ಜಮ್ಮು: ಜಮ್ಮುವಿನ ಕನಾಚಕ್ ಪ್ರದೇಶದಲ್ಲಿ 'ಪಿಐಎ' ಎಂದು ಬರೆದಿರುವ ವಿಮಾನ ಆಕಾರದ ಬಲೂನ್ ಪತ್ತೆಯಾಗಿದ್ದು, ಬಲೂನ್ ಅನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಸ್ಥಳೀಯರು ಬಲೂನ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರು ಸ್ಥಳಕ್ಕೆ ತಲುಪಿ ಅದನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ: ಪಿಐಎ ಎಂದು ಬರೆದಿರುವ ಮತ್ತೊಂದು ಬಲೂನ್ ಜಮ್ಮುವಿನಲ್ಲಿ ಪತ್ತೆ..!
ಮಾರ್ಚ್ 10 ಮತ್ತು 16 ರಂದು ಹಿರಾನಗರ್ ಸೆಕ್ಟರ್‌ನ ಸೋತ್ರಾ ಚಕ್ ಗ್ರಾಮ ಮತ್ತು ಜಮ್ಮುವಿನ ಬಲ್ವಾಲ್ ಪ್ರದೇಶದಲ್ಲಿ ಕ್ರಮವಾಗಿ ಇದೇ ರೀತಿಯ ಬಲೂನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದು ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ವಿಮಾನವನ್ನು ಹೋಲುತ್ತದೆ.