ಐಜ್ವಾಲ್(ಮಿಜೋರಾಂ): ಇಲ್ಲಿನ ತುಯಿರಿಯಾಲ್ ಗ್ರಾಮದಲ್ಲಿ ಪೆಟ್ರೋಲ್ ಟ್ಯಾಂಕರ್‌ವೊಂದು ಬೆಂಕಿ ತಗುಲಿ ಸ್ಫೋಟಗೊಂಡಿದ್ದು ನಾಲ್ವರು ಸಾವನ್ನಪ್ಪಿ, 18 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿಯಿಂದ ಐಜ್ವಾಲ್‌ನಿಂದ 18 ಕಿಲೋಮೀಟರ್ ದೂರದಲ್ಲಿ ಶನಿವಾರ ಸಂಜೆ ಘಟನೆ ಸಂಭವಿಸಿದೆ.
ಐಜ್ವಾಲ್‌ನಿಂದ ಚಂಫೈಗೆ ಹೋಗುತ್ತಿದ್ದ ಟ್ಯಾಂಕರ್ನಲ್ಲಿ ಇಂಧನ ಸೋರಿಕೆ ಆಗುತ್ತಿತ್ತು. ಸ್ಥಳೀಯರು ಲಾರಿಯಿಂದ ಪೆಟ್ರೋಲ್ ಸಂಗ್ರಹಿಸುವಾಗ ಬೆಂಕಿ ತಗುಲಿತು ಎಂದು ಹೇಳಲಾಗಿದೆ. ನಾಲ್ವರ ದೇಹ ಸುಟ್ಟು ಕರಕಲಾಗಿದೆ. ಐವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ: ರಸ್ತೆ ನಿರ್ಮಾಣದ ವೇಳೆ ಭೂಕುಸಿತ, 4 ಸಾವು, 6 ಮಂದಿ ಗಂಭೀರ