂದ ಹಿಡಿದು ಪ್ರಾಣಿಗಳಿಗೆ ಸಂಬಂಧಿತ ಪ್ರಕರಣಗಳವರೆಗೂ ಸಿಬಿಐನ ಕಾರ್ಯ ವ್ಯಾಪ್ತಿಸಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸ್ವಾಯತ್ತ ಸಂಸ್ಥೆಯ ಮುಖ್ಯ ಹೊಣೆಗಾರಿಕೆಯಾಗಿದೆ" ಎಂದು ಹೇಳಿದರು.

ಭ್ರಷ್ಟಾಚಾರ ಮಾಡಲು ಪೈಪೋಟಿ: "ಕಾಂಗ್ರೆಸ್​ ನೇತೃತ್ವದ ಹಿಂದಿನ ಕೇಂದ್ರ ಸರ್ಕಾರವನ್ನು ಟೀಕಿಸಿದ ಪ್ರಧಾನಿ ಮೋದಿ, 2014 ರ ಹಿಂದಿನ ಅವಧಿಯಲ್ಲಿ ದೇಶದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಭ್ರಷ್ಟತೆಯಿಂದ ಕೂಡಿತ್ತು. "ಹತ್ತು ವರ್ಷಗಳ ಹಿಂದೆ ಭ್ರಷ್ಟಾಚಾರ ಮಾಡಲೇ ಪೈಪೋಟಿ ನಡೆಯುತ್ತಿತ್ತು. ದೊಡ್ಡ ದೊಡ್ಡ ಹಗರಣಗಳು ನಡೆದು ಹೋದವು. ಆದರೆ, ಆರೋಪಿಗಳಿಗೆ ಮಾತ್ರ ಹೆದರಿಕೆ ಇರಲಿಲ್ಲ. ಕಾರಣ ವ್ಯವಸ್ಥೆಯು ಅವರ ಬೆಂಬಲಕ್ಕೆ ನಿಂತಿತ್ತು. ಆದರೆ, 2014 ರ ನಂತರ ಬಿಜೆಪಿ ನೇತೃತ್ವದ ಸರ್ಕಾರ ಇದರ ವಿರುದ್ಧ ಸಮರ ಸಾರಿತು. ಭ್ರಷ್ಟಾಚಾರ ಮತ್ತು ಕಪ್ಪುಹಣದ ಬೇರುಗಳನ್ನೇ ಕಿತ್ತುಹಾಕಿತು" ಎಂದು ಹೊಗಳಿದರು.

"ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಅಪನಂಬಿಕೆ ಮತ್ತು ನೀತಿ ನಿಯಮಗಳಲ್ಲಿ ತಾರತಮ್ಯ ಭಾವನೆ ಇತ್ತು. ಇದು 2014 ರ ನಂತರ ಬದಲಾಗಿದೆ. ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲಾಗಿದೆ. ಇದನ್ನು ಬಲಪಡಿಸುವುದು ಸರ್ಕಾರದ ಪ್ರಾಥಮಿಕ ಗುರಿಯಾಗಿದೆ" ಎಂದರು.

"ಕಳೆದ 6 ದಶಕಗಳಲ್ಲಿ ಸಿಬಿಐ ಬಹು ಆಯಾಮದ ಮತ್ತು ಬಹು ಶಿಸ್ತಿನ ತನಿಖಾ ಸಂಸ್ಥೆಯಾಗಿ ಮನ್ನಣೆ ಗಳಿಸಿದೆ. ಇಂದು ಸಿಬಿಐನ ಕಾರ್ಯವ್ಯಾಪ್ತಿಯೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಿದೆ. ಮೆಟ್ರೋ ನಗರಗಳಿಂದ ಅರಣ್ಯಗಳವರೆಗೆ, ಬ್ಯಾಂಕ್‌ಗಳಿಂದ ವನ್ಯಜೀವಿ ರಕ್ಷಣೆಯವರೆಗೆ ಸಿಬಿಐ ಪ್ರತಿಯೊಂದು ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಸೈಬರ್ ಅಪರಾಧಗಳನ್ನೂ ಸಂಸ್ಥೆಯು ಮಟ್ಟ ಹಾಕುತ್ತಿದೆ" ಎಂದು ಹೇಳಿದರು.

ಎಷ್ಟೇ ದೊಡ್ಡವರಿದ್ದರೂ ಬಿಡಬೇಡಿ: "ಸಿಬಿಐ ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೋ ಅವರು ತುಂಬಾ ಶಕ್ತಿಶಾಲಿಗಳು ಎಂಬ ವಿಷಯ ನನಗೆ ತಿಳಿದಿದೆ. ಅವರೆಲ್ಲ ವರ್ಷಗಳಿಂದ ಸರ್ಕಾರ ಮತ್ತು ವ್ಯವಸ್ಥೆಯ ಭಾಗವಾಗಿದ್ದಾರೆ. ಇಂದಿಗೂ ಅವರು ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾರೆ. ಆದರೆ, ನಿಮ್ಮ ಕೆಲಸದ ಮೇಲೆ ಗಮನವಿರಲಿ. ಯಾವುದೇ ಭ್ರಷ್ಟರನ್ನು ಬಿಡಬೇಡಿ'' ಎಂದು ಪ್ರಧಾನಿ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, ಕರ್ತವ್ಯದಲ್ಲಿನ ವಿಶಿಷ್ಟ ಸೇವೆಗಾಗಿ ಸಿಬಿಐನ 18 ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪ್ರದಾನ ಮಾಡಿದರು. ಮೂವರು ಅತ್ಯುತ್ತಮ ತನಿಖಾ ಅಧಿಕಾರಿಗಳಿಗೆ ಚಿನ್ನದ ಪದಕವನ್ನು ಹಸ್ತಾಂತರಿಸಿದರು. ಅಲ್ಲದೇ, ಶಿಲ್ಲಾಂಗ್, ಪುಣೆ ಮತ್ತು ನಾಗ್ಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಸಿಬಿಐ ಕಚೇರಿ ಸಂಕೀರ್ಣಗಳನ್ನು ಇದೇ ವೇಳೆ ಪ್ರಧಾನಿಗಳು ಉದ್ಘಾಟಿಸಿದರು. ಸಿಬಿಐನ ವಜ್ರ ಮಹೋತ್ಸವದ ನಿಮಿತ್ತ ಹೊರತರಲಾದ ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಸಿಬಿಐನ ಟ್ವಿಟರ್​ ಖಾತೆಯನ್ನೂ ಇದೇ ವೇಳೆ ಆರಂಭಿಸಲಾಯಿತು.

ಓದಿ: ಮಾನಹಾನಿ ಕೇಸ್​.. ಶಿಕ್ಷೆ ಪ್ರಶ್ನಿಸಿ ಸೂರತ್​ ಕೋರ್ಟ್​ಗೆ ರಾಹುಲ್​ ಗಾಂಧಿ ಮೇಲ್ಮನವಿ .. ಏಪ್ರಿಲ್ ​13ರವರೆಗೆ ಜಾಮೀನು ವಿಸ್ತರಣೆ

Last Updated : Apr 3, 2023, 5:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.