ETV Bharat / bharat

ISSF ಪ್ರೆಸಿಡೆಂಟ್ಸ್ ಕಪ್‌ ಟೂರ್ನಿ: ಪದಕ ಗೆದ್ದ ಶೂಟರ್‌ಗಳಿಗೆ ಮೋದಿ ಅಭಿನಂದನೆ - International Shooting Sport Federation President's Cup

ಪೋಲಿಷ್‌ನ ವ್ರೊಕ್ಲಾ ನಗರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ಅಧ್ಯಕ್ಷರ ಕಪ್‌ನಲ್ಲಿ ಪದಕ ಗೆದ್ದರುವ ಭಾರತೀಯ ಶೂಟರ್‌ಗಳನ್ನು ಪ್ರಧಾನಿ ಮೋದಿ ಟ್ವೀಟ್‌ ಮೂಲಕ ಅಭಿನಂದಿಸಿದ್ದಾರೆ.

PM hails Indian shooters on winning medals at ISSF President's Cup
ISSF ಪ್ರೆಸಿಡೆಂಟ್ಸ್ ಕಪ್‌ ಟೂರ್ನಿಯಲ್ಲಿ ಪದಕ ಗೆದ್ದ ಭಾರತೀಯ ಶೂಟರ್‌ಗಳಿಗೆ ಪ್ರಧಾನಿ ಮೋದಿ ಅಭಿನಂದನೆ
author img

By

Published : Nov 10, 2021, 3:03 PM IST

ನವದೆಹಲಿ: ಪೋಲೆಂಡ್‌ನ ಪೋಲಿಷ್‌ನ ವ್ರೊಕ್ಲಾ ನಗರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಐಎಸ್‌ಎಸ್‌ಎಫ್) ಅಧ್ಯಕ್ಷರ ಕಪ್‌ನಲ್ಲಿ ಪದಕ ಗೆದ್ದ ಭಾರತೀಯ ಶೂಟರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಭಿನಂದಿಸಿದರು.

ಮನುಭಾಕರ್, ರಾಹಿ ಸರ್ನೋಬತ್, ಸೌರಭ್ ಚೌಧರಿ ಮತ್ತು ಅಭಿಷೇಕ್ ವರ್ಮಾ ಅವರು ಅಧ್ಯಕ್ಷರ ಕಪ್‌ನಲ್ಲಿ ಪದಕ ಗೆಲುವಿನ ಸಾಧನೆ ಮಾಡಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ಪೋಲೆಂಡ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ಶೂಟಿಂಗ್‌ ಪ್ರೆಸಿಡೆಂಟ್ಸ್ ಕಪ್‌ನಲ್ಲಿ ಪದಕ ಗೆದ್ದಿರುವ ಮನುಭಾಕರ್‌, ರಾಹಿ ಸರ್ನೋಬತ್‌, ಸೌರಭ್‌ ಚೌಧರಿ, ಹಾಗೂ ಅಭಿಷೇಖ್‌ ವರ್ಮಾ ಅವರಿಗೆ ಅಭಿನಂದನೆಗಳು. ದೇಶದ ಜನರು ತಮ್ಮ ಅದ್ಬುತ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತಾರೆ. ಭವಿಷ್ಯದ ಅಥ್ಲೀಟ್‌ಗಳಿಗೆ ಶುಭಾಶಯಗಳು ಎಂದಿದ್ದಾರೆ.

ನಿನ್ನೆಯಷ್ಟೇ ರಾಹಿ ಸರ್ನೋಬಾತ್ ಅವರು ಅಧ್ಯಕ್ಷರ ಕಪ್‌ನಲ್ಲಿ ಮಹಿಳೆಯರ 25 ಮೀಟರ್ ಪಿಸ್ತೂಲ್‌ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದರು. 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಟರ್ಕಿಯ ಓಜ್ಗುರ್ ವರ್ಲಿಕ್ ಜೊತೆಗೂಡಿ ಅಂತಿಮ ದಿನದಂದು ಮನು ಭಾಕರ್ ಅವರು ಎರಡನೇ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ವರ್ಷಾಂತ್ಯದ ಈವೆಂಟ್‌ನಲ್ಲಿ ಭಾರತೀಯರು ಒಟ್ಟು ಐದು ಪದಕಗಳನ್ನು ಗೆದ್ದಾರೆ.

ಈ ಹಿಂದೆ ಮನು ಇರಾನ್‌ನ ಜಾವದ್ ಫೊರೊಘಿ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಪಂದ್ಯದಲ್ಲಿ ಪ್ರಶಸ್ತಿ ಜಯಿಸಿದ್ದರು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿ ವೈಯಕ್ತಿಕ ಬೆಳ್ಳಿ ಹಾಗೂ ಅಭಿಷೇಕ್ ವರ್ಮಾ ಕಂಚಿನ ಪದಕ ಗೆದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.