ETV Bharat / bharat

ಸಂಜೆ 5 ಗಂಟೆಯವರೆಗೆ ಬಂಗಾಳದಲ್ಲಿ ಶೇ.72.25, ಅಸ್ಸೋಂನಲ್ಲಿ ಶೇ.67.60ರಷ್ಟು ಮತದಾನ - West Bengal election

ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ 2ನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಬಂಗಾಳದಲ್ಲಿ ಶೇ.72.25, ಅಸ್ಸೋಂನಲ್ಲಿ ಶೇ.67.60ರಷ್ಟು ಮತದಾನವಾಗಿದೆ.

phase-2-polls-voting-started-in-west-bengal-and-assam
ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ 2ನೇ ಹಂತದ ಮತದಾನ
author img

By

Published : Apr 1, 2021, 7:00 AM IST

Updated : Apr 1, 2021, 5:26 PM IST

ಕೋಲ್ಕತ್ತಾ/ಗುವಾಹಟಿ: ಪಂಚರಾಜ್ಯ ವಿಧಾನಸಭೆ ಚುನಾವಣೆಯ ಭಾಗವಾದ ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯವರೆಗೆ ಬಂಗಾಳದಲ್ಲಿ ಶೇ.72.25, ಅಸ್ಸೋಂನಲ್ಲಿ ಶೇ.67.60ರಷ್ಟು ಮತದಾನವಾಗಿದೆ.

Phase-2 polls voting started in West Bengal and Assam  ಪಂಚರಾಜ್ಯ ವಿಧಾನಸಭೆ ಚುನಾವಣೆ  ಪಶ್ಚಿಮ ಬಂಗಾಳ ಚುನಾವಣೆ  ಅಸ್ಸೋಂನಲ್ಲಿ ಮತದಾನ  West Bengal election  Assam election
ಪಶ್ಚಿಮ ಬಂಗಾಳ 2ನೇ ಹಂತದ ಮತದಾನ

ಪಶ್ಚಿಮ ಬಂಗಾಳದಲ್ಲಿ ಈ ಹಂತದಲ್ಲಿ 152 ಪುರುಷರು ಮತ್ತು 19 ಮಹಿಳೆಯರು ಸೇರಿ 30 ಕ್ಷೇತ್ರಗಳ 171 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 76,07,667 ಮತದಾರರು 8,332 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸುತ್ತಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮ ಕ್ಷೇತ್ರವು ಎಲ್ಲರ ಗಮನ ಸೆಳೆದಿದ್ದು, ಬಿಜೆಪಿಯ ಸುವೆಂದು ಅಧಿಕಾರಿ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಮತದಾರರು ಮತಗಟ್ಟೆಗಳಲ್ಲಿ ಸಾಲಾಗಿ ನಿಂತು ಮತದಾನ ಕಾರ್ಯದಲ್ಲಿ ತೊಡಗಿದ್ದಾರೆ.

ಅಸ್ಸೋಂನಲ್ಲಿ 2ನೇ ಹಂತದ ಮತದಾನ

ಅಸ್ಸೋಂನಲ್ಲೂ ಕೂಡ 39 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 345 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 73,44,631 ಜನ ಮತ ಚಲಾಯಿಸಲಿದ್ದಾರೆ. ಅದರಲ್ಲಿ 37,34,537 ಮಂದಿ ಪುರುಷರು, 36,09,959 ಮಹಿಳೆಯರು ಮತ್ತು 135 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ. 13 ಜಿಲ್ಲೆಗಳ 39 ಕ್ಷೇತ್ರಗಳಲ್ಲಿ ಒಟ್ಟು 10,592 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಕೋವಿಡ್ ಮಾರ್ಗಸೂಚಿ ಅನುಸರಣೆ ಕಡ್ಡಾಯಗೊಳಿಸಲಾಗಿದೆ.

Last Updated : Apr 1, 2021, 5:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.