ETV Bharat / bharat

ನಿಲ್ಲದ ತೈಲ ದರ ಏರಿಕೆ: ಯಾವ್ಯಾವ ರಾಜ್ಯಗಳಲ್ಲಿ ಎಷ್ಟಿಷ್ಟಿದೆ Petrol-Diesel ಬೆಲೆ? - ಪೆಟ್ರೋಲ್-ಡೀಸೆಲ್ ದರ

ದೇಶದಲ್ಲಿ ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿದ್ದು, ಬಿಗ್ ಶಾಕ್ ನೀಡುತ್ತಿವೆ. ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಲೀಟರ್​ಗೆ 100 ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದ್ದು, ಡೀಸೆಲ್​ ದರವೂ 90 ರೂಪಾಯಿ ದಾಟುತ್ತಿದೆ.

ನಿಲ್ಲದ ತೈಲ ದರ ಏರಿಕೆ
ನಿಲ್ಲದ ತೈಲ ದರ ಏರಿಕೆ
author img

By

Published : Jul 10, 2021, 8:24 AM IST

ನವದೆಹಲಿ: ಸದ್ಯಕ್ಕೆ ತೈಲ ದರ ಏರಿಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಇಂದು ಪ್ರತಿ ಲೀಟರ್​ ಪೆಟ್ರೋಲ್​ಗೆ 34 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್​ ದರ 28 ಪೈಸೆ ಏರಿಕೆಯಾಗಿದೆ. ಮುಂಬೈನಲ್ಲಿ ಲೀಟರ್​​ ಪೆಟ್ರೋಲ್​ಗೆ 38 ಪೈಸೆ ಹೆಚ್ಚಳವಾಗಿದ್ದು, 106 ರೂಪಾಯಿಯಾಗಿದೆ. ಡೀಸೆಲ್​ ದರ 32 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್​ಗೆ 97.5 ರಷ್ಟಾಯಿತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್​ ದರ 39 ಪೈಸೆ ಹೆಚ್ಚಳವಾಗಿದ್ದು, ಸದ್ಯ 100.95 ರೂಪಾಯಿಯಾಗಿದೆ. ಡೀಸೆಲ್ ಬೆಲೆ 32 ಪೈಸೆ ಹೆಚ್ಚಳವಾಗುವ ಮೂಲಕ ಇಂದು 89.92 ರೂಪಾಯಿಯಾಗಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 103.93 ರೂಪಾಯಿಯಷ್ಟಿದ್ದು, ಡೀಸೆಲ್ ದರ 95.26 ರೂಪಾಯಿಯಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ 18 ದಿನಗಳ ಕಾಲ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆ ನಿಲ್ಲಿಸಿದ್ದವು. ಬಳಿಕ ನಿರಂತರವಾಗಿ ತೈಲ ದರ ಏರಿಕೆಯಾಗುತ್ತಲೇ ಇದೆ.

ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿವೆ.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ, ಪಂಜಾಬ್, ಲಡಾಖ್, ಸಿಕ್ಕಿಮ್, ದೆಹಲಿಗಳಲ್ಲಿ ಪೆಟ್ರೋಲ್​ ದರ ಲೀಟರ್​ಗೆ 100 ರೂಪಾಯಿಗೂ ಅಧಿಕವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.