ಅಸ್ಸೋಂ: ಇಲ್ಲಿನ ದಿಬ್ರುಗಢದ ಭೋಗಾಲಿ ಪಥರ್ ಗ್ರಾಮದಲ್ಲಿ ನಡೆಸಲಾಗುತ್ತಿರುವ ಫಾರ್ಮ್ನಲ್ಲಿ ಹಂದಿಗಳಿಗೆ ಆಫ್ರಿಕನ್ ಜ್ವರ ಕಾಣಿಸಿಕೊಂಡಿದ್ದು, ಎಲ್ಲ ಹಂದಿಗಳನ್ನು ಹರಣ ಮಾಡಿ ಹೂತು ಹಾಕಲಾಗಿದೆ. ಅಲ್ಲದೇ, ಸೋಂಕು ಕಾಣಿಸಿಕೊಂಡ 1 ಕಿಮೀವರೆಗೂ ನಿಷೇಧಿತ ಪ್ರದೇಶವಾಗಿ ಘೋಷಿಸಲಾಗಿದೆ.
ರೈತರೊಬ್ಬರು ನಡೆಸುತ್ತಿರುವ ಫಾರ್ಮ್ನಲ್ಲಿ ಹಂದಿ ಅಸ್ವಸ್ಥವಾಗಿದ್ದು, ಪರೀಕ್ಷೆಯ ವೇಳೆ ಆಫ್ರಿಕನ್ ಜ್ವರ ಬಂದಿರುವುದು ಗೊತ್ತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಂದಿಯನ್ನು ಕೊಂದು ಹೂಳಲಾಗಿದೆ. ಆ ಪ್ರದೇಶವನ್ನು ಸ್ವಚ್ಛಗೊಳಿಸಿ, ಒಂದು ಕಿಮೀ ವ್ಯಾಪ್ತಿಯಲ್ಲಿ ಸೋಂಕಿತ ಪ್ರದೇಶವಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪಶು ಸಂಗೋಪನೆ ಮತ್ತು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮ್ಯಾನ್ಮಾರ್, ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಹಂದಿಗಳಿಂದ ಆಫ್ರಿಕನ್ ಜ್ವರ ಬಂದಿರಬಹುದು ಎಂದು ಹೇಳಲಾಗಿದೆ. ಇದು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರದು, ಅಲ್ಲದೇ ಹಂದಿಗಳಿಂದ ಮನುಷ್ಯರಿಗೆ ಜ್ವರ ಹರಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಜಪಾನೀಸ್ ಎನ್ಸೆಫಾಲಿಟಿಸ್‌ಗೆ ಮತ್ತೆ 4 ಸಾವು: ರಾಜ್ಯದಲ್ಲಿ ಈ ರೋಗಕ್ಕೆ ಮತ್ತೆ ನಾಲ್ವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 27ಕ್ಕೇರಿದೆ ಎಂದು ಅಸ್ಸೋಂ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಜಪಾನೀಸ್ ಎನ್ಸೆಫಾಲಿಟಿಸ್ ಎಂಬುದು ಮೆದುಳು ಸಂಬಂಧಿ ವೈರಸ್ ಸೋಂಕು ಆಗಿದ್ದು ಈ ಖಾಯಿಲೆಯು ಮನುಷ್ಯನಿಗೆ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಈ ರೋಗವು ಆಗ್ನೇಯ ಏಷ್ಯಾ ದೇಶಗಳು, ಫೆಸಿಫಿಕ್ ದ್ವೀಪಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಚ್ಚಾಗಿ ಇದು ಹಂದಿಗಳು ಮತ್ತು ಹಕ್ಕಿಗಳನ್ನು ಕಂಡುಬರುತ್ತಿದ್ದು, ಸೊಳ್ಳೆಗಳು ಅವುಗಳಿಗೆ ಕಚ್ಚುವುದರಿಂದ ರೋಗ ಜನರಿಗೂ ಹರಡುತ್ತದೆ.
ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳುವಾಗ ಹೆಚ್ಚಿದ ನೀರು, ನಡುನೀರಲ್ಲಿ ಸಿಲುಕಿದ ವಿದ್ಯಾರ್ಥಿಗಳು ... ವಿಡಿಯೋ