ETV Bharat / bharat

ಸತತ 2ನೇ ದಿನವೂ ತೈಲ ಬೆಲೆ ಏರಿಕೆ: ಬೆಂಗಳೂರಿನ ಪೆಟ್ರೋಲ್, ಡೀಸೆಲ್ ಹೊಸ ದರ ಚೆಕ್‌ ಮಾಡಿ.. - ಇಂಧನ ದರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗುರುವಾರ ದೇಶಾದ್ಯಂತ ಮತ್ತೆ ಏರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ತೈಲ ದರ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳಿ.

Petrol
Petrol
author img

By

Published : Oct 21, 2021, 8:53 AM IST

ನವದೆಹಲಿ: ಇಂದೂ ಕೂಡ ದೇಶಾದ್ಯಂತ ಇಂಧನ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್​​ ಹಾಗೂ ಡೀಸೆಲ್​ ಮೇಲೆ ತಲಾ 35 ಪೈಸೆಯಷ್ಟು ಹೆಚ್ಚಿಸಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಲೀಟರ್ ಪೆಟ್ರೋಲ್ ದರ 106.54 ರೂಪಾಯಿ ಹಾಗೂ ಡೀಸೆಲ್​ ದರ 95.27 ರೂಪಾಯಿ ಇದೆ. ಅಷ್ಟೇ ಅಲ್ಲದೆ, ವಿಮಾನಗಳಿಗೆ ಬಳಸುವ ಟರ್ಬೈನ್ ಇಂಧನ (ಎಟಿಎಫ್ ಅಥವಾ ಜೆಟ್ ಇಂಧನ) ಬೆಲೆಗಿಂತ ಪೆಟ್ರೋಲ್ ಈಗ ಶೇಕಡಾ 35 ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆ ಪ್ರತಿ ಲೀಟರ್‌ಗೆ 79 ಇದೆ.

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 112.44 ಕ್ಕೆ ಹಾಗೂ ಲೀಟರ್ ಡೀಸೆಲ್ 103.26 ರೂ. ಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 107.12 ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 98.38 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್​ಗೆ ಪೆಟ್ರೋಲ್​ಗೆ 103.61 ರೂ. ಇದ್ದು, ಲೀಟರ್ ಡೀಸೆಲ್ 99.59 ಕ್ಕೆ ಲಭ್ಯವಿದೆ.

ಇಂದಿನ ತೈಲ ದರದ ಮಾಹಿತಿ
ಇಂದಿನ ತೈಲ ದರದ ಮಾಹಿತಿ

ಬೆಂಗಳೂರಿನಲ್ಲಿ ಎಷ್ಟಿದೆ ತೈಲ ದರ:

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.05ಕ್ಕೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ದರ 101.12 ರೂ. ಗೆ ಏರಿಕೆಯಾಗಿದೆ. ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಕಚ್ಚಾ ತೈಲ ದರವು ಸಹ ಬ್ಯಾರೆಲ್‌ಗೆ 0.21 % ಏರಿಕೆಯಾಗಿದ್ದು, ಸದ್ಯಕ್ಕೆ 86.04 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.